Sapna Deekshith ; ಕುಟುಂಬದವರ ಜೊತೆ ಸ್ವಪ್ನ ಫೋಟೋ ಶೂಟ್, ಅಭಿಮಾನಿಗಳು ಫುಲ್ ಖುಷ್..!

By ಪೂರ್ವ

ಇತ್ತೀಚಿನ ದಿನಗಳಲ್ಲಿ ಸ್ವಪ್ನ ದೀಕ್ಷಿತ್ ಸೀರಿಯಲ್ ಗಳಲ್ಲಿ ನಟನೆ ಮಾಡುತ್ತಾ ಬ್ಯುಸಿಯಾಗಿ ಇದ್ದಾರೆ . ಇದೀಗ ಶ್ರೀರಸ್ತು ಶುಭಮಸ್ತು ಧಾರವಾಹಿ ಮೂಲಕ ಮಿಂಚುತ್ತಿರುವ ನಟಿ ವಿಲನ್ ರೋಲ್ ಮಾಡುತ್ತಿದ್ದಾರೆ. ಶಾರ್ವರಿ ಪಾತ್ರಧಾರಿಯಾಗಿ ನಟನೆ ಮಾಡುತ್ತಿದ್ದು ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ಶಾರ್ವರಿ ಪಾತ್ರಧಾರಿಯ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನೂ ಸ್ವಪ್ನ ದೀಕ್ಷಿತ್ ಗೆ ನಟನೆ ಎಂದರೆ ಪಂಚ ಪ್ರಾಣ. ಹಾಗೆಯೇ ಅಭಿನಯ ಮಾಡಬೇಕಾದರೆ ಬಹಳ ಖಡಕ್ ಆಗಿ ನಟನೆ ಮಾಡುವ ಇವರು ಇವರ ಫ್ಯಾಮಿಲಿ ಗೆ ಅಷ್ಟೇ ಪ್ರಾಶಸ್ತ್ಯ ನೀಡುತ್ತಾರೆ.

ಹಾಗೆಯೇ ಸೀರಿಯಲ್ ನಲ್ಲಿ ಬಹಳ ಜೋರಾಗಿ ಮಾತನಾಡುವ ಇವರು ನಿಜ ಜೀವನದಲ್ಲಿ ತುಂಬಾನೇ ಶಾಂತ ಸ್ವಭಾವದವರು.ಆದರೆ ಇವರನ್ನು ನೋಡಿದರೆ ಅನೇಕ ಜನರು ಮೂಗು ಮುರಿದುಕೊಂಡು ಹೋಗುತ್ತಾರೆ. ಇದೆಲ್ಲ ನೋಡಿದರೆ ಸ್ವಪ್ನ ಗೆ ಬಹಳ ಖುಷಿಯೂ ಆಗುತ್ತದೆ. ಮೊದಲನೇ ಬಾರಿಗೆ ಸ್ವಪ್ನ ನಿರೂಪಣೆ ಮಾಡುತ್ತಾ ಕೆಲಸವನ್ನು ಮಾಡುತ್ತಿದ್ದರು ಅದಾದ ಬಳಿಕ ಅವರನ್ನು ಧಾರಾವಾಹಿಗಳು ಅರಸುತ್ತಾ ಬಂತು. ದಂಡ ಪಿಂಡಗಳು, ದುಡ್ಡು ದುಡ್ಡು ದುಡ್ಡು, ಕಮಲಿ , ಇಂತಿ ನಿಮ್ಮ ಆಶಾ , ಗಿರಿಜಾ ಕಲ್ಯಾಣ' 'ಮಾಂಗಲ್ಯ' 'ಇತಿಹಾಸ', ಅಂಜಲಿ', 'ಜನನಿ', ಬೆಳ್ಳಿತೆರೆ', ಹೀಗೆ ಅನೇಕ ಧಾರಾವಾಹಿಗಳಲ್ಲಿ ಈಕೆ ನಟನೆಯನ್ನು ಮಾಡುತ್ತಾರೆ.

