Actor Arjun:'ಅರಮನೆ ಗಿಳಿ' ಧಾರಾವಾಹಿ ನಟನಿಗೆ ಭರ್ಜರಿ ಚಾನ್ಸ್.. ಹೀರೊ ಆಗಿ 'ಅನಾವರಣ'ಗೊಂಡ ಅರ್ಜುನ್
ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ನಿರ್ದೇಶಿಸಿರುವ ಹೊಚ್ಚ ಹೊಸ ಸಿನಿಮಾ 'ಅನಾವರಣ'. ಈ ಸಿನಿಮಾ ಇನ್ನೇನು ಸದ್ಯದಲ್ಲೇ ವೀಕ್ಷಕರಿಗೆ ಅನಾವರಣಗೊಳ್ಳಲಿದೆ. ಈ ಸಿನಿಮಾದಲ್ಲಿ ಎರಡು ನಿರ್ದೇಶಕರು ಕೆಲಸ ಮಾಡಿದ್ದು ಅವರಿಗೆ ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವವಿದೆ.
ಕಿರುತೆರೆಯ ಖ್ಯಾತ ನಟ ಬೆಳ್ಳಿ ತೆರೆಯಲ್ಲಿ ಬಹಳಷ್ಟು ಹೆಸರು ಮಾಡಿರುವ ಅರ್ಜುನ್ ಯೋಗಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದು, ಅವರಿಗೆ ಜೊತೆಯಾಗಿ ಸಾರಿಕಾ ರಾವ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದೊಂದು ಹೊಸ ಸಾಹಿತ್ಯದ ಅನಾವರಣ ಎಂದು ಇದರ ಬಗ್ಗೆ ಮಾತನಾಡಿದ್ದ ನಿರ್ದೇಶಕರು, ಈ ಸಿನಿಮಾ ನಮ್ಮ ನಿಮ್ಮೆಲ್ಲರ ಸಾಮಾನ್ಯರ ಕಥೆ ಎಂದಿದ್ದಾರೆ. ಅತಿಯಾಗಿ ಒಬ್ಬರನ್ನು ಪ್ರೀತಿಸುವುದು ಯಾವ ರೀತಿ ಪೀಕಲಾಟಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಕಥೆಯ ಮೂಲ ವಸ್ತುವಾಗಿದೆಯಂತೆ. ಸಿನಿಮಾ ರಿಲೀಸ್ ಆಗಲು ಇನ್ನೂ ಸಮಯವಿದ್ದು ಈಗಾಗಲೇ ಒಂದು ಹಾಡನ್ನು ಈ ಸಿನಿಮಾ ರಿಲೀಸ್ ಮಾಡಿದೆಯಂತೆ. ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿರುವುದು ಸಿನಿಮಾ ತಂಡಕ್ಕಂತೂ ಖುಷಿ ತಂದಿದೆಯಂತೆ.
ನಟ ಅರ್ಜುನ್ ಯೋಗಿ ಹಾಗೂ ನಟಿ ಸಾರಿಕಾ ರಾವ್ ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಗಣೇಶ್ ಅಕ್ಕಿ, ಹೊನ್ನವಳ್ಳಿ ಕೃಷ್ಣ ನಂದಗೋಪಾಲ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಸೂರ್ಯ ಸಂತು ವಾಣಿ ರಾಜೇಶ್ವರಿ ಕಮಲ ರಥಸಪ್ತಮಿ ಖ್ಯಾತಿಯ ಅರವಿಂದ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಫ್ಯಾಮಿಲಿ ಡ್ರಾಮಾ ಜೊತೆ ಜೊತೆಗೆ ಕ್ರೈಂ ಥ್ರಿಲರ್ ಕಥಾನಕವನ್ನು ಹೊಂದಿರುವ ಈ ಸಿನಿಮಾವನ್ನು ಹಲವಾರು ನಿರ್ಮಾಪಕರು ಸೇರಿ ನಿರ್ಮಾಣ ಮಾಡಿದ್ದಾರೆ.

'ಅರಮನೆ ಗಿಳಿ' ಧಾರಾವಾಹಿ ಖ್ಯಾತಿಯ ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಂತೂ ಬಹಳಷ್ಟು ಹೆಸರು ಮಾಡಿದರು. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಅದ್ಭುತಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿ ತಮ್ಮ ಅಭಿನಯ ಶಕ್ತಿಯನ್ನು ತೋರಿಸಿದರು. ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಚೆನ್ನಾಗಿ ಹೆಸರು ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇವರ 'ಚೇಸ್' ಸಿನಿಮಾ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಕಂಡಿತ್ತು. ಅದರ ಬೆನ್ನಲ್ಲೇ ಇದೀಗ 'ಅನಾವರಣ' ಸಿನಿಮಾ ಸಿಕ್ಕಿರುವುದಕ್ಕೆ ನಟ ಅರ್ಜುನ್ ಯೋಗಿ ಬಹಳ ಖುಷಿಯಾಗಿದ್ದಾರೆ. 'ಚೇಸ್' ಸಿನಿಮಾ ಬಿಡುಗಡೆಯಾದ ದಿನವೇ ಅರ್ಜುನ್‌ಗೆ ಫೋನ್ ಕಾಲ್ ಬಂದಿತಂತೆ. ಈ ಸಿನಿಮಾ ಪ್ರೊಡಕ್ಷನ್ ಹೌಸ್ ಫೋನ್ ಮಾಡಿ ಈ ರೀತಿ ಒಂದು ಸಿನಿಮಾ ಇದೆ ಮಾಡಿ. ನಿಮಗೆ ಪ್ರಮುಖ ಪಾತ್ರ ಎಂದು ಹೇಳಿದಾಗ ಬಹಳಷ್ಟು ಖುಷಿಯಾಯಿತಂತೆ.
'ಅನಾವರಣ' ಸಿನಿಮಾದಲ್ಲಿ ಅರ್ಜುನ್ ಇಂಜಿನಿಯರ್ ಪಾತ್ರ ಮಾಡಿದ್ದಾರೆ. ಅವರಿಗೆ ನಾಯಕಿ ಆಗಿ ನಟಿಸಿರುವ ನಟಿ ಸಾರಿಕಾ ರಾವ್ ತುಂಬಾ ಪಾಸಿಟಿವ್ ಆದ ಒಂದನ್ನು ಪಾತ್ರವನ್ನು ಮಾಡಿದ್ದಾರೆಯಂತೆ. ಇದು ಹೊಸ ಕಥೆ ಹೊಸ ಸಾಹಿತ್ಯದ ಅನಾವರಣ ಎಂದರೆ ತಪ್ಪಾಗಲ್ಲ. ತುಂಬಾ ವಿಭಿನ್ನ ಕಥೆ ಹಾಗೂ ಡೆಡಿಕೇಟೆಡ್ ಡೈರೆಕ್ಟರ್ ಜೊತೆ ಕೆಲಸ ಮಾಡಿದ ಸಂತೋಷ, ಸಂತೃಪ್ತಿ ಅರ್ಜುನ್ ಅವರಿಗಿದೆಯಂತೆ.
'ಅನಾವರಣ' ಸಿನಿಮಾ ಶೂಟಿಂಗ್ ಮುಗಿದಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಡೇಟ್ ಬಿಡುಗಡೆ ಆಗಲಿದ್ದು ಅಭಿಮಾನಿಗಳು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











