Aase ; ಮನೋಜನ ಮೇಲೆ ಸೂರ್ಯಾಗೆ ಹೆಚ್ಚಾದ ಅನುಮಾನ,ಮುಂದೇನು ಮಾಡುತ್ತಾನೆ?

By ಪೂರ್ವ

ಶಾಂತಿ ಅದೆಷ್ಟೇ ಕೂಗಾಡಿದರು ಸೂರ್ಯನಿಗೆ ತನ್ನ ತಾಯಿಯ ಮೇಲೆ ಹಾಗೆಯೇ ಮನೋಜನ ಮೇಲೆ ಅನುಮಾನಗಳು ಕಾಡುತ್ತಿರುತ್ತದೆ. ಮನೋಜನಿಗೆ ತನ್ನ ತಾಯಿ ಎಂದರೆ ಬಹಳ ಪ್ರೀತಿ. ಶಾಂತಿಗೆ ಕೂಡ ಮೂವರು ಮಕ್ಕಳಲ್ಲಿ ಮನೋಜನಿಗೆ ಬಹಳಷ್ಟು ಪ್ರೀತಿ. ಮನೋಜ ಏನೇ ಇದ್ದರೂ ಕೂಡ ಅದೆಲ್ಲವನ್ನು ತಾಯಿಯ ಬಳಿಗೆ ಹೇಳಿಕೊಳ್ಳುತ್ತಾನೆ. ಆತನಿಗೆ ಆತನ ತಾಯಿ ತನಗೆ ಏನಾದರು ಸಹಾಯ ಮಾಡಿಯೇ ಮಾಡುತ್ತಾಳೆ ಎನ್ನುವ ನಂಬಿಕೆ. ಅದೇ ರೀತಿ ಶಾಂತಿ ನಡೆದುಕೊಳ್ಳುತ್ತಾಳೆ. ಶಾಂತಿ ಹಾಗೂ ಮನೋಜ ಮಾಡಿದ ತಪ್ಪನ್ನು ತನಗೆ ಗೊತ್ತಿದ್ದರೂ ಶಾಂತಿ ಮೀನ ಮೇಲೆ ಹೊರಿಸಿಬಿಡುತ್ತಾಳೆ.

ಅತ್ತೆ ಮೇಲೆ ಮೀನಾ ಬಹಳ ಕೋಪ ಮಾಡಿಕೊಂಡಿರುತ್ತಾರೆ ಅತ್ತೆ ಮುಂದೆ ಏನು ಬಯ್ಯದೆ ಇದ್ದರೂ ಅಡಿಗೆ ಮನೆಗೆ ಹೋಗಿ ಬಹಳ ಕೋಪ ಮಾಡಿಕೊಂಡು ಬಿಡುತ್ತಾಳೆ. ಅತ್ತೆಗೆ ತನ್ನ ಮನೆಯವರ ಮೇಲೆಯೇ ಕಣ್ಣು ಈ ಮನೆಯಲ್ಲಿ ಯಾರು ಕಡಿಯುವುದೇ ಇಲ್ಲ. ಸುಮ್ನೆ ಆರೋಪ ಮಾಡುವುದು ಎಷ್ಟು ಸರಿ ಎಂದು ಕೋಪದಲ್ಲಿರುವಾಗ ಸೂರ್ಯ ಮೀನಾ ಗೆ ಸಮಾಧಾನ ಹೇಳುತ್ತಾನೆ. ಕಳ್ಳರು ಈ ಮನೆಯಲ್ಲಿಯೇ ಇದ್ದಾರೆ ಅವರು ಎಲ್ಲಿಯೂ ಹೋಗಿಲ್ಲ. ಆದರೆ ಯಾರು ಕಳ್ಳ ಎಂಬುವುದನ್ನು ನಾವು ಹುಡುಕಬೇಕು ಎಂದು ಹೇಳಿ ಯೋಚನೆ ಮಾಡುತ್ತಾನೆ. ಇದೆಲ್ಲವನ್ನೂ ಕೇಳಿದ ಮೀನಾ ಗೆ ಕೂಡ ಹೌದು ಎನಿಸುತ್ತದೆ. ರಂಗನಾಥನಿಗೆ ಬಹಳಷ್ಟು ಬೇಸರವಾಗುತ್ತದೆ ಯಾಕೆಂದರೆ ಆತನ ತಾಯಿ ಕೊಟ್ಟ ಯಾವುದೇ ಉಡುಗೊರೆಯೂ ರೋಲ್ಡ್ ಗೋಲ್ಡ್ ಅಲ್ಲ. ಎಲ್ಲವೂ ಉತ್ತಮವಾಗಿರುವ ಉಡುಗೊರೆಯನ್ನು ನೀಡಿದ್ದಾರೆ.

