ತಾಂಡವ್ ಜೊತೆ ಸಂಗೀತಾ ಭಟ್ ಹಾಟ್ ಲುಕ್, ವಿಶೇಷ ದಿನವನ್ನು ವಿಶೇಷವಾಗಿ ಸೆಲಬ್ರೇಟ್ ಮಾಡಿದ ಜೋಡಿ !
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ ನಟರಲ್ಲಿ ಸುದರ್ಶನ್ ಕೂಡ ಒಬ್ಬರು .ಭಾಗ್ಯ ಗಂಡ ತಾಂಡವನ ಪಾತ್ರವನ್ನು ಸುದರ್ಶನ್ ಬಹಳ ಅದ್ಭುತವಾಗಿಯೇ ನಿಭಾಯಿಸುತ್ತಿದ್ದಾರೆ. ತಾಂಡವನ ವರ್ತನೆ ಬಹಳಷ್ಟು ಜನರಿಗೆ ಕೋಪ ತರಿಸುತ್ತಿರುತ್ತದೆ. ಬಹಳಷ್ಟು ಜನ ಶಾಪ ಹಾಕುತ್ತಿರುತ್ತಾರೆ. ಆದರೆ ನಿಜ ಜೀವನದಲ್ಲಿ ಮಾತ್ರ ಬಹಳ ಅದ್ಭುತ ವ್ಯಕ್ತಿ ಸುದರ್ಶನ್ ಎಂದರೆ ತಪ್ಪಾಗದು.
ಸುದರ್ಶನ್ ಸೀರಿಯಲ್ ನಲ್ಲಿ ಹೇಗೆ ಇದ್ದಾರೋ ಅದರ ಡೆಡ್ ಅಪೋಸಿಟ್ ರಿಯಲ್ ಲೈಫ್ ನಲ್ಲಿ ಇದ್ದಾರೆ. ಸುದರ್ಶನ್ ಪ್ರೀತಿಯ ಮಡದಿ ನಟಿ ಸಂಗೀತ ಭಟ್. ಸಂಗೀತ ಬಹಳ ಉತ್ತಮ ನಟಿಯಾಗಿದ್ದು ಎಲ್ಲರ ಮನಗೆದ್ದ ಮುದ್ದಾದ ಬೆಡಗಿ ಈಕೆ. ಸುದರ್ಶನ್ ಹಾಗೆಯೇ ಸಂಗೀತಾ ಭಟ್ ತಮ್ಮ ವೆಡ್ಡಿಂಗ್ ಆನಿವರ್ಸರಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.

ಮುದ್ದು ಜೋಡಿ ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಇದೀಗ ಗಂಡ ಹೆಂಡತಿ ಇಬ್ಬರೂ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರಿಗೆ ಸಖತ್ ಕಿಕ್ ಕೊಡುತ್ತಿದೆ.
ಸಂಗೀತಾ ಭಟ್ ಗೆ ತನ್ನ ಗಂಡ ಎಂದರೆ ಬಹಳಷ್ಟು ಇಷ್ಟ. ಆಕೆಯ ಜೊತೆ ಕಲೆತು ಬೆರೆತು ಬಹಳಷ್ಟು ಆನಂದವಾಗಿ ಕಾಲ ಕಳೆಯುತ್ತಿದ್ದಾರೆ. ತನ್ನ ಪ್ರೀತಿಯ ಗಂಡನ ಜೊತೆ ತೆಗೆದುಕೊಂಡ ಫೋಟೋವನ್ನು ಸಂಗೀತ ಭಟ್ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ವೆಡ್ಡಿಂಗ್ ಆನಿವರ್ಸರಿಯ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
ಇನ್ನು ನಿಜ ಜೀವನದಲ್ಲಿ ಸುದರ್ಶನ್ ರಂಗಪ್ರಸಾದ್ ತನ್ನ ಹೆಂಡತಿಯನ್ನು ಬಹಳಷ್ಟು ಪ್ರೀತಿ ಮಾಡುತ್ತಾರೆ.ಹಾಗೆಯೇ ಸಾಕಷ್ಟು ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ.ತನ್ನ ಹೆಂಡತಿಗಾಗಿ ಎನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ತನ್ನ ಮುದ್ದು ಹೆಂಡತಿಯನ್ನು ಬಹಳ ಪ್ರೀತಿ ಮಾಡುತ್ತಾರೆ. ಹೆಂಡತಿಯ ಮಾತಿಗೆ ಸುದರ್ಶನ್ ಯಾವತ್ತೂ ನೋ ಎಂದವರೇ ಅಲ್ಲ. ಆದರೆ ಸೀರಿಯಲ್ ನಲ್ಲಿ ಭಾಗ್ಯ ಕಂಡರೆ ತಾಂಡವಗೆ ಆಗುವುದೇ ಇಲ್ಲ. ಮುಖವನ್ನೂ ಗಂಟಿಕ್ಕಿ ಬಿಡುತ್ತಿರುತ್ತಾನೆ. ಭಾಗ್ಯ ಅದೆಷ್ಟೇ ಕೆಲಸ ಮಾಡಿದರು ಆಕೆಯನ್ನು ಎಮ್ಮೆ ಎಂದೆಲ್ಲ ಹೇಳಿ ನಿಂದನೆ ಮಾಡುತ್ತಿದ್ದ ಆದರೆ ಭಾಗ್ಯ ತನ್ನ ಗಂಡನಿಗೆ ಬಹಳಷ್ಟು ರೆಸ್ಪೆಕ್ಟ್ ಕೊಡುತ್ತಿದ್ದಳು. ಆದರೆ ತಾಂಡವ ಬಹಳಷ್ಟು ಕೋಪಿಷ್ಟ. ನಿಜ ಜೀವನದಲ್ಲಿ ತನ್ನ ಹೆಂಡತಿ ಸಂಗೀತ ಎಂದರೆ ಪಂಚ ಪ್ರಾಣ.
