Aase ; ಡ್ಯೂಪ್ಲಿಕೇಟ್ ಚಿನ್ನದ ಬಗ್ಗೆ ಪ್ರಸ್ತಾಪ ಮಾಡಿದ ಸೂರ್ಯ, ಮಗನ ಮಾತು ಕೇಳಿ ರಂಗನಾಥ ಶಾಕ್ !

By ಪೂರ್ವ

ಲಕ್ಕಿ ಚಿನ್ನದ ಪದಕವನ್ನು ಸೂರ್ಯ ಹಾಗೂ ಮೀನಗೆ ಕೊಟ್ಟಿದ್ದೆ ತಡ ಶಾಂತಿ ಹಾಗೂ ಮನೋಜನಿಗೆ ಇನ್ನಿಲ್ಲದ ಕೋಪ ಬರುತ್ತದೆ. ಶಾಂತಿಗೆ ಬಹಳ ಬೇಸರವಾಗುತ್ತದೆ.ತನ್ನ ಅತ್ತೆ ಮನವೊಲಿಸಲು ತಾನು ಅದೆಷ್ಟು ಪ್ರಯತ್ನ ಪಟ್ಟಿದ್ದೇನೋ ನನಗೆ ಗೊತ್ತಿಲ್ಲ ಆದರೆ ಮೀನಾ ಮತ್ತು ಸೂರ್ಯ ಸುಮ್ಮನೆ ಅತ್ತೆಗೆ ಏನೋ ಸರ್ಪ್ರೈಸ್ ಕೊಟ್ಟು ಅವರಿಬ್ಬರೂ ಚಿನ್ನದ ಪದಕ ಗೆದ್ದುಬಿಟ್ಟರಲ್ಲ ಎಂದು ಬಹಳ ಅಸೂಯೆ ಪಟ್ಟುಕೊಂಡು ಕೋಪದಲ್ಲಿರುತ್ತಾಳೆ. ಸೂರ್ಯ ಗೆ ಲಕ್ಕಿ ಕೊಟ್ಟ ಗಿಫ್ಟ್ ನೋಡಿ ಬಹಳ ಖುಷಿಯಾಗುತ್ತದೆ.

ಲಕ್ಕಿ ತಾನು ಊರಿಗೆ ಹೋಗುತ್ತೇನೆ ಎಂದು ಎಲ್ಲರ ಜೊತೆಗೆ ಹೇಳುತ್ತಾಳೆ. ರಂಗನಾಥನಿಗೆ ಬೇಸರವಾದರೂ ಅಮ್ಮನ ಜೊತೆ ಖುಷಿಖುಷಿಯಾಗಿ ಮಾತುಗಳನ್ನ ಆಡುತ್ತಾನೆ. ಹಾಗೆಯೇ ಅಮ್ಮ ನನ್ನ ಜೊತೆ ನೀನು ಕಾಲ ಕಳೆಯುವುದೆಂದರೆ ನನಗೆ ತುಂಬಾ ಇಷ್ಟ ಬಾ ಅಲ್ಲೆಲ್ಲಾದರೂ ಹೋಗಿ ಕುಳಿತುಕೊಂಡು ಮಾತನಾಡೋಣ ಎಂದು ರಂಗನಾಥನ ತಾಯಿಯ ಬಳಿ ಹೇಳಿದಾಗ ಲಕ್ಕಿಗೆ ಬಹಳ ಖುಷಿಯಾಗುತ್ತದೆ. ರಂಗನಾಥನ ಜೊತೆ ಮಾತನಾಡಲು ಹೊರಗಡೆ ಹೋಗುತ್ತಾರೆ. ಶಾಂತಿ ಮನೋಜ ಮೀನಾ ಇವರೆಲ್ಲರೂ ಅಜ್ಜಿಯಾಗಿತ್ತು ಗಾಗಿ ಬಹಳಷ್ಟು ಆಸೆ ಪಟ್ಟಿದ್ದರು.

