Aase ; ದೇವಾಲಯದಲ್ಲಿ ಸೂರ್ಯನನ್ನು ಕಂಡು ಬೆಚ್ಚಿಬಿದ್ದ ಮೀನಾ, ಕ್ಷಮಿಸುತ್ತಾನಾ ಸೂರ್ಯ?

By ಪೂರ್ವ

ಮೀನಾಗೆ ತಮ್ಮನ ಬರ್ತ್ ಡೇಯನ್ನು ಅಮ್ಮ ದೇವಾಲಯದಲ್ಲಿ ಆಚರಣೆ ಮಾಡಬೇಕು ಎಂದು ಹೇಳಿದಾಗಿನಿಂದ ಮನೆಯಲ್ಲಿ ಬಹಳಷ್ಟು ಯೋಚನೆ ಮಾಡುತ್ತಾ ಕುಳಿತುಕೊಂಡಿರುತ್ತಾಳೆ. ಆಗ ಅಲ್ಲಿಗೆ ಬಂದ ಶ್ರುತಿ, ಮೀನಾ ಅವರೇ ನೀವು ಯಾಕೆ ಹೀಗೆ ಚಿಂತೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಮೀನಾ ತನ್ನ ತಮ್ಮನ ಹುಟ್ಟುಹಬ್ಬವಿದೆ. ಆ ಕಾರಣದಿಂದಾಗಿ ನಾನು ಈ ರೀತಿ ಚಿಂತೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸೂರ್ಯ ಅವರು ನನ್ನನ್ನು ಅಲ್ಲಿಗೆ ಹೋಗಬೇಡ ಎಂದು ಹೇಳಿದ್ದಾರೆ. ಅವರ ಮಾತನ್ನು ಕೇಳಲಿಲ್ಲ ಎಂದಾದರೆ ಖಂಡಿತವಾಗಿಯೂ ನನ್ನನ್ನು ನನ್ನ ಗಂಡ ಸುಮ್ಮನೆ ಮಾತ್ರ ಬಿಡುವುದಿಲ್ಲ ಎಂದು ಹೇಳುತ್ತಾಳೆ.

ಆಕೆಯ ಮಾತು ಕೇಳಿದ ಶ್ರುತಿ, ಮೀನಾ ಅವರೇ ನಿಮ್ಮ ಗಂಡ ಬರುವುದು ರಾತ್ರಿ. ನೀವು ಮಧ್ಯಾಹ್ನ ಹೋಗಿ ಬನ್ನಿ ಅದರಲ್ಲಿ ಏನಾಯಿತು ಎಂದು ಹೇಳಿದಾಗ ಆಯಿತು ಎಂದು ಹೇಳಿ ಮೀನಾ ದೇವಾಲಯಕ್ಕೆ ಹೋಗುತ್ತಾಳೆ. ಇವರಿಬ್ಬರೂ ಮಾತನಾಡುವುದನ್ನು ಶಾಂತಿ ಕೇಳಿಸಿಕೊಳ್ಳುತ್ತಾಳೇ. ಮೀನಾ ದೇವಾಲಯಕ್ಕೆ ಬಂದಿರುವುದನ್ನು ನೋಡಿದ ಎಲ್ಲರೂ ಬಹಳಷ್ಟು ಖುಷಿ ಪಡುತ್ತಾರೆ. ಮೀನಾ ಅಮ್ಮನಿಗೆ ಬಹಳ ಖುಷಿ ಆಗುತ್ತದೆ. ತಮ್ಮ ಮಂಜನಿಗೂ.ಹಾಗೆಯೇ ಎಲ್ಲರಿಗೂ ಪುಳಿಯೋಗರೆ ಹಂಚುತ್ತಿರುವಾಗ ಬಂದ ಸೂರ್ಯನನ್ನು ನೋಡಿ ಮೀನಾ ಗೆ ಶಾಕ್ ಆಗುತ್ತದೆ.

