ತುಳು ಸಿನಿಮಾರಂಗದಿಂದ ಕನ್ನಡ ಕಿರುತೆರೆಗೆ ಬಂದ ವಿಜಯ್ ಶೋಭರಾಜ್ ಬಗ್ಗೆ ಗೊತ್ತೆ?

By ಪೂರ್ವ

ತುಳುನಾಡಿನ ಅನೇಕ ಪ್ರತಿಭೆಗಳು ಕೋಸ್ಟಲ್‌ವುಡ್‌ನಲ್ಲಿ ಹಾಗೆಯೇ ಕನ್ನಡ ಕಿರುತೆರೆಗಳಲ್ಲಿ ಮಿಂಚುತ್ತಿದ್ದಾರೆ. ಹಲವಾರು ಜನ ರಂಗಭೂಮಿಯಿಂದ ಆಗಮಿಸಿ ಜನರ ಮನಗೆದ್ದು ಇದೀಗ ಕಿರುತೆರೆಯಲ್ಲಿ ಛಾಪು ಮೂಡಿಸುತ್ತಿದ್ದಾರೆ. ಅವರಲ್ಲಿ ವಿಜಯ್ ಶೋಭರಾಜ್ ಪಾವೂರು ಕೂಡ ಒಬ್ಬರು.

ತುಳುರಂಗಭೂಮಿ, ಹಾಗೆಯೇ ಸಿನಿಮಾಗಳಲ್ಲಿ ಬಹಳ ಹೆಸರು ಗಳಿಸಿದ ಇವರು ಇದಿಗ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತುಳು ರಂಗ ಭೂಮಿಯಲ್ಲಿ ಒಂದೂವರೆ ವರುಷಗಳಷ್ಟು ಕೆಲಸವನ್ನು ಮಾಡಿ ಕನ್ನಡ ಕಿರುತೆರೆಯತ್ತ ಮುಖ ಮಾಡಿದ್ದಾರೆ.

ದೇವದಾಸ್ ಕಾಪಿಕಾಡ್ ಅವರ ತಂಡದಲ್ಲಿ ಇದ್ದ ವಿಜಯ್ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಬಳಿಕ ಏಸ ಎಂಬ ಸಿನಿಮಾದ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಬಹಳ ವಿಶೇಷ ಮನ್ನಣೆ ಗಳಿಸಿತು. ಅದರಲ್ಲಿಯೂ ವಿಜಯ್ ನಟಿಸಿದರು.

ಕನ್ನಡ ಕಿರುತೆರೆಯತ್ತ ಮುಖ ಮಾಡಿದ ವಿಜಯ್

ಕನ್ನಡ ಕಿರುತೆರೆಯತ್ತ ಮುಖ ಮಾಡಿದ ವಿಜಯ್

ಆ ಬಳಿಕ ಕನ್ನಡ ಕಿರುತೆರೆಗಳತ್ತ ವಾಲಿದ ಇವರು ಕೋಸ್ಟಲ್‌ವುಡ್‌ನತ್ತ ಗಮನಹರಿಸುವುದು ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಒಂದೂವರೆ ಸಾವಿರದಷ್ಟು ಶೋಗಳನ್ನು ಮಾಡಿದ್ದಾರೆ ವಿಜಯ್. ಕನ್ನಡ ಕಿರುತೆರೆಗೆ ಆಗಮಿಸಿ ಹಲವು ವರುಷಗಳು ಸಂದರು ಗೀತಾ ಧಾರವಾಹಿಯಲ್ಲಿ 'ಸಿತಾರ' ಎಂಬ ಪಾತ್ರದ ಮೂಲಕ ಜನ ಮನಗೆದ್ದರು.

