Aase ;ರೋಹಿಣಿ ಮೇಲೆ ಮೀನಾಗೆ ಹೆಚ್ಚಿದ ಅನುಮಾನ, ಅತ್ತೆಯನ್ನು ಹೆದರಿಸಿದ ಶ್ರುತಿ..!

By ಪೂರ್ವ

ರೋಹಿಣಿ ಮೇಲೆ ಮೀನಾಗೆ ಬಹಳಷ್ಟು ಅನುಮಾನ ಹೆಚ್ಚಾಗಿದೆ. ಎಲ್ಲಾದರೂ ರೋಹಿಣಿ ಗೆ ಮಗ ಇರುವ ವಿಚಾರ ಗೊತ್ತಾದರೆ ಖಂಡಿತವಾಗಿಯೂ ಶಾಂತಿ ಸುಮ್ಮನೆ ಇರುವ ಮಾತೆ ಇಲ್ಲ. ಶಾಂತಿ ಗೆ ಬಹಳ ಕೋಪ. ಅದರಲ್ಲೂ ಮನೋಜ ಅಂದರೆ ಬಹಳ ಪ್ರೀತಿ. ಮನೋಜನ ಹೆಂಡತಿ ಬಳಿ ಹಣ ಇಲ್ಲ ಎಂದು ಗೊತ್ತಾದರೆ ಖಂಡಿತವಾಗಿಯೂ ರೋಹಿಣಿಯ ಕಥೆ ಮುಗಿಸಿ ಬಿಡುತ್ತಾಳೆ ಶಾಂತಿ.

ಮೀನಾ ಮನೆಯಲ್ಲಿ ಬಡವರು.ಅವರ ಬಳಿ ಹಣವಿಲ್ಲ ಎಂದು ಗೊತ್ತಾದ ಬಳಿಕ ಮೀನಾಳನ್ನು ತುಚ್ಛವಾಗಿ ಕಾಣುವುದು ಹಾಗೆಯೇ ಆಕೆಯ ಜೊತೆಗೆ ಅಸಹ್ಯವಾಗಿ ನಡೆದುಕೊಳ್ಳುವುದು ಇದೆ ಶಾಂತಿ ಮಾಡುತ್ತಿರುವುದು. ರೋಹಿಣಿ ಬಂಡವಾಳ ಶಾಂತಿ ಗೆ ತಿಳಿದರೆ ಖಂಡಿತವಾಗಿಯೂ ಶಾಂತಿ ಗೆ ಅದೇ ಗತಿ. ಮೀನಾ ರೋಹಿಣಿ ಯ ಬಗ್ಗೆ ಮನೆಯವರ ಬಳಿ ಹೇಳಿದ್ದು ಕನಕ ಕೆಲಸಕ್ಕೆ ಕುತ್ತು ತಂದಿದೆ. ಕನಕ ಸಂಬಳವನ್ನು ಕಟ್ ಮಾಡಿದ್ದಾರೆ ಇದರಿಂದ ಕನಕ ಗೆ ಬಹಳ ನೋವಾಗುತ್ತದೆ. ಆದರೆ ಯಾರ ಜೊತೆಗೆ ಎನು ಹೇಳಲು ಆಗುವುದಿಲ್ಲ.