kannada-serial-aase-episode-26th-april

ಸೂರ್ಯ ಮಾತ್ರ ಬಹಳ ಬೇಸರ ಪಟ್ಟುಕೊಂಡು ಇರುತ್ತಾನೆ. ತನ್ನ ತಾಯಿ ನನ್ನನ್ನು ಯಾವತ್ತೂ ಪ್ರೀತಿಯಿಂದ ಮಾತನಾಡಿಸಿಲ್ಲ . ನನ್ನ ಮಾತನ್ನು ಯಾರು ಕೇಳುವುದಿಲ್ಲ. ಆದರೆ ನನ್ನ ಹೆಂಡತಿ ಖಂಡಿತವಾಗಿಯೂ ನನ್ನ ಮಾತನ್ನು ಕೇಳಿಯೇ ಕೇಳುತ್ತಾಳೆ. ಆಕೆ ಯಾವತ್ತೂ ಕೂಡ ನನ್ನನ್ನು ತಪ್ಪಾಗಿ ತಿಳಿದುಕೊಳ್ಳುವುದಿಲ್ಲ ನನ್ನ ಮಾತನ್ನು ಕೇಳುತ್ತಾಳೆ ಎಂದುಕೊಂಡಿದ್ದೆ ಎಂದು ಸೂರ್ಯ ಎಲ್ಲರ ಎದುರು ಹೇಳಿದಾಗ ಮೀನಾಗೆ ಬಹಳ ಬೇಸರವಾಗುತ್ತದೆ. ಕೂಡಲೇ ಅಲ್ಲಿಂದ ಸೂರ್ಯ ಹೊರಟು ಹೋಗುತ್ತಾನೆ. ಸೂರ್ಯ ಹೋಗುವುದನ್ನು ನೋಡಿ ಬಹಳ ತಡೆಯಲು ಪ್ರಯತ್ನ ಪಡುತ್ತಾಳೆ ಮೀನಾ. ತಾನು ಮಾಡಿದ ಕೆಲಸಕ್ಕೆ ಸಮರ್ಥನೆ ಕೊಡುತ್ತಾಳೆ.

ಅಮ್ಮನ ಮಾತಿಗೆ ಶಾಕ್ ಆದ ಸೂರ್ಯ

ಆದರೆ ಆಕೆಯ ಮಾತನ್ನು ಕೇಳಲು ಯಾರು ರೆಡಿ ಇರುವುದಿಲ್ಲ. ಇದಕ್ಕಿಂತ ಮುಂಚಿತವಾಗಿ ಸೂರ್ಯ ಮನೆಗೆ ಕೊಂಚ ಬೇಗ ಬರುತ್ತಾನೆ . ಮೀನಾ ಎಂದೆಲ್ಲ ಜೋರಾಗಿ ಕರೆಯುತ್ತಾನೆ. ಆದರೆ ಶಾಂತಿ ಕೊಂಚ ಜೋರಾಗಿಯೇ ಹೇಳುತ್ತಾಳೆ ಮೀನಾ ಮನೆಯಲ್ಲಿಲ್ಲ ಎಂದು ಹೇಳುತ್ತಾಳೆ. ಆಕೆಯ ಮಾತು ಕೇಳಿದ ಸೂರ್ಯ ಹೇಳುತ್ತಾನೆ. ಮೀನಾ ಎಲ್ಲಿಗೆ ಹೋಗಿರಬಹುದು. ಯಾವತ್ತೂ ತನ್ನ ಬಳಿ ಒಂದು ಮಾತು ಹೇಳಿಯೇ ಹೋಗುತ್ತಿದ್ದಳು ಅಂಥದರಲ್ಲಿ ಇದೀಗ ಎಲ್ಲಿಗೆ ಹೋಗಲು ಸಾಧ್ಯ ಎಂದು ಆಲೋಚನೆ ಮಾಡುತ್ತಿರುತ್ತಾನೆ. ಆಗ ಶಾಂತಿ ಆಕೆ ದೇವಸ್ಥಾನಕ್ಕೆ ಹೋಗಿದ್ದಾಳೆ ಏನೋ ತಮ್ಮನ ಬರ್ತ್ ಡೇ ಇದೆ ಎಂದು ಹೇಳುತ್ತಿದ್ದಳು ಎಂದಾಗ ಸೂರ್ಯ ಗೆ ಕೋಪ ಒಂದು ದೇವಾಲಯಕ್ಕೆ ಹೋಗಿರುತ್ತಾನೆ.

