Aase ; ಮಗನ ಮಾತು ಕೇಳಿ ನೊಂದ ರಂಗನಾಥ, ಮನೋಜ್ ಗೆ ಟಕ್ಕರ್ ಕೊಟ್ಟ ಸೂರ್ಯ
ಸೂರ್ಯಗೆ ತನ್ನ ತಂದೆ ಎಂದರೆ ಬಹಳ ಪ್ರೀತಿ, ರಂಗನಾಥರಾಯರಿಗೂ ಕೂಡ ತನ್ನ ಎರಡನೇ ಮಗ ಚೆನ್ನಾಗಿ ಓದದೆ ಇದ್ದರೂ ಕೂಡ ನಮ್ಮೆಲ್ಲರನ್ನ ಆತನೇ ಕೊನೆತನಕ ಖುಷಿಯಿಂದ ನೋಡಿಕೊಳ್ಳುವುದು ಎನ್ನುವುದು ಯಾವತ್ತೋ ಮನವರಿಕೆಯಾಗಿದೆ. ಆದರೆ ಶಾಂತಿಗೆ ಮಾತ್ರ ತನ್ನ ಮಗ ಮನೋಜ್ ಮಾತ್ರ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆ. ಆಕೆಗೆ ಬೇರೆ ಯಾರ ಮೇಲೂ ಆಕೆಗೆ ಭರವಸೆ ಎನ್ನುವುದು ಸ್ವಲ್ಪ ಕೂಡ ಇರುವುದಿಲ್ಲ. ಆದರೆ ಮನೋಜ್ ಮಾತ್ರ ತನ್ನ ತಾಯಿಯ ಬಗ್ಗೆ ಹೆಚ್ಚು ಅನುಕಂಪ ಇಟ್ಟುಕೊಂಡಿರುವುದಿಲ್ಲ. ತನ್ನ ತಾಯಿ ತನಗೆ ಬಹಳಷ್ಟು ಸಪೋರ್ಟ್ ಮಾಡುತ್ತಾಳೆ.
ಆಕೆಗೆ ನಾನೇನಾದರೂ ಒಂದು ಒಳ್ಳೆಯ ಗಿಫ್ಟ್ ನೀಡಬೇಕು ಇಲ್ಲದಿದ್ದರೆ ಏನಾದರೂ ಒಂದು ಸಾಧನೆ ಮಾಡಿ ತೋರಿಸಬೇಕು ಎಂದು ಆಕೆ ಅಂದುಕೊಂಡಿರುತ್ತಾಳೆ. ಆದರೆ ಮನೋಜ್ ಮಾತ್ರ ತನಗೆ ತನ್ನ ಹೆಂಡತಿಗಿಂತ ಮುಖ್ಯ ಬೇರೆ ಯಾವುದು ಇಲ್ಲ ಎನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಾನೆ. ಇದೀಗ ಹೆಂಡತಿಗೆ ತಾಳಿ ಚೈನು ತೆಗೆದುಕೊಂಡು ಬಂದ ಮನೋಜ ತಾಯಿಗೆ ಸೀರೆ ತೆಗೆದುಕೊಂಡು ಬರುತ್ತಾನೆ ಆದರೆ ತಂದೆಗೆ ಶಾಲು ತೆಗೆದುಕೊಂಡು ತರುತ್ತಾನೆ. ಇದೆಲ್ಲವನ್ನೂ ನೋಡಿದ ಸೂರ್ಯ ಗೆ ಬಹಳ ಕೋಪ ಬರುತ್ತದೆ. ಮನೋಜ ನಿಗಾಗಿ ರಂಗನಾಥ ರಾಯರು 27 ಲಕ್ಷ ಹಣವನ್ನು ನೀಡಿರುತ್ತಾರೆ. ಆದರೆ ಅದಕ್ಕೆ ಏನು ಮರ್ಯಾದೆಯನ್ನು ನೀಡದೆ ತನ್ನ ತಂದೆಯ ಬಳಿ ಬಹಳ ಚೀಪ್ ಆಗಿ ನಡೆದುಕೊಳ್ಳುತ್ತಾನೆ.

ಆದರೆ ತನ್ನ ಮಗ ಅದೇ ರೀತಿ ಇರುವುದು ಏನು ಮಾಡಲು ಆಗುವುದು ಇಲ್ಲ ಎಂದು ರಂಗನಾಥ ಮನದಲ್ಲಿಯೇ ಸಮಾಧಾನ ಪಟ್ಟುಕೊಳ್ಳುತ್ತಾರೆ. ಕೋಪಗೊಂಡಿದ್ದ ಸೂರ್ಯ ನನ್ನು ರಂಗನಾಥರಾಯರು ಬಹಳ ಪ್ರೀತಿಯಿಂದ ಸಮಾಧಾನ ಮಾಡುತ್ತಾರೆ. ಮೀನ ಹಾಗೂ ಸೂರ್ಯ ಬೇರೆ ಒಂದು ರೂಮನ್ನ ಕಟ್ಟಿಸಿಕೊಳ್ಳುವ ಪ್ಲಾನ್ ಮಾಡುತ್ತಾರೆ. ಆದರೆ ಅದಕ್ಕೆ 5 ಲಕ್ಷ ಹಣ ಬೇಕಾಗುತ್ತದೆ. ಒಂದು ಲಕ್ಷ ಹಣವನ್ನು ಕಾರ್ಯಕ್ರಮವೊಂದರಲ್ಲಿ ಗೆದ್ದ ಮೀನಾ ಹಾಗೂ ಸೂರ್ಯ ಇದೀಗ ಆ ಹಣವನ್ನು ರೂಮ್ ಕಟ್ಟಿಸಲು ಎತ್ತಿಡುತ್ತಾರೆ. ಹೇಗಾದರೂ ಮಾಡಿ ರೂಮ್ ಕಟ್ಟಿಸಲೇ ಬೇಕು ಎನ್ನುವ ಹಠದಲ್ಲಿರುತ್ತಾನೆ.
