Aase ; ನಿಜ ವಿಚಾರವನ್ನು ರೋಹಿಣಿ ಬಳಿ ಹೇಳಿದ ಮನೋಜ್,ಮೀನಾ ಮಾಡಿದ್ದೇನು?
ಶಾಂತಿ ಯಾವ ವಿಚಾರವನ್ನು ಮನೋಜನಿಂದ ಮುಚ್ಚಿಡಲು ಹೇಳಿದಳೋ ಅದೆ ವಿಚಾರ ಇದೀಗ ರೋಹಿಣಿ ಮುಂದೆ ಬಯಲಾಗಿದೆ. ಮನೋಜ ಮಾಡಿದ ಕೆಟ್ಟ ಕೆಲಸದಿಂದ ರೋಹಿಣಿ ಬಹಳಷ್ಟು ನೊಂದಿರುತ್ತಾಳೆ. ಆಕೆಗೆ ಸಾಕಷ್ಟು ಅವಮಾನಗಳು ಈ ನಡುವೆ ಆ ಮನೆಯಲ್ಲಿ ನಡೆಯುತ್ತಿರುತ್ತದೆ. ನಾನು ಮನೋಜ ಒಟ್ಟಿಗೆ ದುಡಿದು ಮನೆಯವರಿಗೆ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಬೇಕು ಹಾಗೆಯೇ ಒಳ್ಳೆ ಹಣ ಮಾಡಬೇಕು ಎಂದು ಅಂದುಕೊಂಡಿರುತ್ತಾಳೆ. ಮನೋಜ ಇತ್ತೀಚಿಗೆ ತನ್ನ ತಾಯಿಯ ಜೊತೆಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳುತ್ತಿದ್ದ.
ಇದರಿಂದ ರೋಹಿಣಿ ಗೆ ಸತ್ಯ ಘಟನೆಗಳು ಯಾವುದು ಕೂಡ ತಿಳಿಯುತ್ತಿಲ್ಲ.ಇದೀಗ ಮನೆಯವರ ಮುಂದೆ ನಿಜ ವಿಚಾರ ತಿಳಿದ ರೋಹಿಣಿ ಗೆ ಸಾಕಷ್ಟು ನೋವಾಗುತ್ತದೆ. ಯಾಕೆ ಹೀಗೆಲ್ಲ ಮಾಡಿದೆ ನೀನು ಎಂದು ಪದೇ ಪದೇ ಮನೋಜನ ಬಳಿ ಕೇಳುತ್ತಾಳೆ. ಮನೋಜ ಮೌನವಾಗಿಯೇ ಇರುತ್ತಾನೆ. ಆದರೆ ರೋಹಿಣಿ ಮಾತ್ರ ನೀವು ಈ ತರ ಮಾಡುವುದು ನನಗೆ ಸರಿ ಕಾಣಿಸುತ್ತಿಲ್ಲ. ನೀವು ಮಾಡುತ್ತಿರುವುದು ಸರಿಯಲ್ಲ. ನಿಮಗೆ ನಿಮ್ಮ ತಾಯಿ ಕೂಡ ಸಪೋರ್ಟ್ ಮಾಡಿಲ್ಲ ಗೊತ್ತಾ? ನಿಮ್ಮ ತಾಯಿ ಯಾವತ್ತೂ ನಿಮ್ಮನ್ನು ಹೊಡೆದವರಲ್ಲ ಬೈದವರಲ್ಲ ಆದರೆ ಇವತ್ತು ನಿಮಗೆ ಇಷ್ಟು ಹೊಡೆದಿದ್ದಾರೆ. ಅವರ ಮನಸಿಗೆ ಎಷ್ಟು ನೋವಾಗಿರಬೇಡ ಎಂದಾಗ ಮನೋಜ, ಅವರು ಬೇಕೆಂದೇ ಹೊಡೆದಿದ್ದು ಎಂದು ಹೇಳುತ್ತಾನೆ. ಕೊನೆಗೆ ಮೌನ ಮುರಿದ ಮನೋಜ ರೋಹಿಣಿ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾನೆ.

ರೋಹಿಣಿ ಗೆ ಆಕಾಶವೇ ಕಳಚಿ ಮೈ ಮೇಲೆ ಬಿದ್ದ ಅನುಭವಾಗುತ್ತದೆ. ಈ ವಿಚಾರ ಸೂರ್ಯ ಗೆ ಗೊತ್ತಾದರೆ ಖಂಡಿತವಾಗಿಯೂ ಆತ ಸುಮ್ಮನೆ ಬಿಡುವುದಿಲ್ಲ ಎನ್ನುವುದು ರೋಹಿಣಿಗೆ ತಿಳಿದಿರುತ್ತದೆ. ಇದರಿಂದ ಕೋಪಗೊಂಡ ರೋಹಿಣಿ ಮನೋಜಗೆ ಹಿಗ್ಗಾಮುಗ್ಗ ಹೊಡೆಯುತ್ತಾಳೆ. ರೋಹಿಣಿಗೆ ಭಯದಲ್ಲಿ ಮುಂದೇನು ಮಾಡುವುದು ಎನ್ನುವ ಯೋಚನೆ ಶುರುವಾಗುತ್ತದೆ. ಇತ್ತ ಸೂರ್ಯ, ಮೀನಾ ಬಳಿ ಯಾಕೋ ನನಗೆ ಬಹಳಷ್ಟು ಡೌಟ್ ಕಾಣುತ್ತಿದೆ. ಮನೋಜ ಎಲ್ಲೋ ಏನೋ ಸುಳ್ಳು ಹೇಳುತ್ತಿದ್ದಾರೆ ಆತನ್ನನ್ನು ಖಂಡಿತ ನಾನು ನಂಬುವುದಿಲ್ಲ.
