ಹುಟ್ಟುಹಬ್ಬದ ಸಂಭ್ರಮದಲ್ಲಿ ಬ್ರೋ ಗೌಡ, ಶಮಂತ್ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಹೇಗೆ ಗೊತ್ತಾ?

By Poorva

ಶಮಂತ್ ಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಳೆದ ಬಾರಿ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದ ಅವರು, ಈ ಬಾರಿ ಯಾವ ರೀತಿ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಾರೆ ಎನ್ನುವ ಕಾತರ ಅಭಿಮಾನಿಗಳಿಗೆ ಮತ್ತಷ್ಟು ಹೆಚ್ಚಾಗಿದೆ. ಇಂದು ಕ್ರಿಸ್ಮಸ್ ಹಬ್ಬದ ಸಂಬ್ರಮ ಬೇರೆ.. ಇದರ ಜೊತೆಗೆ ಹುಟ್ಟು ಹಬ್ಬವು ಇನ್ನಷ್ಟೂ ಮೆರುಗು ನೀಡಿದೆ.

ಇದೀಗ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಆಗಿ ಮಿಂಚುತ್ತಿರುವ ನಟನಿಗೆ ಹುಟ್ಟುಹಬ್ಬದ ಸಂಭ್ರಮ. ಕಿರುತೆರೆಗೆ ಅಥವಾ ಹಿರಿತೆರೆಗೆ ಬರಲು ಶಮಂತ್ ಕಷ್ಟ ಪಟ್ಟಿದ್ದು ಅಷ್ಟಿಷ್ಟೆನಲ್ಲ. ಒಂದು ಸಿನಿಮದಲ್ಲಿ ಕೂಡ ಶಮಂತ್‌ಗೆ ಅವಕಾಶ ಸಿಗಲೆಯಿಲ್ಲ. ಸತತ ಪ್ರಯತ್ನದ ಬಳಿಕ ಒಂದು ಪಾತ್ರ ಮಾಡಲು ಅವಕಾಶ ಸಿಕ್ಕಿತು. ಆದರೆ ಆ ಪಾತ್ರ ಮಾಡಿದ್ದಕ್ಕೆ ಯಾರಿಗೋ ಸಹಿಸಲು ಆಗದೆ ಆ ಪಾತ್ರಕ್ಕೆ ಕತ್ತರಿ ಹಾಕಿಬಿಟ್ಟಿದ್ದರು.

Kannada Serial actor Shamanth gowda birthday

ಹಲವು ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟನೆ

ಏನೇ ಆಗಲಿ ನಾನು ಏನಾದರು ಸಾಧನೆ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಿದ್ದ ಶಮಂತ್. ಬಳಿಕ ವೆಬ್ ಸೀರಿಸ್‌ಗಳಲ್ಲಿ ಅಭಿನಯ ಮಾಡಿ ಬ್ರೋ ಗೌಡ ಎಂದೇ ಫೇಮಸ್ ಆಗಿದ್ದರು. ಇದು ಈ ವೆಬ್ ಸೀರೀಸ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಗಜಾನನ & ಗ್ಯಾಂಗ್' ಚಿತ್ರದಲ್ಲಿ ಶಮಂತ್ ನಟಿಸಿದ್ದಾರೆ.

ಇದೀಗ ಶಮಂತ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಬಿಗ್ ಬಾಸ್ ಸೀಸನ್ 8 ರಲ್ಲಿ ಭಾಗವಹಿಸಿದ್ದರು. ಅದ್ಭುತವಾಗಿ ನಟನೆ ಮೂಲಕ ಶಮಂತ್ ಎಲ್ಲರ ಮನೆ ಮಾತಾಗಿದ್ದಾರೆ. ಅಷ್ಟರ ಮಟ್ಟಿಗೆ ಆ ನಟ ನಟನೆಯನ್ನು ಕರಗತಗೊಳಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಶಮಂತ್ ಅವರು ಅನೇಕ ಹಾಡುಗಳನ್ನು ರಚಿಸಿ, ಟ್ಯೂನ್ ಹಾಕಿ ಹಾಡಿದ್ದರು. ಅವರ ಹಾಡಿಗೆ ಒಳ್ಳೆಯ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನೂ ಹಲವು ಸಿನಿಮಾಗಳಲ್ಲಿ ಈ ನಟ ಪೋಷಕ ಪಾತ್ರವನ್ನು ಮಾಡುತ್ತಿದ್ದಾರೆ. ವೈಷ್ಣವ್ ಪಾತ್ರ ಎಲ್ಲರ ಮನ ಗೆದ್ದಿದ್ದು ಸೀರಿಯಲ್ ಪ್ರೇಮಿಗಳ ಮನೆ ಮಾತಾಗಿದ್ದಾರೆ.

Kannada Serial actor Shamanth gowda birthday

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟನೆ

ಇತ್ತೀಚಿನ ದಿನಗಳಲ್ಲಿ ಬೇರೆ ಧಾರಾವಾಹಿಗೆ ಹೋಲಿಸಿದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ವೈಷ್ಣವ್ ಗೆ ಆತನ ತಾಯಿಯೇ ದೊಡ್ಡ ಶತ್ರುವಾಗಿ ಪರಿಣಮಿಸಿದ್ದಾರೆ. ಮಗ ನನ್ನ ಜೊತೆಯೇ ಇರಬೇಕು ಆತ ನನ್ನನ್ನು ಬಿಟ್ಟು ಬೇರೆ ಎಲ್ಲಿಗೂ ಹೋಗಬಾರದು. ಆತ ಇಲ್ಲದೆ ನಾನು ಇರೋದಿಲ್ಲ ಎಂಬ ಭ್ರಮೆಯಲ್ಲಿ ಇದ್ದಾರೆ.

ಕೀರ್ತಿಯನ್ನು ವೈಷ್ಣವ್‌ನಿಂದ ದೂರ ಇಟ್ಟ ತಾಯಿ

ಮಗ ಪ್ರೀತಿಸಿದ ಹುಡುಗಿಯನ್ನು ನೋಡಿ ಆಕೆ ಮಗನ ಜೀವನಕ್ಕೆ ಕಾಲಿಟ್ಟರೆ ನನ್ನ ಮಗ ನನಗೆ ಖಂಡಿತವಾಗಿಯೂ ಸಿಗುವುದಿಲ್ಲ ಎಂದು ಮನದಲ್ಲಿ ಅಂದುಕೊಂಡು ಮುಗ್ಧ ಹುಡುಗಿ ಲಕ್ಷ್ಮಿಯನ್ನು ಸೊಸೆಯಾಗಿ ತಂದುಕೊಳ್ಳುತ್ತಾಳೆ. ಕೀರ್ತಿಗೆ ತನ್ನ ಪ್ರಿಯಕರನನ್ನು ಕಳೆದುಕೊಂಡ ನೋವಿದೆ. ಪ್ರಿಯಕರನ ತಾಯಿ ಏನೇ ಮಾಡಿದರೂ ಅದೆಲ್ಲ ನಮ್ಮ ಒಳ್ಳೆಯದಕ್ಕೆ ಎಂದುಕೊಂಡ ಕೀರ್ತಿ ನಂಬಿಕೆ ಇದೀಗ ಹುಸಿ ಆಗಿದೆ.

More from Filmibeat

English summary
Kannada Serial actor shamanth gowda birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X