ತೆಲುಗು ಓಟಿಟಿಗೆ ಲಗ್ಗೆ ಇಟ್ಟ ಕನ್ನಡದ ಪ್ರತಿಭೆ: 'ಮಂದಾಕಿನಿ' ಕನ್ನಡ ಕಿರುತೆರೆ ನಟ ಚಂದನ್ ಮೋಡಿ

By ಅನಿತಾ ಬನಾರಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯ ನಾಯಕರಾಗಿ ಅಭಿನಯಿಸಿ, 'ಹೆಣ್ಣು ಮಕ್ಕಳ ಹೃದಯ ಕದ್ದ ಆರ್ ಕೆ ಚಂದನ್ ಇದೀಗ ತೆಲುಗು ಧಾರಾವಾಹಿಯೊಂದರ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ಹೊಸದಾಗಿ ಬಿಡುಗಡೆಯಾದ OTT ಧಾರಾವಾಹಿ 'ಮಂದಾಕಿನಿ' ತನ್ನ ಕುತೂಹಲಕಾರಿ ಕಥಾಹಂದರದೊಂದಿಗೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಸರಣಿಯ ಮೊದಲ ನಾಲ್ಕು ಸಂಚಿಕೆಗಳ ಬಗ್ಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರುಪಮ್ ಪರಿಟಾಲ, ವಾಸುದೇವ್ ರಾವ್ ಸೇರಿದಂತೆ ಇನ್ನೂ ಅನೇಕರು ಸೀರಿಯಲ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Kannada serial actor Chandan in Telugu OTT series Mandakini

ಆರ್ಯನಾಗಿ ಮಿಂಚಿದ ಆರ್ ಕೆ ಚಂದನ್

ಅಂದಹಾಗೆ, ಈ ಮಂದಾಕಿನಿ ಧಾರಾವಾಹಿಯ ನಾಯಕ ನಟನಾಗಿ ಆರ್ ಕೆ ಚಂದನ್ ನಾಯಕನಾಗಿ ಆರ್ಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೀತಿ ಮತ್ತು ವಿಮೋಚನೆಯ ಅದ್ಭುತ ಕಥೆಯಾದ 'ಮಂದಾಕಿನಿ'ಯನ್ನು ನಮ್ಮ ಪ್ರೇಕ್ಷಕರಿಗೆ ನೀಡಲು ನಾವು ರೋಮಾಂಚನಗೊಂಡಿದ್ದೇವೆ. ಮೊದಲ ನಾಲ್ಕು ಸಂಚಿಕೆಗಳಿಗೆ ತುಂಬಾ ಚೆನ್ನಾಗಿ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದರು ಆರ್ ಕೆ ಚಂದನ್.

ಧಾರಾವಾಹಿ ವೀಕ್ಷಿಸಿ ಎಂದ ಚಂದನ್

ಇನ್ನು ಇದರ ಜೊತೆಗೆ ವಿಮರ್ಶಕರು ಮತ್ತು ವೀಕ್ಷಕರು ಆರ್ಯ ಮತ್ತು ಮಂದಾಕಿನಿಯನ್ನು ಇಷ್ಟಪಟ್ಟಿದ್ದಾರೆ ಎಂದು ಭಾವಿಸುತ್ತೇನೆ. ಈ ಸರಣಿಯ ಸಂಚಿಕೆಗಳನ್ನು ಉಚಿತವಾಗಿ ನೀಡಲು ನಾವು ಸಂತೋಷಪಡುತ್ತೇವೆ ಮತ್ತು ಧಾರಾವಾಹಿಯನ್ನು ವೀಕ್ಷಿಸುವಂತೆ ಎಲ್ಲರಲ್ಲೂ ಕೋರಿಕೊಳ್ಳುತ್ತೇವೆ ಎಂದು ಆರ್ ಕೆ ಚಂದನ್ ಹೇಳಿದ್ದಾರೆ.

ಮಂದಾಕಿನಿಯ ಕಥಾ ಹಂದರ ಇದೇ ನೋಡಿ

ಅಂದಹಾಗೆ, ಈ ಸೀರಿಸ್ ಆರ್ಯ (ಆರ್‌ಕೆ ಚಂದನ್) ಎಂಬ ಜಾಹೀರಾತು ನಿರ್ದೇಶಕನ ಸುತ್ತ ಸುತ್ತುತ್ತದೆ. ಅವನು ಹುಡುಗಿಯೊಬ್ಬಳ ಕನಸನ್ನು ಕಾಣುತ್ತಾನೆ ಮತ್ತು ಅಂತಿಮವಾಗಿ ಅವಳನ್ನು ಅಂದರೆ ಮಂದಾಕಿನಿಯನ್ನು ಹುಡುಕುತ್ತಾನೆ. ಆದರೆ ಆಕೆಯನ್ನು ತೆಲಂಗಾಣದ ತನ್ನ ಹಳ್ಳಿಯನ್ನು ಕಾಡುವ ಶಾಪ ಕಾಡುತ್ತದೆ. ಶಾಪವನ್ನು ಮುರಿಯಲು, ಆರ್ಯನು ಶಾಪಗ್ರಸ್ತ ಪಟ್ಟಣದ ಹಳೆಯ ದೇವಾಲಯದಲ್ಲಿ ಮಂದಾಕಿನಿಯೊಂದಿಗೆ ಪೂಜೆಯನ್ನು ಮಾಡಬೇಕಾಗಿರುತ್ತದೆ.

Kannada serial actor Chandan in Telugu OTT series Mandakini

ಆದರೆ ಕಾಳಿಂಗವರ್ಮ (ಮಿಥುನ್) ಎಂಬ ವ್ಯಕ್ತಿ ಸೇರಿದಂತೆ ಹಲವರು ಇದಕ್ಕೆ ಅಡ್ಡಿಯಾಗಿರುತ್ತಾರೆ. ದಾರಿಯುದ್ದಕ್ಕೂ, ಆರ್ಯ ಶಾಪ ಮತ್ತು ವೇದಾವತಿಯ (ಜಯಲಲಿತಾ) ಕುಟುಂಬದ ಬಗ್ಗೆ ಸತ್ಯವನ್ನು ಕಂಡುಕೊಳ್ಳುತ್ತಾನೆ, ಅಂತಿಮವಾಗಿ ಮಂದಾಕಿನಿಯನ್ನು ಉಳಿಸಲು ಮತ್ತು ಶಾಪವನ್ನು ಮುರಿಯುವಲ್ಲಿ ಕೆಲಸ ಮಾಡುತ್ತಾನೆ ಎಂಬುದು ಕಥೆಯ ಸಂಕ್ಷಿಪ್ತ ರೂಪ. ಇದನ್ನು ಚೆನ್ನಾಗಿ ಅರಿತುಕೊಳ್ಳಬೇಕಾದರೆ ದಿನನಿತ್ಯ ಈ ಸೀರಿಸ್ ಅನ್ನು ವೀಕ್ಷಿಸಲೇಬೇಕು.

More from Filmibeat

English summary
RK Chandan of Mangalyam Tantu Nanena fame is playing the protagonist Arya in Telugu OTT series Mandakini, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X