Aase ; ಮೀನಾ ಮೇಲೆ ಸೂರ್ಯಗೆ ಹೆಚ್ಚಿದ ಪ್ರೀತಿ, ಕುಹಕವಾಡಿದ ಶಾಂತಿಗೆ ತಿರುಗೇಟು ನೀಡಿದ ಮೀನಾ

By ಪೂರ್ವ

ಸೂರ್ಯಗೆ ಬಹಳಷ್ಟು ಭಯ ಕಾಡುತ್ತದೆ. ಏನು ಮಾಡಬೇಕು ಎಂದು ದಿಕ್ಕೇ ತೋಚದಂತಾಗುತ್ತೆ. ತಾನು ಮಾಡಿದ್ದು ತಪ್ಪು ಎನ್ನುವುದು ಸೂರ್ಯ ಗೆ ಅದಾಗಲೇ ಅರ್ಥ ಆಗಿತ್ತು. ಹೆಂಡತಿಯನ್ನು ತವರು ಮನೆಗೆ ಹೋಗಬೇಡ ತನ್ನ ಸ್ವಂತದವರ ಬಳಿ ಮಾತನಾಡಬೇಡ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ.

ಹಾಗಿದ್ದಾಗ ನಾನು ಮೀನಾಳ ಮೇಲೆ ದಬ್ಬಾಳಿಕೆ ಮಾಡಿದ್ನಾ ಅಥವಾ ಮೀನಾ ನಾನು ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ ಎನ್ನುವ ಕೋಪವಾ ಎನ್ನುವ ಆಲೋಚನೆ ಸೂರ್ಯ ಗೆ ಮೂಡುತ್ತದೆ. ಹೇಗಪ್ಪಾ ಮೀನಾ ಬಳಿ ನಾನು ಕ್ಷಮೆ ಕೇಳಲಿ, ನಾನೇನೆ ಮಾಡಿದರು ಮೀನಾ ಮಾತ್ರ ಅದೆಲ್ಲವನ್ನು ತಡೆದುಕೊಂಡು ಬಹಳ ಖುಷಿಯಾಗಿ ಇರುತ್ತಾಳೆ.

kannada serial aase episode 29th April

ಆದರೆ ಇದೀಗ ಆಕೆಯ ಮನಸ್ಸಿಗೆ ಬಹಳಷ್ಟು ಕಷ್ಟ ಕೊಟ್ಟುಬಿಟ್ಟೆ ಎಂದುಕೊಂಡು ಮನದಲ್ಲಿ ಬಹಳ ನೋವು ಪಡುತ್ತಾನೆ..ಹಾಗೆಯೇ ಹೆಂಡತಿ ಗೆ ಏನು ಇಷ್ಟವಾಗಿರುವ ಹಲ್ವಾವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾನೆ.ಮೀನಾ ತನ್ನ ಗಂಡನಿಗಾಗಿ ಬಗೆ ಬಗೆಯ ಊಟ ತಯಾರು ಮಾಡುತ್ತಾಳೆ. ಅಡಿಗೆ ಮಾಡಿದ ಸುವಾಸನೆಗೆ ಶ್ರುತಿ ಪ್ಲಾಟ್ ಆಗಿ ಬಿಡುತ್ತಾಳೆ.

ಆಕೆ ಕೂಡಲೇ ಸೌಟಿನಲ್ಲಿ ರಸಂ ಟೇಸ್ಟ್ ಮಾಡುತ್ತಾಳೆ. ಇದನ್ನು ನೋಡಿದ ಶಾಂತಿ ಗೆ ಹೇಸಿಗೆ ಎನಿಸುತ್ತದೆ.ಮತ್ತೆ ಅದರಲ್ಲಿಯೇ ಸಾಂಬಾರ್ ಹಾಕಿಕೊಂಡು ಊಟ ಮಾಡಬೇಕಲ್ವ ಎನ್ನುವ ಆಲೋಚನೆ ಮಾಡುತ್ತಾಳೆ. ಮನೋಜ ಮನೆಯ ಹಾಲ್ ಗೆ ಬಂದಾಗ ಆತನಿಗೆ ಅಡುಗೆಯ ಸುಹಾಸನೆಗೆ ಹೊಟ್ಟೆ ಹಸಿವು ಜಾಸ್ತಿಯಾಗಿ ಬಿಡುತ್ತದೆ. ಎಲ್ಲರೂ ಸೇರಿ ಬಹಳ ಖುಷಿಯಾಗಿ ಊಟ ಮಾಡುತ್ತಾರೆ

ಊಟ ಮಾಡುವ ಭರದಲ್ಲಿ ಅಡುಗೆಯನ್ನು ಖಾಲಿ ಮಾಡಿ ಬಿಡುತ್ತಾಳೆ. ಇದರಿಂದಾಗಿ ಮೀನಾ ಕೊಂಚ ಬೇಸರ ಪಡುತ್ತಾಳೆ. ಅಡುಗೆಯನ್ನು ಹೇಗಾದರೂ ಮಾಡಿ ತನ್ನ ಗಂಡನಿಗೆ ಬಡಿಸಬೇಕು ಎಂದು ಆಕೆ ಅಂದುಕೊಂಡಿರುತ್ತಾಳೆ.