ಮನೋಜನ ಗೆಳೆಯನ ಬಳಿ ಪ್ರಶ್ನೆ ಮಾಡಿದ ಸೂರ್ಯ
ಮನೋಜ ಇದುವರೆಗೆ ಸತ್ಯವನ್ನು ಹೇಳಿಲ್ಲ. ಈ ಬಾರಿ ಏನಾದರು ಆತನೇ ನನ್ನ ಬಳಿ ಸಿಕ್ಕಿ ಹಾಕಿಕೊಂಡರೆ ಖಂಡಿತವಾಗಿಯೂ ಆತನನ್ನು ಮಾತ್ರ ನಾನು ಸುಮ್ಮನೆ ಬಿಡುವ ಮಾತೆ ಇಲ್ಲ ಎಂದು ಬಹಳ ಜೋರಾಗಿಯೇ ಹೇಳುತ್ತಾನೆ. ಮೀನಾ ಸೂರ್ಯ ಗೆ ಸಮಾಧಾನ ಮಾಡುತ್ತಾಳೆ. ಆದರೆ ಸೂರ್ಯ ಮಾತ್ರ ಮೀನಾ ಮಾತಿಗೆ ಕಿವಿಗೊಡದೆ ಮನೋಜ ಮಾತಿನಂತೆ ಆತನ ಗೆಳೆಯ ಜೊತೆ ಮಾತುಕತೆಗಿಳಿಯುತ್ತಾನೆ. ಮನೋಜನೀಗೆ ನೀವು ನಾಲ್ಕು ಲಕ್ಷ ಹಣದ ಸಹಾಯವನ್ನು ಮಾಡಿದ್ದೀರಾ ಇದೆಲ್ಲ ನಿಜಾನಾ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಇದನ್ನು ಕೇಳಿದ ಮನೋಜ ನ ಗೆಳೆಯ ಒಮ್ಮೆಲೆ ಶಾಕ್ ಆಗುತ್ತಾನೆ. ನಾನು ಹಣವನ್ನು ತೆಗೆದುಕೊಂಡಿಲ್ಲ. ಆತ ಎಲ್ಲಾ ಸುಳ್ಳು ಹೇಳುತ್ತಿದ್ದಾನೆ ಎಂದು ಹೇಳುತ್ತಾರೆ.ಇದನ್ನು ಕೇಳಿದ ಸೂರ್ಯನಿಗೆ ಮನೋಜ ಮೇಲೆ ಇನ್ನಷ್ಟು ಅನುಮಾನ ಬಲವಾಗುತ್ತದೆ.
ಮೀನಾ ಬಳಿ ಅನುಮಾನ ವ್ಯಕ್ತಪಡಿಸಿದ ಸೂರ್ಯ
ಹೇಗಾದರೂ ಮಾಡಿ ಮನೋಜನ ಬಾಯಿ ಬಿಡಿಸಬೇಕು ಇಲ್ಲವಾದರೆ ಖಂಡಿತವಾಗಿಯೂ ಚಿನ್ನದ ವಿಷಯವನ್ನು ಮನೋಜ ಬಾಯಿ ಬಿಡುವುದಿಲ್ಲ ಎಂದು ಮನದಲ್ಲಿ ಹೇಳುತ್ತಾನೆ. ಇತ್ತ ಮೀನಾ ಬಳಿಗೆ ಸೂರ್ಯ , ಲೇ ಮನೋಜ ನನ್ನ ಬಳಿ ಎಲ್ಲಾ ಸುಳ್ಳು ಹೇಳಿದ್ದಾನೆ ಆತನಿಗೆ ಆತನ ಗೆಳೆಯ ಹಣ ನೀಡಿಲ್ಲ .ಆತನಿಗೆ ನಾಲ್ಕು ಲಕ್ಷ ಹಣ ಹೇಗೆ ಬಂತು ಹಾಗಾದರೆ ಎಂದು ಮೀನಾ ಬಳಿ ಹೇಳುತ್ತಾನೆ. ಇದನ್ನು ಕೇಳಿದ ಮೀನಾಗೆ ಅನುಮಾನ ಕಾಡುತ್ತದೆ. ಆಕೆ ಒಂದು ಐಡಿಯವನ್ನು ಸೂರ್ಯ ಗೆ ಕೊಡುತ್ತಾಳೆ. ಸೂರ್ಯ ಮಾತ್ರ ಆ ಪ್ರಕಾರವಾಗಿ ನಡೆದುಕೊಳ್ಳುತ್ತಾನೆ. ಈ ಬಾರಿ ಶಾಂತಿ ಸೂರ್ಯ ಮುಂದೆ ಸಿಕ್ಕಿ ಹಾಕಿಕೊಳ್ಳಲೇ ಬೇಕಾಗುತ್ತದೆ. ಸೂರ್ಯ ಮಾತ್ರ ಯಾರನ್ನು ಸುಮ್ಮನೆ ಬಿಡುವ ಮಾತೆ ಇಲ್ಲ .


Click it and Unblock the Notifications