'ಪೆಪ್ಪೆರೆರೆ ಪೆರೆರೆರೆ' ಎಂಬ ಸಿನಿಮಾದಲ್ಲಿ ನಟನೆ

'ಪೆಪ್ಪೆರೆರೆ ಪೆರೆರೆರೆ' ಎಂಬ ಸಿನಿಮಾದಲ್ಲಿ ನಟನೆ

ಕನ್ನಡ ಕಿರುತೆರೆಯಲ್ಲಿ 'ಗೀತಾ' ಎಂಬ ಧಾರವಾಹಿಯಲ್ಲಿ ಅತ್ತ ವಿಲನ್ ಅಲ್ಲ ಇತ್ತ ಕಾಮಿಡಿಯನ್ ಕೂಡ ಅಲ್ಲ ಆ ರೀತಿಯ ಪಾತ್ರದಲ್ಲಿ ಜನರ ಮನರಂಜಿಸುತ್ತಿದ್ದಾರೆ. ಗೀತಾ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಉತ್ತಮ ನಟನಾಗಿ ನಿರ್ದೇಶಕನಾಗಿ ಮಿಂಚಿದ ವಿಜಯ್ ಶೋಭರಾಜ್ 'ಪೆಪ್ಪೆರೆರೆ ಪೆರೆರೆರೆ' ಎಂಬ ಸಿನಿಮಾದ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಂಚಲನವನ್ನೆ ಮೂಡಿಸಿದ್ದಾರೆ.

ನಾಟಕರಂಗದಲ್ಲಿ ಮಿಂಚಿದ ಪ್ರತಿಭೆ

ನಾಟಕರಂಗದಲ್ಲಿ ಮಿಂಚಿದ ಪ್ರತಿಭೆ

ಬಾಲ್ಯದಲ್ಲಿ ಕಷ್ಟಗಳನ್ನುಂಡು ಬೆಳೆದಿದ್ದ ಶೋಭರಾಜ್ ಕೈ ಹಿಡಿದಿದ್ದು ನಟನೆ ಬಗ್ಗೆ ಇದ್ದ ಹುಚ್ಚು ಪ್ರೇಮ. ನಾಟಕರಂಗದಲ್ಲಿ ಮಿಂಚಿದ ಇವರ ಬೆನ್ನೆಲುಬಾಗಿ ನಿಂತಿದ್ದು ಇವರ ಕುಟುಂಬ. ಪ್ರಸ್ತುತವಾಗಿ ಶೋಭರಾಜ್ ಹಾಗೂ ಅವರ ಕುಟುಂಬ ಒಂದು ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ''ಮದುವೆ ಆಗಿ 5 ವರ್ಷ ಆಗಿದೆ ಆದರೆ ಶೋಭಾರಾಜ್ ಅವರು ಒಟ್ಟಿಗೆ ಇದ್ದಿದ್ದು 150 ದಿನ ಅಷ್ಟೆ ಎಂದು'' ಶೋಭರಾಜ್ ಅಷ್ಟು ಬ್ಯುಸಿಯಾಗಿದ್ದಾರೆ. ಅಲ್ಲದೆ ಅವರ ಈ ಬ್ಯುಸಿ ಜೀವನಕ್ಕೆ ಅವರ ಪತ್ನಿ ಮತ್ತು ಕುಟುಂಬಸ್ಥರು ಸಹ ಒಗ್ಗಿ ಹೋಗಿದ್ದಾರೆ.

ಮೋದಿ ವಿರುದ್ಧ ಮಾತನಾಡಿ ಕ್ಷಮೆ ಕೇಳಿದ್ದ ವಿಜಯ್

ಮೋದಿ ವಿರುದ್ಧ ಮಾತನಾಡಿ ಕ್ಷಮೆ ಕೇಳಿದ್ದ ವಿಜಯ್

ಕಿರುತೆರೆಯಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದ ಶೋಭರಾಜ್ ನಿಜ ಜೀವನದಲ್ಲೂ ಕೆಲ ಜನರ ಕಣ್ಣಿಗೆ ಖಳನಾಗಿ ಕಂಡಿದ್ದರು. ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ನಟ ಶೋಭರಾಜ್ ಅವರು ಧ್ವನಿ ಎತ್ತಿದ್ದರು. ಇದರಿಂದಾಗಿ ಕೆಲವರು ಶೋಭರಾಜ್‌ಗೆ ಬೆದರಿಕೆ ಕರೆಗಳನ್ನು ಮಾಡಿದ್ದರು ಸಹ. ಬಳಿಕ ತುಳುಭಾಷೆಯಲ್ಲಿ ಕ್ಷಮೆಯನ್ನು ಕೂಡ ಯಾಚಿಸಿದರು. ಒಟ್ಟಾರೆ ತುಳು ರಂಗಭೂಮಿ, ಸಿನಿಮಾ ರಂಗದಿಂದ ಬಂದು ಕನ್ನಡ ಕಿರುತೆರೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ ವಿಜಯ್ ಶೋಭರಾಜ್.

More from Filmibeat

English summary
Kannada serial actor Vijay Shobaraj is from Coastalwood. He is acting in Geetha Kannada serial and contestant is in a Kannada reality show also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X