ಇವರ ನಟನೆಯನ್ನು ನೋಡಿದ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ . ಇನ್ನೂ ಸ್ವಪ್ನ ದೀಕ್ಷಿತ್ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಕೂಡ ಲಭಿಸಿದೆ . ಸಾಕಷ್ಟು ಸಿನಿಮಾದಲ್ಲಿ ಕೂಡ ಪೋಷಕ ಪಾತ್ರದಲ್ಲಿ ಸ್ವಪ್ನ ದೀಕ್ಷಿತ್ ಮಿಂಚಿದ್ದಾರೆ. ರಂಗಿ ತರಂಗ, ರನ್ನ, ಭರ್ಜರಿ', ಕೃಷ್ಣ ರುಕ್ಕು, 'ಬನಾರಸ್' 'ಶಿವಲಿಂಗ', 'ಮುಕುಂದ ಮುರಾರಿ' ಹೀಗೆ ಅನೇಕ ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡು ಇದ್ದಾರೆ.

ಕುಟುಂಬದವರೊಂದಿಗೆ ಕಾಲ ಕಳೆಯುತ್ತಿರುವ ನಟಿ

ಇದೀಗ ಸ್ವಪ್ನ ದೀಕ್ಷಿತ್ ಕುಟುಂಬದವರೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ . ಹಾಗೆಯೇ ತನ್ನ ಗಂಡ, ಹಾಗೂ ಮಗಳೊಂದಿಗೆ ಮುದ್ದಾದ ಫೋಟೋವನ್ನು ತೆಗೆದುಕೊಂಡು ಬಹಳ ಖುಷಿ ಪಟ್ಟಿದ್ದಾರೆ.ಈ ಫೋಟೋ ನೋಡಿದ ಸ್ವಪ್ನ ಅಭಿಮಾನಿಗಳು ಬಹಳ ಖುಷಿ ಪಡುತ್ತಿದ್ದಾರೆ. ಹೆತ್ತವರ ವಿರೋಧದಿಂದ ಪ್ರೀತಿಸಿ ಅಶ್ವಿನ್ ಅವರನ್ನು ಮದುವೆ ಆಗಿದ್ದರು. ಅದಾದ ಬಳಿಕ ಬಣ್ಣದ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು ಸ್ವಪ್ನ. ಸ್ವಪ್ನ ಅವರಿಗೆ ಮುದ್ದಾದ ಮಗಳಿದ್ದಾಳೆ

kannada-serial-actor-sapna-deekshith-family-photo-shoot

ಪ್ರೀತಿಸಿ ಮದುವೆಯಾದ ನಟಿ

ಮಗಳ ಹೆಸರು ತ್ರಿಶಾ. ಸ್ವಪ್ನಾ ದೀಕ್ಷಿತ್ ಅವರ ಫ್ಯಾಮಿಲಿ ಫೋಟೋ ನೋಡಿ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಸ್ವಪ್ನಾ ದೀಕ್ಷಿತ್ ಧಾರಾವಾಹಿಗಳಲ್ಲಿ ಅದೆಷ್ಟೇ ಬ್ಯುಸಿ ಆಗಿದ್ದರು ತನ್ನ ಮುದ್ದಾದ ಕುಟುಂಬಕ್ಕೆ ಇವರು ಸಮಯವನ್ನು ಮೀಸಲು ಇಡುತ್ತಾರೆ. ಹಾಗೆಯೇ ತನ್ನ ಫ್ಯಾಮಿಲಿ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಹಲವು ಧಾರಾವಾಹಿಗಳಲ್ಲಿ ಅಭಿನಯ

ಇನ್ನೂ ಸ್ವಪ್ನ ದೀಕ್ಷಿತ್ ಅವರನ್ನು ಅರಸಿಕೊಂಡು ಸಾಕಷ್ಟು ಸಿನಿಮಾಗಳು ಅರಸಿ ಬರುತ್ತಿದೆ. ಹಾಗೆಯೇ ಸಾಕಷ್ಟು ಸಮಯವನ್ನು ಮನೆಯಲ್ಲಿ ಕಳೆಯಲು ಸ್ವಪ್ನ ದೀಕ್ಷಿತ್ ಗೆ ಬಲು ಇಷ್ಟ. ಇದೀಗ ತ್ರಿಶಾ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾರೆ . ಇನ್ನೂ ಮುದ್ದಾದ ಕುಟುಂಬವನ್ನು ನೋಡಿದ ಸ್ವಪ್ನ ದೀಕ್ಷಿತ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X