ಗರ್ಭಿಣಿ ಪತ್ನಿ ಮೇಲೆ ಕನ್ನಡ ಕಿರುತೆರೆ ನಟನಿಂದ ಹಲ್ಲೆ, ಮದುವೆ ನಂತರ ಮತ್ತೊಬ್ಬರ ಜೊತೆ ನಿಶ್ಚಿತಾರ್ಥ?

By ಫಿಲ್ಮಿಬೀಟ್ ಡೆಸ್ಕ್

ಬಣ್ಣದ ಲೋಕದಲ್ಲಿ ಪ್ರೀತಿ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಇಂದು ಜೊತೆಯಾದವರು ನಾಳೆ ದೂರವಾಗ್ತಾರೆ. ನೀನೆ ಎಲ್ಲ ಅಂದವರು, ಆ ನಂತರ ವರಸೆ ಬದಲಿಸುತ್ತಾರೆ. ಲವ್ವು-ಬ್ರೇಕ್‌ಪ್-ಮದುವೆ-ವಿಚ್ಛೇದನ ಎಲ್ಲವೂ ತೀರಾ ಕಾಮನ್ನು ಎಂಬಂತ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ಕಿರುತೆರೆಯ ನಾಯಕ ಸನ್ನಿ ಮಹಿಪಾಲ್ ಮೇಲೆ ಲವ್, ಸೆಕ್ಸ್ ಧೋಖಾ ಆರೋಪ ಕೇಳಿ ಬಂದಿದೆ.

ಹೌದು, ಈ ಹಿಂದೆ ಕನ್ನಡದಲ್ಲಿ ನೇತ್ರಾವತಿ ಎಂಬ ಧಾರಾವಾಹಿಯೊಂದು ಪ್ರಸಾರವಾಗುತ್ತಿತ್ತು. ಆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದವರು ಸನ್ನಿ ಮಹಿಪಾಲ್. ಇಂಥಾ ಸನ್ನಿ ಮಹಿಪಾಲ್ ಅವರಿಗೆ ಧಾರಾವಾಹಿ ಪೂರ್ಣವಾದ ನಂತರ, ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಪರಿಚಯ ಆಗಿದೆ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮದ ಸ್ವರೂಪ ಪಡೆದು ದೈಹಿಕ ಸಂಪರ್ಕವೂ ಬೆಳೆದಿದೆ. ಇದಕ್ಕೆ ಪುರಾವೆ ಎಂಬಂತೆ ಸದ್ಯ ಆ ಮಹಿಳೆ ಎರಡು ತಿಂಗಳ ಗರ್ಭಿಣಿ. ಇನ್ನೂ ಜೂನ್ 15ರಂದು ಸನ್ನಿ ಮಹಿಪಾಲ್ ಜೊತೆಗೆ ಯುವತಿ ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿಯೂ ಇದೆ.

kannada-serial-actor-sunny-mahipal-faces-allegations-of-brutally-assaulting-his-wife

ಆದರೆ ಮದುವೆಯಾದ ನಂತರ ಕೆಲವೇ ಕದಿನಗಳಲ್ಲಿ ಪೋಷಕರನ್ನ ಒಪ್ಪಿಸಿ ಬರುವೆ ಎಂದು ತೆರಳಿದ್ದ ಸನ್ನಿ ಮಹಿಪಾಲ್ , ಕೇವಲ ಸ್ನೇಹಿತೆಯ ರೀತಿ ಇರಬೇಕು ಎಂದು ಪತ್ನಿಗೆ ಷರತ್ತು ಹಾಕಿದ್ದರು. ಅದರಂತೆಯೇ ಆ ಯುವತಿ ನಡೆದುಕೊಂಡಿದ್ದಾರೆ ಕೂಡ.

ಆದರೆ.. ಇದರ ನಡುವೆ ಕೆಲ ದಿನದ ಹಿಂದೆ ಮಹಿಪಾಲ್ ಬೇರೆ ಹುಡುಗಿ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.ಈ ವಿಚಾರವನ್ನು ತಿಳಿದ ಮಹಿಪಾಲ್ ಪತ್ನಿ ಜುಲೈ 22ರಂದು ರಾತ್ರಿ ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಅಲ್ಲದೇ ಆತನ ನಡೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಗಲಾಟೆ ನಡೆದಿದ್ದು, ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

kannada-serial-actor-sunny-mahipal-faces-allegations-of-brutally-assaulting-his-wife

ಇನ್ನೂ ಸನ್ನಿ ಮಹಿಪಾಲ್ ವಿರುದ್ಧ ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಗಲಾಟೆಯಲ್ಲಿ ಗರ್ಭಪಾತ ಆಗಿರೋದಾಗಿಯೂ ಕೂಡ ಪತ್ನಿ ಹೇಳಿಕೆ ನೀಡಿದ್ದಾರೆ. ಹೊಟ್ಟೆಗೆ ಪೆಟ್ಟು ಬಿದ್ದು ಗರ್ಭಪಾತ ಆಗಿದೆ ಎಂದು ಪತ್ನಿ ಕಣ್ಣೀರು ಹಾಕಿದ್ದಾರೆ. ಈ ಗಲಾಟೆಯೆಲ್ಲ ಆದ ಮೇಲೆ 112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದರು. ಈ ವೇಳೆ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಭೇಟಿ ಕೊಟ್ಟಿದ್ದರು. ಗರ್ಭಪಾತದಿಂದಾಗಿ ಮಹಿಳೆಗೆ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಅವರು ಮನವಿ ಮಾಡಿದ್ದರು. ಆದರೆ, ನಮ್ಮ ಬಳಿ ಮಹಿಳಾ ಸಿಬ್ಬಂದಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೂಡ ಸನ್ನಿ ಮಹಿಪಾಲ್ ವಿರುದ್ಧ ಆರೋಪ ಮಾಡಿದ ಯುವತಿಯ ನೆರವಿಗೆ ಬಂದಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ. ಅತ್ತ ಹೆಚ್ಎಎಲ್ ಪೊಲೀಸ್ ಠಾಣೆಗೆ ತೆರಳಿ ಸನ್ನಿ ಮಹಿಪಾಲ್ ಮನೆಗೆ ಅತಿಕ್ರಮ ಪ್ರವೇಶ ಮಾಡಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ ಬಲವಂತದಿಂದ ಮದುವೆಯಾಗಿರೋದಾಗಿ ಹೇಳಿಕೆ ನೀಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X