kannada-serial-aase-episode-3rd-may

ಇತ್ತ ಮೀನಾ ಶ್ರುತಿ ಜತೆ ಸೇರಿಕೊಂಡು ದೆವ್ವ ದ ಸಿನಿಮಾವನ್ನು ನೋಡುತ್ತಿರುತಾಳೆ. ಮೊದಲೇ ಶ್ರುತಿ ಹಾಗೂ ಮೀನಾ ಗೆ ಕೊಂಚ ಭಯ . ಅದರಲ್ಲೂ ಶಾಂತಿ ಗೆ ಬಹಳಷ್ಟು ಭಯ. ಶಾಂತಿ ಮೊದಲು ಬಂದು ಶ್ರುತಿ ಹಾಗೂ ಮೀನಾ ಗೆ ಬುದ್ದಿ ಹೇಳಿದ್ದ ಶಾಂತಿ ಬಳಿಕ ಶ್ರುತಿ ಮಾಡಿದ ಕಿತಾಪತಿ ಕೆಲಸದಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾಳೆ. ಬಳಿಕ ತನ್ನನ್ನು ಹೆಸರಿಸಲು ಶ್ರುತಿ ಹೀಗೆಲ್ಲ ಮಾಡಿದಳು ಎಂದು ತಿಳಿದು ಬಹಳ ಕೋಪ ಬರುತ್ತದೆ. ಆದರೆ ಆಕೆಯ ಕೋಪಕ್ಕೆ ಯಾರು ಸೊಪ್ಪು ಹಾಕುವುದಿಲ್ಲ. ಬೇಕು ಬೇಕೆಂದೇ ಮೀನಾ ಗೆ ಶಾಂತಿ ಬೈಯುತ್ತಾಳೇ. ಆದರೆ ಶ್ರುತಿ ಮಾತ್ರ ಅತ್ತೆಯ ಕೆಟ್ಟ ಮಾತುಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡುತ್ತಾಳೆ.

ಅಮ್ಮನ ತಾಳಕ್ಕೆ ಕುಣಿಯುತ್ತಿರುವ ಮನೋಜ

ಮನೋಜ್ ಕೂಡ ಅಮ್ಮನ ಜೊತೆಗೆ ಸೇರಿ ಬಹಳ ತೀಕ್ಷ್ಣವಾಗಿ ಮಾತನಾಡುತ್ತಾನೆ. ರಾತ್ರಿಯಿಡೀ ದುಡಿಯುವ ಗಂಡನನ್ನು ನೋಡಿ ಮೀನಾಗೆ ಬಹಳ ಬೇಸರವಾಗುತ್ತದೆ. ಮನೆಯಲ್ಲಿ ಒಂದು ರೂಮ್ ಕಟ್ಟಬೇಕು ಎಂದುಕೊಂಡು ಇದ್ದ ಬದ್ದ ಹಣವನ್ನು ಕೂಡಿತ್ತದ್ದೆ ಆಯಿತು. ಇದೀಗ ಸೂರ್ಯ ದಿನವಿಡೀ ದುಡಿಯುತ್ತಿದ್ದ ಹಾಗೆಯೇ ರಾತ್ರಿಯಿಡೀ ದುಡಿಯುತ್ತಿರುತ್ತಾನೆ. ಇದೆಲ್ಲವನ್ನೂ ನೋಡಿ ಮೀನಾ ಗೆ ಬಹಳ ಬೇಸರವಾಗುತ್ತದೆ. ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ.

ಗಂಡನಿಗೆ ಬುದ್ದಿ ಮಾತು ಹೇಳಿದ ಮೀನಾ

ಹಾಗೆಯೇ ಸೂರ್ಯ ಬಳಿ ಮೀನಾ ಹೇಳುತ್ತಾಳೆ ಹೀಗೆಲ್ಲಾ ನೀವು ಕೆಲಸ ಮಾಡುವುದು ಅಗತ್ಯವಿಲ್ಲ ಮೊದಲಿಗೆ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಅದಾದ ಬಳಿಕ ನಮಗೆ ಕೆಲಸ ಮುಖ್ಯ ಮೊದಲು ಆರೋಗ್ಯ ಮುಖ್ಯ ಇದರಿಂದ ರಾತ್ರಿ ಇಡೀ ನೀವು ಕಾರಣ ಓಡಿಸುವುದು ನನಗೆ ಹಾಗೂ ಸರಿ ಕಾಣಿಸುವುದಿಲ್ಲ ಎಂದು ನೀನು ಹೇಳುತ್ತಾಳೆ. ಅದಕ್ಕೆ ಏನೋ ಒಂದು ಸಬೂಬ್ ಮಾತನ್ನ ಹೇಳಿದ ಸೂರ್ಯ ಬಳಿಕ ಸುಮ್ಮನಾಗುತ್ತಾನೆ. ರೋಹಿಣಿಗೆ ಇದೀಗ ಬಹಳ ಭಯ ಕಾಣುತ್ತದೆ ಮೀನ ಹಾಗೂ ಸೂರ್ಯ ಸಾಮಾನ್ಯದಲ್ಲ ಯಾವತ್ತಾದರೂ ಒಂದು ದಿನ ನನ್ನ ವಿಚಾರ ಖಂಡಿತವಾಗಿಯೂ ಹೊರಗೆ ಬರುತ್ತದೆ ಎನ್ನುವುದು ನನಗೆ ತಿಳಿದಿದೆ .

ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ರೋಹಿಣಿ

ಆದರೆ ವಿಚಾರವನ್ನು ಮುಚ್ಚಿಡಲಿಲ್ಲ ಎಂದಾದರೆ ಖಂಡಿತವಾಗಿಯೂ ನನಗೆ ಉಳಿಗಾಲವಿಲ್ಲ ನನಗೆ ಮದುವೆಯಾಗಿ ಮಗ ಇದ್ದಾನೆ ಎಂದು ತಿಳಿದರೆ ಖಂಡಿತವಾಗಿಯೂ ನನ್ನ ಅತ್ತೆ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಹಾಗೆ ನನಗೆ ಈ ಮನೆಯಲ್ಲಿ ಜಾಗ ಕೂಡ ಇರುವುದಿಲ್ಲ ಅದೇ ನಾನು ಮನೋಜನ ಮಗುವಿಗೆ ತಾಯಿ ಆದರೆ ಆ ಬಳಿಕ ವಿಚಾರ ತಿಳಿದರು ಏನು ತೊಂದರೆ ಇಲ್ಲ ಎಂದು ಮನದಲ್ಲಿ ಹೇಳಿಕೊಳ್ಳುತ್ತಾರೆ.

ಆದರೆ ಮನೋಜ ಮಾತ್ರ ನನ್ನ ರೋಹಿಣಿ ಖಂಡಿತವಾಗಿಯೂ ಏನು ತಪ್ಪು ಮಾಡುವುದಿಲ್ಲ ಆಕೆ ಎಲ್ಲವನ ನಮ್ಮ ಬಳಿ ಹೇಳಿಕೊಳ್ಳುತ್ತಾಳೆ ಏನು ಆಲೋಚನೆಯಲ್ಲಿ ದಿನ ಕಳೆಯುತ್ತಿದ್ದಾನೆ ಆದರೆ ರೋಹಿಣಿ ಎಲ್ಲ ವಿಚಾರವನ್ನ ಮನೋಜನಿಂದ ಮುಚ್ಚಿಟ್ಟಿದ್ದಾಳೆ. ಆಕೆಯ ಸ್ವಾರ್ಥ ಮನೋಭಾವದಿಂದ ರೋಹಿಣಿಯ ತಾಯಿಗೆ ಬಹಳ ಬೇಸರವಾಗುತ್ತದೆ. ರೋಹಿಣಿ ತಾಯಿಗೆ ರೋಹಿಣಿ ಎಂದರೆ ಪಂಚ ಪ್ರಾಣ. ಆದರೆ ರೋಹಿಣಿ ಮಗನನ್ನು ನೋಡಿಕೊಳ್ಳುವುದು ಆಕೆಗೆ ಬಹಳ ಕಷ್ಟ. ಮಗು ದೊಡ್ಡದಾಗುತ್ತಿದೆ. ತನ್ನ ತಂದೆ ತಾಯಿಯ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಇದಕ್ಕೆಲ್ಲ ಹೇಗೆ ಉತ್ತರ ನೀಡಲಿ ಎನ್ನುವುದು ಆಕೆಯ ಆಲೋಚನೆ.

More from Filmibeat

English summary
kannada serial aase episode 3rd may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X