kannada-serial-aase-episode-24th-march

ಆದರೆ ಆ ಗಿಫ್ಟ್ ಸಿಗಲಿಲ್ಲ ಎಂದ ಕೂಡಲೇ ಅವರಿಬ್ಬರಿಗೂ ಬಹಳಷ್ಟು ಕೋಪ ಬರುತ್ತದೆ. ಸೂರ್ಯ ಹಾಗೂ ಮೀನಾಗೆ ಈ ಗಿಫ್ಟ್ ಸಿಕ್ಕಿದೆ ಅವರ ಕೋಪಕ್ಕೆ ಕಾರಣವಾಗಿರುತ್ತದೆ. ಆದರೆ ಅವರ ಮಾತನ್ನು ಯಾರು ಕೇಳಿಸಿಕೊಳ್ಳುವವರು ಇರಲಿಲ್ಲ. ಆದ ಕಾರಣ ಅವರ ಕೋಪ ಮತ್ತೆ ಭುಗಿಲೇಳಲಿಲ್ಲ. ಇತ್ತ ಸೂರ್ಯ ಹಾಗೂ ಮೀನಾ ಲಕ್ಕಿ ಕೊಟ್ಟ ಪೆಂಡೆಂಟ್ ನ ಬಹಳ ಜಾಗೃತೆಯಿಂದ ಎತ್ತಿಡುತ್ತಾರೆ. ಶಾಂತಿ ಹಾಗೂ ಮನೋಜ ಎತ್ತಿಟ್ಟುಕೊಂಡುಬಿಟ್ಟರೆ ಎನ್ನುವ ಭಯ ಸೂರ್ಯ ಗೆ. ಹಾಗೆಯೇ ಲಕ್ಕಿ ನಮ್ಮಿಬ್ಬರಿಗೂ ಈ ಡಾಲರ್ ಕೊಟ್ಟಿರುವುದು ನನಗೆ ಬಹಳ ಆಶ್ಚರ್ಯ ತಂದಿದೆ ಎಂದು ಸೂರ್ಯ ಹೇಳುತ್ತಾನೆ, ಮೊದಲು ನಾನು ಚಿಕ್ಕವನಿರಬೇಕಾದರೆ ಈ ಡಾಲರ್ ಅನ್ನ ನನಗೆ ಮುಟ್ಟಲು ಕೂಡ ಬಿಡುತ್ತಿರಲಿಲ್ಲ ಅಂತದ್ರಲ್ಲಿ ಇದೀಗ ನನಗೆ ಈ ಚಿನ್ನದ ಡಾಲರ್ ಅನ್ನ ಕೊಟ್ಟಿದ್ದಾರೆ ಎಂದು ಹೇಳಿದರೆ ನನಗೆ ಅದಕ್ಕಿಂತ ಖುಷಿ ಯಾವುದು ಇಲ್ಲ ಎಂದು ಹೇಳುತ್ತಾರೆ.ಇದನ್ನು ಕೇಳಿದ ಮೀನಾ ಗೆ ಬಹಳ ಖುಷಿಯಾಗಿತ್ತು.

ಅಜ್ಜಿ ಗಿಫ್ಟ್ ನೋಡಿ ಖುಷಿಪಟ್ಟ ಸೂರ್ಯ ದಂಪತಿ

ಮೀನಾ ಆ ಚಿನ್ನದ ಪದಕವನ್ನು ಲಾಕರ್ ನಲ್ಲಿ ಇಡಲು ಹೋಗುತ್ತಾಳೆ ಶಾಂತಿಗೆ ಆ ಚಿನ್ನದ ಡಾಲರ್ ಮೇಲೆ ಕಣ್ಣು ಹೇಗಾದರೂ ಮಾಡಿ ಆ ಚಿನ್ನದ ಡಾಲರ್ ಅನ್ನು ತೆಗೆದುಕೊಳ್ಳಬೇಕು. ಅದನ್ನು ಪಡೆದುಕೊಳ್ಳಲೇಬೇಕು ಎಂದು ಆಲೋಚನೆ. ಲಕ್ಕಿ ರಂಗನಾಥನ ಮನೆಯಿಂದ ಹೊರಡುತ್ತಾಳೆ ಆಕೆಯನ್ನ ಸೂರ್ಯ ಬಸ್ ಸ್ಟಾಂಡ್ವರೆಗೂ ಡ್ರಾಪ್ ಮಾಡಿ ಮನೆಗೆ ಬರುತ್ತಾನೆ ಅಷ್ಟ್ರಲ್ಲಿ ಮನೋಜ ಹಾಗೂ ರೋಹಿಣಿ ಆಫೀಸಿಗೆ ಹೋಗಲು ರೆಡಿಯಾಗಿರುತ್ತಾರೆ.

