ಭಾಗ್ಯಲಕ್ಷ್ಮೀ ಧಾರಾವಾಹಿಗೆ ಎಂಟ್ರಿಕೊಟ್ಟ ರಾಜೇಶ್ ಧ್ರುವ, ಪೂಜಾಗೆ ಕಿಶನ್ ಜೋಡಿಯಾಗುತ್ತಾನಾ?
ಭಾಗ್ಯಲಕ್ಷ್ಮೀ ಧಾರಾವಾಹಿಗೆ ರಾಜೇಶ್ ಧ್ರುವ ಎಂಟ್ರಿ ಕೊಟ್ಟಿದ್ದಾರೆ. ರಾಜೇಶ್ ಧ್ರುವ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ ಎಲ್ಲರ ಮನ ಮಾತಾಗಿದ್ದ ರಾಜೇಶ್ ಧ್ರುವ ಇದೀಗ ಭಾಗ್ಯ ಲಕ್ಷ್ಮೀ ಧಾರವಾಹಿ ಮೂಲಕ ಜನರ ಗೆಲ್ಲಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾರೆ. ಭಾಗ್ಯ ತಂಗಿ ಪೂಜಾ ಗೆ ಜೋಡಿಯಾಗಿ ನಟಿಸಲು ರಾಜೇಶ್ ಆಗಮಿಸಿದ್ದು ಅಭಿಮಾನಿಗಳಿಗೆ ಭರ್ಜರಿ ಮನೋರಂಜನೆಯನ್ನು ನೀಡುತ್ತಿದ್ದಾರೆ.
ರಾಜೇಶ್ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ. ಆದರೆ ಅವರಿಗೆ ಬಹಳಷ್ಟು ಖ್ಯಾತಿ ಗಳಿಸಿಕೊಟ್ಟ ಧಾರಾವಾಹಿಗಳಲ್ಲಿ ಅಗ್ನಿ ಸಾಕ್ಷಿ ಧಾರವಾಹಿಯೊಂದು. ಇದೀಗ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್ ಪಾತ್ರದಲ್ಲಿ ಕಾಣಿಸಿಕೊಂಡ ನಟನ ಆಕ್ಟಿಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಶ್ರೀ ಗೌರಿ ಧಾರವಾಹಿಯಲ್ಲಿ ಖಳ ನಾಯಕನಾಗಿ ಮಿಂಚಿದ ನಟ ರಾಜೇಶ್ ಧ್ರುವ. ನಟನೆಯಲ್ಲಿ ಯಾವ ಪಾತ್ರ ಕೊಟ್ಟರು ಬಹಳ ಅದ್ಭುತವಾಗಿ ಅಭಿನಯ ಮಾಡುವ ಚಾತುರ್ಯತೆಯನ್ನು ರಾಜೇಶ್ ಕರಗತ ಮಾಡಿಕೊಂಡಿದ್ದಾರೆ.ಉದಯ ವಾಹಿನಿಯ 'ನಾತಿಚರಾಮಿ'ಧಾರಾವಾಹಿಯಲ್ಲಿ.ಅಭಿನಯ ಮಾಡುತ್ತಿದ್ದಾರೆ.

ಹಾಗೆಯೇ ಸುವರ್ಣ ಚಾನೆಲ್ ನಲ್ಲಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ಶಾರದ ಧಾರಾವಾಹಿಯಲ್ಲಿ ರಾಜೇಶ್ ಅಭಿನಯ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಶಾರದ ಗಂಡನ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಇದೀಗ ಭಾಗ್ಯ ಲಕ್ಷ್ಮೀಯಲ್ಲಿ ಪೂಜಾ ಗೆ ಜೋಡಿಯಗಲು ರಾಜೇಶ್ ಧ್ರುವ ಆಗಮಿಸಿದ್ದಾರೆ. ಈಗಾಗಲೇ ಪೂಜಾ ಗೆ ಹಳೆಯ ಗೆಳೆಯನನ್ನು ನೋಡಿ ಬಹಳಷ್ಟು ಖುಷಿ ಆಗುತ್ತದೆ. ಹಾಗೆಯೇ ಪ್ಲಾಷ್ ಬ್ಯಾಕ್ ನಲ್ಲಿ ಏನೆಲ್ಲಾ ನಡೆಯಿತು ಎಂಬುವುದನ್ನು ಯೋಚನೆ ಮಾಡಿ ಇಬ್ಬರು ನಕ್ಕು ಸುಸ್ತಾಗಿರುತ್ತಾರೆ. ಇನ್ನು ಪೂಜಾನ ಮೇಲೆ ಕಿಶನ್ ಗೆ ಕಾಲೇಜು ಲೈಪ್ ನಲ್ಲಿ ಲವ್ ಆಗಿರುತ್ತೆ ಆದರೆ ಅದನ್ನು ಎಕ್ಸ್ಪ್ರೆಸ್ ಮಾಡದೆ ಕಾಲೇಜು ಮುಗಿದ ಬಳಿಕ ಒಳ್ಳೆಯ ಕಂಪನಿಯನ್ನು ಶುರು ಮಾಡುತ್ತಾನೆ.