kannada-serial-aase-episode-25th-march

ಆದರೆ ಈ ಬಾರಿ ಹೀಗೆಲ್ಲ ಆಗಲು ಹೇಗೆ ಸಾಧ್ಯ ಎಂದು ಆಲೋಚನೆ ಮಾಡಿ ತಲೆ ಚಿಟ್ಟು ಹಿಡಿಯುತ್ತದೆ. ಇತ್ತ ಶಾಂತಿ ಮೀನ ಮೇಲೆ ಆಪಾದನೆ ಮಾಡುವಾಗ ಸತಿ ಜೋರಾಗಿ ಹೇಳುತ್ತಾಳೆ ನಾವೆಲ್ಲರೂ ಸೇರಿ ಪೋಲಿಸ್ ಕಂಪ್ಲೇಂಟ್ ಕೊಡೋಣ ಯಾರು ಈ ಚಿನ್ನದ ಒಡವೆಯನ್ನ ಕದ್ದಿದ್ದಾರೆ ಎಂದು ತಿಳಿಯುತ್ತದೆ. ಮೊದಲು ವಿಚಾರಣೆ ಮಾಡುವುದು ಅತ್ತೆಯನ್ನೇ ಎಂದು ಶ್ರುತಿ ಹೇಳುತ್ತಾಳೆ. ಇದನ್ನು ಕೇಳಿದ ಶಾಂತಿಗೆ ಬಹಳ ಭಯವಾಗುತ್ತದೆ. ಎಲ್ಲಾದರೂ ಪೊಲೀಸ್ ವಿಚಾರಣೆಗೆ ಹೋದರೆ ಎಲ್ಲಿ ತಾನೇ ಕದ್ದಿದ್ದೇನೆ ಎಂದು ಎಲ್ಲರಿಗೂ ತಿಳಿದು ಬಿಡುತ್ತದೆ ಎನ್ನುವ ಭಯ ಆಕೆಗೆ ಆದರೆ ರಂಗನಾಥ ಮಾತ್ರ ಈ ವಿಚಾರ ಎಲ್ಲಿಯೂ ಯಾರಿಗೂ ತಿಳಿಯಬಾರದು ಇದು ನಮ್ಮ ಮನೆಯ ಮಾನ ಮರ್ಯಾದಿ ಪ್ರಶ್ನೆ ಇನ್ನು ಪೊಲೀಸ್ ಕೇಸ್ ಹೀಗೆಲ್ಲ ಆಗುವುದರಿಂದ ನಮ್ಮ ಮರ್ಯಾದೆ ಇನ್ನೂ ಕೂಡ ಹೋಗುತ್ತದೆ ಅದಕ್ಕೆ ಅವಕಾಶ ಕೊಡುವುದು ಸರಿಯಲ್ಲ ಎಂದು ಹೇಳುತ್ತಾನೆ.

ಮನೋಜನ ಮೇಲೆ ಕೂಗಾಡಿದ ಸೂರ್ಯ

ರಂಗನಾಥನ ಮಾತಿಗೆ ಎಲ್ಲರೂ ಕೂಡ ಸುಮ್ಮನಾಗುತ್ತಾರೆ. ಆದರೆ ಸೂರ್ಯ ಮಾತ್ರ ಬಹಳ ಕೋಪದಿಂದ ಖಂಡಿತವಾಗಿಯೂ ನಾನು ಆ ಕಳ್ಳ ನನ್ನ ಹುಡುಗಿ ಹುಡುಕುತ್ತೇನೆ ಇಂದು ಆ ಕಳ್ಳ ನಮ್ಮ ಮನೆಯಿಂದ ತಪ್ಪಿಸಿಕೊಂಡಿರಬಹುದು ಆದರೆ ಖಂಡಿತವಾಗಿಯೂ ನಾಳೆ ಆತ ತಪ್ಪಿಸಿಕೊಳ್ಳುತ್ತಾನೆ ಎಂದು ಹೇಳಲು ಆಗುವುದಿಲ್ಲ ಖಂಡಿತವಾಗಿಯೂ ಆತ ನನ್ನ ಕೈಗೆ ಸಿಕ್ಕರೆ ಸುಮ್ಮನೆ ಬಿಡುವ ಮಾತೆ ಇಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಶಾಂತಿ, ಮನೋಜನನ್ನು ಭೂಮಿಗೆ ಕರೆದುಕೊಂಡು ಬಂದು ನೀನು ಏನು ಮಾಡುತ್ತೀಯ ಎಂದು ನನಗೆ ಗೊತ್ತಿಲ್ಲ ಆದರೆ ನನಗೆ ಇದೀಗ ನೀನು ಚಿನ್ನದ ಒಡವೆಗಳನ್ನು ತಂದು ಕೊಡಬೇಕು ಇಲ್ಲವಾದರೆ ಖಂಡಿತವಾಗಿಯೂ ಆಪಾದನೆ ನನ್ನ ಮೇಲೆ ಬಂದೇ ಬರುತ್ತದೆ.