ಅತ್ತೆಯ ಮೇಲೆ ಕುಪಿತಗೊಂಡ ಮೀನಾ

ಶಾಂತಿ ಮಾತು ಇಷ್ಟೆಲ್ಲ ಅವಾಂತರಕ್ಕೆ ಸಾಕ್ಷಿಯಾಗಿದೆ. ಮೀನಾ ಮನೆಗೆ ಬರುತ್ತಾಳೆ. ಅಷ್ಟರಲ್ಲಿ ರಂಗನಾಥ ರಾಯರು ಹೊರಗಡೆ ಹೋಗಲು ಹೊರಟು ನಿಂತಿರುತ್ತಾನೆ. ಮೀನಾ ಕೂಡಲೇ ಮಾವನ ಬಳಿಗೆ ಬಂದು ಮಾವ ನಾನು ಇವತ್ತು ಪುಳಿಯೋಗರೆ ತೆಗೆದುಕೊಂಡು ಬಂದಿದ್ದೇನೆ ಹಾಗೆಯೇ ಪಂಚಾಮೃತ ತಂದಿದ್ದೇನೆ ಎಂದು ಹೇಳುತ್ತಾಳೆ.

ಆಕೆಯ ಮಾತು ಕೇಳಿದ ರಂಗನಾಥ ಪಂಚಾಮೃತವನ್ನು ಕೊಡಮ್ಮ ಕುಡಿದುಕೊಂಡು ಹೋಗುತ್ತೇನೆ, ಪುಳಿಯೋಗರೆ ಬಂದು ತಿನ್ನುತ್ತೇನೆ ಎಂದು ಹೇಳಿದ ಕೂಡಲೇ ಪಂಚಾಮೃತ ಲೋಟಕ್ಕೆ ಹಾಕಿ ಕುಡಿಯುತ್ತಾಳೆ. ಪಂಚಾಮೃತ ಕುಡಿಯುತ್ತಿರುವುದನ್ನು ನೋಡಿದ ಶಾಂತಿ ಮೌನಿಯಾಗಿರುತ್ತಾಳೆ . ರಂಗನಾಥ ಶಾಂತಿಯತ್ತ ನೋಡಿ ಹೇಳುತ್ತಾನೆ ನಿನ್ನ ಅತ್ತೆಗೆ ಕೊಡಮ್ಮಾ ಪಂಚಾಮೃತ ಪಿತ್ತ ನೆತ್ತಿಗೇರಿರುವುದು ಕಡಿಮೆ ಆಗುತ್ತದೆ ಎಂದಾಗ ಮೀನಾ ಸುಮ್ಮನೆ ನಗುತ್ತಾಳೆ.

ರಂಗನಾಥ ಮನೆಯಿಂದ ಹೋದ ಬಳಿಕ ಶಾಂತಿ, ಮೀನಾ ಬಳಿ ಏನಮ್ಮಾ ಮೀನಾ ದೇವಾಲಯಕ್ಕೆ ಸೂರ್ಯ ಬಂದಿದ್ನಾ. ನಿನ್ನ ತಮ್ಮನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ಯಾ ಎಂದೆಲ್ಲ ಪ್ರಶ್ನೆಯನ್ನು ಆಗಾಗ ಮಾಡುತ್ತಿರುತ್ತಾಳೆ. ಆಕೆಯ ಮಾತು ಕೇಳಿ ಮೀನಾ ಉಗ್ರ ಸ್ವರೂಪ ಪಡೆದುಕೊಳ್ಳುತ್ತಾಳೇ.ಅತ್ತೆ ನೀವು ಮಾಡುತ್ತಿರುವುದು ಸರಿಯಲ್ಲ. ನೀವು ಮಾಡುತ್ತಿರುವುದು ತಪ್ಪು. ಯಾಕೆ ನೀವು ಹೀಗೆ ಮಾಡಿದಿರಿ ನಿಮ್ಮ ಮಗನೆ ತಾನೇ ಸೂರ್ಯ ಯಾಕಿಷ್ಟು ಬೇಧ ಭಾವ ನಿಮಗೆ. ಇನ್ನು ಮೇಲೆ ನನ್ನ ತಂಟೆಗೆ ಬಂದರೆ ಚೆನ್ನಾಗಿರಲ್ಲ ಎಂದು ಮೀನಾ ಖಡಕ್ ಆಗಿ ಹೇಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X