ಪೂಜಾಳನ್ನು ನೋಡಿ ಖುಶಿಪಟ್ಟಿದ್ದ ಕಿಶನ್
ಅದೇ ಕಂಪನಿಗೆ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಕೆಲಸ ಕೇಳಿಕೊಂಡು ಬಂದಾಗ ಕಿಶನ್ ಗೆ ಜಾಕ್ ಪಾಟ್ ಹೊಡೆದ ಹಾಗಾಗುತ್ತದೆ. ಆತ ಬಹಳ ಖುಷಿ ಪಡುತ್ತಾನೆ. ಹಾಗೆಯೇ ಪೂಜಾಗೆ ಕೆಲಸ ಕೊಡುತ್ತಾನೆ. ಆದರೆ ಬಾಸ್ ಅನ್ನೇ ನೋಡದ ಪೂಜಾಗೆ ಕೊಂಚ ತಲೆಬಿಸಿ ಆಗುತ್ತದೆ. ಕೊನೆಗೆ ಕೆಲಸ ಬಿಟ್ಟು ಹೋಗುತ್ತೇನೆ ಎನ್ನುವವರೆಗೆ ಹೋಗುತ್ತದೆ. ಆಗ ಕಿಶನ್ ಪೂಜಾ ಗೆ ಕಾಣಿಸಿಕೊಳ್ಳುತ್ತಾನೆ. ಆತನನ್ನು ನೋಡಿದ ಪೂಜಾ ಗೆ ಬಹಳಷ್ಟು ಶಾಕ್ ಆಗುತ್ತದೆ ಹಾಗೆಯೇ ಅವರಿಬ್ಬರೂ ಕಾಲೇೆಜಿನದಲ್ಲಿ ನಡೆದ ಘಟನೆಗಳನ್ನು ನೆನೆದು ಬಹಳ ಖುಷಿ ಪಡುತ್ತಾಳೆ.
ಭಾಗ್ಯಗೆ ಮೇಲೆ ಒತ್ತಡ ಹೇರಿದ ತಾಯಿ
ಇತ್ತ ಭಾಗ್ಯಗೆ ತನ್ನ ತಾಯಿಗೆ ಮಾತು ಕೊಟ್ಟಿದ್ದಾಳೆ. ಏನೇ ಆದರೂ ಕೂಡ ನಾನು ಪೂಜಾ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳುತ್ತಾಳೆ. ಇದೀಗ ಭಾಗ್ಯ ಗೆ ಪೂಜಾ ಮದುವೆಯ ಬಗ್ಗೆಯೂ ಕೊಂಚ ತಲೆ ನೋವು ಶುರುವಾಗಿದೆ. ಭಾಗ್ಯ ಬಗ್ಗೆ ಜನರು ಬಹಳ ಕೆಟ್ಟದಾಗಿ ಮಾತನಾಡುತ್ತಿರುವುದರಿಂದ ಸುನಂದಾ ಗೆ ಬಹಳ ಭಯವಾಗುತ್ತದೆ . ಇದರಿಂದ ಭಾಗ್ಯ ಬಳಿ ಪೂಜಾ ಜವಾಬ್ಧಾರಿ ನಿಂದು ಆಕೆಗೆ ನೀನೇ ಮದುವೆ ಮಾಡಬೇಕು ಎಂದು ಹೇಳುತ್ತಾಳೆ.


Click it and Unblock the Notifications