ಮಡದಿಯ ಜೊತೆ ಫೋಟೋ ಶೂಟ್ ಮಾಡಿಸಿಕೊಂಡ ಸುದರ್ಶನ್
ಪ್ರೀತಿಸಿ ಮದುವೆಯಾದ ಪ್ರೇಮಿಗಳು ಇದೀಗ ಜೀವನದಲ್ಲಿ ಬಹಳ ಸುಂದರ ಕ್ಷಣಗಳನ್ನು ಭರ ಮಾಡಿಕೊಳ್ಳುತ್ತಿದ್ದಾರೆ. ಸಂಗೀತ ಭಟ್ ನೋಡಲು ಬಹಳ ಸುಂದರಿ ಹಾಗೆಯೇ ಮಾಡರ್ನ್ ಆಗಿರುವ ನಟಿ. ಮಾದಕ ನೋಟದಿಂದಲೇ ಪಡ್ಡೆ ಹುಡುಗರ ಮನಗೆದ್ದ ಚೆಲುವೆ ಈಕೆ ಎಂದು ಹೇಳಿದರೆ ತಪ್ಪಾಗದು. ಮಡದಿಯ ಜೊತೆಗೆ ಬಹಳ ಖುಷಿಯಾಗಿ ಫೋಟೋಗೆ ಪೋಸ್ ನೀಡಿದ ಸುದರ್ಶನ್ ನೋಡಿ ಅಭಿಮಾನಿಗಳು ಬಹಳಷ್ಟು ಖುಷಿ ಪಡುತ್ತಿದ್ದಾರೆ . ರಿಯಲ್ ನಲ್ಲಿ ಸುದರ್ಶನ್ ಇಷ್ಟು ಒಳ್ಳೆಯವರ ಎಂದು ಅನೇಕರು ಹುಬ್ಬೇರಿಸುತ್ತಿದ್ದಾರೆ. ಫೋಟೋ ಗೆ ಸಾಕಷ್ಟು ಲೈಕ್ ಕಾಮೆಂಟ್ ಗಳ ಮಹಾಪೂರ ಹರಿದು ಬಂದಿದೆ. ಬಹಳಷ್ಟು ಜನ ಇಬ್ಬರಿಗೂ ವೆಡ್ಡಿಂಗ್ ಆನಿವರ್ಸರಿಯ ಶುಭ ಕೋರಿದ್ದಾರೆ.
ನೆಚ್ಚಿನ ನಟ ನಟಿ ಗೆ ಆಶೀರ್ವಾದ ಮಾಡಿದ ಫ್ಯಾನ್ಸ್
ಸಂಗೀತ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಮದುವೆಯಾಗಿ 9 ವರುಷಗಳು ಸಂದಿವೆ. ಇದೀಗ ಎಲ್ಲರೂ ನೀವಿಬ್ಬರು ಸುಖವಾದ ಸಂಸಾರ ಮಾಡಿಕೊಂಡಿರಿ ಎಂದು ಹಾರೈಸಿದ್ದಾರೆ. ಇನ್ನು ಸೀರಿಯಲ್ ನಲ್ಲಿ ಕೂಡ ಉತ್ತಮ ಗಂಡ ಹೆಂಡತಿಯಾಗಿ ಯಾವಾಗ ಆಗುತ್ತಿರಾ? ನೀವು ಹಾಗೂ ಭಾಗ್ಯ ಯಾವಾಗ ಒಂದಾಗುತ್ತಿರಾ ಎಂದು ಸುದರ್ಶನ್ ಬಳಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಸೀರಿಯಲ್ ನಲ್ಲಿ ಇದೀಗ ಮೊದಲ ಹೆಂಡತಿಯನ್ನು ಬಿಟ್ಟು ಇನ್ನೊಂದು ಮದುವೆಯಾಗಿ ಬದುಕಲು ತಾಂಡವ ಹೊರಟಿದ್ದಾನೆ ಇನ್ನೂ ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