ಮನೋಜನ ಮೇಲೆ ಅನುಮಾನ ವ್ಯಕ್ತಪಡಿಸಿದ ಸೂರ್ಯ

ಮನೋಜ ಆಫೀಸಿಗೆ ಹೋಗುವುದನ್ನು ನೋಡಿ ಸೂರ್ಯ ಅವರಿಬ್ಬರನ್ನು ತಡೆಯುತ್ತಾನೆ. ಹಾಗೆಯೇ ಏನೋ ಒಂದು ಮುಖ್ಯವಾದ ವಿಚಾರ ಮಾತನಾಡಲಿದೆ ಎಂದು ಹೇಳಿ ತನ್ನ ತಂದೆಯನ್ನು ಜೋರಾಗಿಯೇ ಕರೆಯುತ್ತಾನೆ.ಮನೆಯವರು ಎಲ್ಲರೂ ಬಂದ ಬಳಿಕ ಲಕ್ಕಿ ಕೊಟ್ಟ ಒಡವೆಯನ್ನು ಮೀನಾ ತೆಗೆದುಕೊಂಡು ಬರುತ್ತಾಳೆ. ಇದನ್ನು ನೋಡಿದ ರಂಗನಾಥ ಎನು ಅರ್ಥ ಆಗದೆ ಮಗನ ಬಳಿಗೆ ಹೋಗುತ್ತಾರೆ. ಎನಿದೆಲ್ಲ ಎಂದಾಗ ಇದೆಲ್ಲ ಒಡವೆಗಳು ಡ್ಯೂಪ್ಲಿಕೇಟ್ ಒಡವೆಗಳು ಎಂದು ಸೂರ್ಯ ಹೇಳುತ್ತಾನೆ ಸೂರ್ಯ ಮಾತಿಗೆ ರಂಗನಾಥನಿಗೆ ಬಹಳಷ್ಟು ಬೇಸರವಾಗುತ್ತದೆ.

ಮಗನ ಮಾತಿಗೆ ಕೋಪಗೊಂಡ ಶಾಂತಿ

ಅರರೇ, ಇದೇನು ಹೇಳುತ್ತಿದ್ದಾರೆ ಎಂದು ಬಹಳಷ್ಟು ತಲೆ ಕೆಡಿಸಿಕೊಂಡು ರಂಗನಾಥ ಸೂರ್ಯನ ಮುಖ ನೋಡಿದಾಗ ಸೂರ್ಯ ಹೇಳುತ್ತಾನೆ ಲಕ್ಕಿಗೆ ನಾವು ಈ ಒಡವೆಗಳನ್ನು ಮಾರಿ ಬೇರೆ ಒಡವೆಯನ್ನು ತೆಗೆದುಕೊಡಬೇಕೆಂದು ಅಂದುಕೊಂಡಿದ್ದೆವು ಆದರೆ ಈ ಒಡವೆಗಳು ಡ್ಯೂಪ್ಲಿಕೇಟ್ ಎಂದು ನಮಗೆ ತಿಳಿಯಿತು ನಮ್ಮನ್ನ ಪೊಲೀಸ್ ಸ್ಟೇಷನ್ ಗೆ ಹಾಕದೇ ಬಹಳ ದೊಡ್ಡ ವಿಚಾರ ಎಂದು ಸೂರ್ಯ ತನ್ನ ತಂದೆಯ ಬಳಿ ಹೇಳುತ್ತಾನೆ ಈ ಮಾತನ್ನು ಕೇಳಿ ರಂಗನಾಥನಿಗೆ ಶಾಕ್ ಆಗುತ್ತದೆ. ಅದು ಹೇಗೆ ಆಗಲು ಸಾಧ್ಯ ತನ್ನ ತಾಯಿ ಕೊಟ್ಟ ಉಡುಗೊರೆ ಡುಬ್ಲಿಕೇಟ್ ಆಗಲು ಹೇಗೆ ಸಾಧ್ಯ ಎಂದು ಬಹಳ ಶಾಕ್ ಆಗುತ್ತಾನೆ. ಶಾಂತಿ ಮಾತ್ರ ತನಗೆ ಏನು ಗೊತ್ತಿಲ್ಲದ ಹಾಗೆ ನಿಂತಿರುತ್ತಾಳೆ ಹಾಗೆಯೇ ಮೀನಾ ಮೇಲೆ ಆಪಾದನೆಯನ್ನು ಮಾಡುತ್ತಿರುತ್ತಾಳೆ. ಇದೆಲ್ಲವನ್ನ ನೋಡಿದ ಶ್ರುತಿ ನಾವ್ಯಾಕೆ ಪೋಲಿಸ್ ಕಂಪ್ಲೇಂಟ್ ಕೊಡಬಾರದು ಎನ್ನುವ ಯೋಚನೆ ಮಾಡುತ್ತಾಳೆ. ಮುಂದೇನು ಕಾದುನೋಡಬೇಕಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X