ತಮ್ಮನ ಹುಟ್ಟುಹಬ್ಬದಂದು ಶಾಕ್ ಆದ ಮೀನಾ
ತಮ್ಮ ಮಂಜನ ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು ಎಂದು ಮೀನಾ ಅಂದುಕೊಂಡರೆ ಇತ್ತ ಸೂರ್ಯ ಮಾತ್ರ ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗಬಾರದು ಎಂದು ಮೀನಾ ಗೆ ಅಡ್ಡಿ ಪಡಿಸುತ್ತಾನೆ ಯಾವುದೇ ಕಾರಣಕ್ಕೂ ನೀನು ತವರು ಮನೆಗೆ ಹೋಗುವ ಅಗತ್ಯ ಇಲ್ಲ. ಮಂಜನ ಹುಟ್ಟುಹಬ್ಬಕ್ಕೆ ನೀನು ಹೋಗಬೇಡ ಎಂದು ತಾಕೀತು ಮಾಡಿರುತ್ತಾನೆ. ಆದರೆ ಅದನ್ನು ಮೀರಿ ಮೀನಾ ದೇವಾಲಯಕ್ಕೆ ಹೋಗಿ ಅನ್ನದಾನ ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸೂರ್ಯನನ್ನು ನೋಡಿ ಮೀನಾ ಗೆ ಬಹಳ ಆತಂಕ ಆಗುತ್ತದೆ. ಮೀನಾ ಏನು ಮಾತನಾಡದೆ ಮೌನಿಯಾಗುತ್ತಾಳೆ.
ಸೂರ್ಯ ಮಾತು ಕೇಳದ ಮಂಜ
ಮಂಜನಿಗೆ ಅದೆಷ್ಟೇ ಬಾರಿ ರೌಡಿಗಳ ಜೊತೆಗೆ ನೀನು ಸೇರಬೇಡ ಎಂದು ಸೂರ್ಯ ಹೇಳಿದರು ಯಾರ ಮಾತು ಕೇಳದ ಮಂಜ ತನ್ನ ಭಾವನ ಬಗ್ಗೆಯೇ ತಪ್ಪಾಗಿ ತಿಳಿದುಕೊಂಡು ಎಲ್ಲರ ಜೊತೆಗೆ ಮಾತಿಗಿಳಿಯುತ್ತಾನೆ.ಗಲಾಟೆ ನಡೆಯುತ್ತದೆ. ಅಂದಿನಿಂದ ಇಂದಿನವರೆಗೂ ತನ್ನ ಭಾವನ ಎದುರಾಗಿಯೇ ಮಂಜ ಇದ್ದಾನೆ ಆದರೆ ಮೀನಾ ಗೆ ತನ್ನ ತಮ್ಮ ಎನ್ನುವ ಮಮಕಾರ ಹೆಚ್ಚಾಗಿ ಕಾಡುತ್ತದೆ. ತನ್ನ ತಮ್ಮನ ಜೊತೆ ಹೆಚ್ಚಾಗಿ ಬೆರೆಯಬೇಕು ಎನ್ನುವುದು ಆಕೆಯ ಆಸೆ .
ಶ್ರುತಿ ಮೀನಾ ತಂಗಿ ಕನಕ ಇರುವ ಆಸ್ಪತ್ರೆಗೆ ಹೋಗುತ್ತಾಳೆ. ಹಾಗೆಯೇ ಗರ್ಭವತಿ ಆಗುವ ಬಗ್ಗೆ ಮಾಹಿತಿ ಕಲೆ ಹಾಕುತ್ತಾಳೆ. ಬಹಳಷ್ಟು ಕಷ್ಟ ಪಡಬೇಕು ಎಂದು ಆಕೆಗೆ ಗೊತ್ತಾದಾಗ ಬಾಡಿಗೆ ತಾಯಿ ಯಾರ ಮೂಲಕವಾದರೂ ಪಡೆಯುತ್ತೇನೆ ಕನಕ ಅಂಥವರು ನಿನಗೆ ಏನಾದರು ಗೊತ್ತಿದ್ದರೆ ಹೇಳು. ನಾನು ಮಗುವನ್ನು ಹೇರುವುದಿಲ್ಲ. ನನ್ನಿಂದ ಅದು ಸಾಧ್ಯ ಇಲ್ಲ ಎಂದು ಶ್ರುತಿ ಹೇಳಿದಾಗ ಕನಕ ಅದೆಷ್ಟೋ ಮನವೊಲಿಸಲು ಟ್ರೈ ಮಾಡುತ್ತಾಳೆ. ಆದರೆ ಶ್ರುತಿ ಆಲ್ರೇಡಿ ಡಿಸೈಡ್ ಮಾಡಿದ ಹಾಗೆ ಅನ್ನಿಸುತ್ತದೆ ಇದರಿಂದ ಕನಕ ಶ್ರುತಿಯ ಮಾತಿಗೆ ಹೂಗೂಡುತ್ತಾಳೆ.


Click it and Unblock the Notifications