ಆದರೆ ಅಡುಗೆ ಒಂದು ಚೂರೂ ಬಿಡದೆ ಖಾಲಿ ಆಗಿರುವುದನ್ನು ನೋಡಿ ಮೀನಾ ಗೆ ಕಣ್ಣಲ್ಲಿ ನೀರು ಬರುತ್ತದೆ. ತನ್ನ ಗಂಡ ಇವತ್ತಾದರು ನೀಟಾಗಿ ಬರಲಿ ಎಂದು ಆಕೆ ಮನದಲ್ಲಿ ಅಂದುಕೊಳ್ಳುತ್ತಾಳೆ. ಹಾಗೆಯೇ ಎಲ್ಲರ ಜೊತೆಗೆ ಖುಷಿಯಾಗಿ ಇರಲಿ.ಮುನಿಸಿಕೊಂಡಿದ್ದರೆ ಖಂಡಿತವಾಗಿಯೂ ತನ್ನ ಗಂಡನನ್ನು ಸಮಾಧಾನ ಮಾಡುವುದು ಕಷ್ಟ ಸಮಾಧಾನದಿಂದ ಇದ್ದರೆ ಅದುವೇ ನನ್ನ ಅದೃಷ್ಟ ಎಂದು ಆಕೆ ಭಾವಿಸುತ್ತಾಳೆ.

ಸೂರ್ಯನ ಪ್ರೀತಿ ಮಾತು ಕೇಳಿ ಆಶ್ಚರ್ಯಗೊಂಡ ಮೀನಾ

ಸೂರ್ಯ ಮನೆಗೆ ಬರುತ್ತಾನೆ ಹೆಂಡತಿಯನ್ನು ಹುಡುಕಿಕೊಂಡು ರೂಮ್ ಗೆ ಹೋಗುತ್ತಾನೆ.ಸೂರ್ಯ ಬರುವುದನ್ನು ನೋಡಿದ ಮೀನಾ ಎನು ಮಾತನಾಡದೆ ಕುಳಿತುಕೊಂಡು ಸೀರೆ ಮಡಚಿಟ್ಟುಕೊಂಡಿರುತ್ತಾಳೆ. ಮೆತ್ತಗೆ ಹೆಂಡತಿ ಬಳಿಗೆ ಬಂದ ಸೂರ್ಯ, ನಿನಗೆ ಇಷ್ಟಾಂತ ಹಲ್ವಾ ತೆಗೆದುಕೊಂಡು ಬಂದೆ ತಿನ್ನು ಎಂದು ಹೇಳಿದಾಗ ಮೀನಾ ಗೆ ಕೊಂಚ ಶಾಕ್ ಆಗುತ್ತದೆ.ಖುಷಿ ದುಪ್ಪಟ್ಟು ಆಗುತ್ತದೆ.

ಹಾಗೆಯೇ ಅವರಿಬ್ಬರ ಕೋಪ ತಾಪ ಶಮವಾಯಿತು. ಅವರಿಬ್ಬರೂ ಊಟಕ್ಕೆ ಎಂದು ಡೈನಿಂಗ್ ಟೇಬಲ್ ಬಳಿಗೆ ಬಂದಾಗ ರವಿ ಬರುತ್ತಾನೆ. ಅಣ್ಣನನ್ನು ನೋಡಿ ಅಣ್ಣ ನಿನಗೆ ಸ್ವಲ್ಪ ಕೂಡ ಉಳಿಸದೆ ತಿಂದು ಬಿಟ್ಟೆವು.ಇವತ್ತು ಅತ್ತಿಗೆ ಬಹಳ ಚೆನ್ನಾಗಿ ಅಡುಗೆ ಮಾಡಿದ್ರು ಹಾಗೆಯೇ ಎಲ್ಲರೂ ಮೈ ಮರೆತು ತಿಂದೆವು. ಸ್ವಲ್ಪ ಜಾಸ್ತಿ ತಿಂದು ಬಿಟ್ಟೆವು ಎಂದು ಹೇಳುತ್ತಾನೆ.

ರವಿ ಮಾತಿಗೆ ರೇಗಿದ ಸೂರ್ಯ

ಈ ಮಾತು ಕೇಳಿದ ಸೂರ್ಯ ಮಾತ್ರ ಅಯ್ಯೋ ನನಗೆ ಸ್ವಲ್ಪನದರು ಎತ್ತಿಡಬೇಕಿತ್ತು ಎಂದು ಹೇಳಿದಾಗ ಮೀನಾ ಒಳಗಿನಿಂದ ಚಪಾತಿ ಅಣ್ಣ ಸರಿ ತೆಗೆದುಕೊಂಡು ಬರುತ್ತಾಳೆ.ಇದನ್ನು ನೋಡಿದ ಸೂರ್ಯ ಗೆ ಖುಷಿ ಆಗುತ್ತದೆ.ಇಬ್ಬರು ಖುಷಿಯಿಂದ ಊಟ ಮಾಡುವುದನ್ನು ದೂರದಿಂದ ಶಾಂತಿ ನೋಡುತ್ತಾ ಹೊಟ್ಟೆಯುರಿ ಪಡುತ್ತಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X