ಮನೋಜನಿಗೆ ಎಚ್ಚರಿಕೆ ನೀಡಿದ ಶಾಂತಿ

ಚಿನ್ನದ ಒಡವೆಗಳನ್ನು ತರದಿದ್ದರೆ ನಾನು ನಿನ್ನನ್ನು ಖಂಡಿತವಾಗಿ ಸುಮ್ಮನೆ ಬಿಡುವುದಿಲ್ಲ ಎಂದು ಶಾಂತಿ ಮನೋಜನಿಗೆ ಎಚ್ಚರಿಕೆಯನ್ನು ನೀಡುತ್ತಾಳೆ. ಆದರೆ ಮನೋಜ ಮಾತ್ರ ತನಗೆ ಎನು ಅರಿವು ಇಲ್ಲದ ಹಾಗೆ ಸುಮ್ಮನಿರುತ್ತಾನೆ. ಅಮ್ಮನ ಬಳಿ ಸೈಲೆಂಟಾಗಿ ಆ ಒಡವೆಗಳನ್ನು ನನ್ನಿಂದ ತರಲಾಗದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಶಾಂತಿ ಕೋಪಗೊಂಡು ಮನೋಜನಿಗೆ ಬುದ್ದಿ ಮಾತು ಹೇಳುತ್ತಾಳೆ. ಆಕೆಯ ಮಾತಿಗೆ ಮನೋಜ್ ಸೈಲೆಂಟ್ ಆಗುತ್ತಾನೆ. ಇತ್ತ ರೋಹಿಣಿ ತನ್ನ ಮಗನಿಗೆ ಕರೆ ಮಾಡಿ ಮಾತನಾಡುತ್ತಾಳೆ. ಕ್ಷೇಮ ಸಮಾಚಾರವನ್ನು ತಿಳಿದುಕೊಳ್ಳುತ್ತಾಳೇ. ತನ್ನ ಮಗ ಖುಷಿಯಾಗಿರಬೇಕು ಅಂತ ರೋಹಿಣಿ ಬಹಳಷ್ಟು ತ್ಯಾಗ ಮಾಡುತ್ತಾಳೆ ಆದರೆ ಆಕೆಯ ಜೀವನಕ್ಕೆ ಆಧಾರ ಸ್ತಂಭವಾಗಿ ಮನೋಜನನ್ನೂ ಮದುವೆ ಆಗಿ ಹಾಯಾಗಿದ್ದಾಳೆ. ಆದರೆ ಆ ಪುಟ್ಟ ಮಗು ಮಾತ್ರ ಅಮ್ಮ ಬೇಕು ಎಂದು ಹಠ ಮಾಡುತ್ತಿದೆ. ರೋಹಿಣಿ ತಾಯಿ ಗೆ ಇದೀಗ ಮೊಮ್ಮಗನ ಬಗ್ಗೆಯೇ ಚಿಂತೆ ಶುರುವಾಗಿದೆ.

ಶ್ರುತಿ ಮೇಲೆ ಎಗರಾಡಿದ ಮನೋಜ್

ಮೀನಾ ಬಂಗಾರ ಹೇಗೆ ಮಾಯವಾಗಿ ರೋಲ್ಡ್ ಗೋಲ್ಡ್ ಆಯಿತು ಎನ್ನುವುದು ಎಲ್ಲರ ಚಿಂತೆಯಾಗಿದೆ ಅದಕ್ಕಾಗಿ ಮೀನಾ ಹಾಗೂ ಸೂರ್ಯ ಶ್ರುತಿ ಹಾಗೂ ರವಿ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಶ್ರುತಿ ಡಬ್ಬಿಂಗ್ ಆರ್ಟಿಸ್ಟ್ ಆಗುವುದರಿಂದ ಫೋನ್ ನಲ್ಲಿ ಮನೋಜ್ ಬಳಿ ರೋಲ್ಡ್ ಗೋಲ್ಡ್ ಚಿನ್ನದ ಬಗ್ಗೆ ಮಾತನಾಡುತ್ತಾಳೆ. ಇದನ್ನು ಕೇಳಿದ ಮನೋಜ ಮಾತ್ರ ಭಯಗೊಳ್ಳುತ್ತಾನೆ.ಇಲ್ಲಿ ತಾನು ಸಿಕ್ಕಿಬೀಳುತ್ತೇನೋ ಎನ್ನುವ ಭಯ ಆತನನ್ನು ಪದೇ ಪದೇ ಕಾಡುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X