ನಮ್ರತಾ ಬೆಡ್ ರೂಂ ವಿಡಿಯೋ; ಸಾಮಾಜಿಕ ಜಾಲತಾಣದಲ್ಲಿ ವೈರಲ್
ನಮ್ರತಾ ಗೌಡ ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಅವರ ಯುಟ್ಯೂಬ್ ಚಾನೆಲ್ ನಲ್ಲಿ ಹೊಮ್ ಟೂರ್ ಅನ್ನು ಮಾಡಿದ್ರು. ಅವರು ಕೊಂಡುಕೊಂಡ ಮನೆ ಹೇಗಿದೆ ಎಂಬುವುದನ್ನು ಅವರ ಅಭಿಮಾನಿಗಳಿಗೆ ತೋರಿಸಿದ್ದಾರೆ. ಹೌದು ನಮ್ರತಾ ಗೌಡ ಅವರಿಗೆ ದೇವರ ಕೋಣೆ ಅಂದರೆ ಬಹಳ ಇಷ್ಟ. ಆಕೆ ಮನೆ ತೆಗೆದುಕೊಳ್ಳುವ ವೇಳೆ ಕೂಡ ದೇವರ ಕೋಣೆಯನ್ನ ನೋಡಿ ಮನೆ ತೆಗೆದುಕೊಂಡರಂತೆ.
ಇನ್ನು ನಮ್ರತಾ ಏನಾದರು ಚಿತ್ರೀಕರಣದ ಸಂದರ್ಭದಲ್ಲಿ ಹಾಗೆಯೇ ಏನಾದರು ಸಣ್ಣ ಪುಟ್ಟ ಕೆಲಸ ಇದ್ದಾಗ ಈ ಮನೆಯಲ್ಲಿ ಉಳಿದುಕೊಳ್ಳುತ್ತಾರಂತೆ. ಹೀಗೆ ನಮ್ರತಾ ಕೊಂಡುಕೊಂಡಿರುವ ಮನೆಯ ಹೋಂ ಟೂರ್ ಮಾಡಿದ್ದಾರೆ. ಹಲವಾರು ಬಾರಿ ಅಭಿಮಾನಿಗಳಿಗೆ ಬಟ್ಟೆ ಬಗ್ಗೆ ವಿಡಿಯೋ ಮಾಡಿಕೊಂಡೇ ಇರುತ್ತಾರೆ.

ಆದರೆ ಈ ಬಾರಿ ಡಿಫರೆಂಟ್ ಆಗಿ ತನ್ನ ಮನೆಯ ಹೋಂ ಟೂರ್ ಮಾಡಿದ್ದಾರೆ. ನಮ್ರತಾ ಗೌಡ ಮನೆ ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಎರಡು ಭಾಗಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಟಿ, ಎರಡನೇ ಭಾಗದಲ್ಲಿ ತಮ್ಮ ಬೆಡ್‌ರೂಮ್ ತೋರಿಸಿದ್ದಾರೆ. ಮೆಚ್ಚುಗೆಗಿಂತ ನೆಟ್ಟಿಗರ ಟೀಕೆ ಹೆಚ್ಚಾಗಿದೆ
ನಮ್ರತಾ ಗೌಡ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಾ ಇದ್ದಾರೆ. ಈ ಮನೆಯಲ್ಲಿ ಹಾಲ್, ಅಡುಗೆ ಮನೆ, ದೇವರ ಮನೆ, ಬೆಡ್‌ರೂಮ್, ಬಾತ್‌ರೂಮ್ ಹಾಗೂ ಒಂದು ಯುಟಿಲಿಟಿ ರೂಮ್ ಇರುವ ಜಾಗವಿದ್ದು ನೋಡಲು ಬಹಳ ಸುಂದರವಾಗಿದೆ. ದೇವರ ಕೋಣೆಯನ್ನು ನೋಡುವಾಗಲೆಲ್ಲ ನಮ್ರತಾಗೆ ಬಹಳ ಖುಷಿ ಆಗುತ್ತದೆ ಕೂಡ.
ಅಡುಗೆ ಮನೆ ಕ್ಲೀನ್ ಆಗಿರುವುದಕ್ಕೆ ಹಲವಾರು ಜನ ಖುಷಿ ಪಟ್ಟಿದ್ದಾರೆ. ಅಡುಗೆ ರೂಮ್ ಕ್ಲೀನ್ ಆಗಿರಲು ಕಾರಣ ನಮ್ರತಾ ಅದರಲ್ಲಿ ಅಡುಗೆ ಮಾಡದೇ ಇರುವುದು ಹೌದು ನಮ್ರತಾಗೆ ಕಾಫಿ ಟೀ ಮಾಡಲು ಬರುವುದಿಲ್ಲವಂತೆ.. ಅದರಿಂದಾಗಿ ಕಿಚನ್ ಬಹಳ ಕ್ಲೀನ್ ಆಗಿದೆ ಎಂದು ಹೇಳಿದ್ದಾರೆ.
ಹಾಗೆಯೇ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಮಾಡಲು ಎರಡು ಸಲ ಬಳಸಿರುವೆ. ನನ್ನ ತಾಯಿ ಬಂದಾಗ ಬಿಸಿ ನೀರು ಮಾಡಲು ಸ್ಟವ್ ಬಳಸಿದ್ದಾರೆ. ನನಗೆ ಕಾಫಿ ಟೀ ಕೂಡ ಮಾಡಲು ಬರುವುದಿಲ್ಲ' ಎಂದು ಸ್ವತಃ ನಮ್ರತಾ ಹೇಳಿಕೊಂಡಿದ್ದಾಳೆ. ನಮ್ರತಾ ಗೌಡ ಬೆಡ್ ರೂಂ ಸಖತ್ ನೀಟ್ ಆಗಿದೆ. ಹಾಗೆಯೇ ಇಡೀ ಮನೆಗೆ ಒಂದು ಕಬೋರ್ಡ್ ಇಡಲಾಗಿದೆ.
ಬಹಳ ಜನರಿಗೆ ಬೇರೆ ಮನೆಗೆ ಹೋದರೆ ಅಲ್ಲಿ ನಿದ್ದೆ ಬಾರದೆ ಇರುವ ಹಾಗೆ ಆಗುತ್ತದೆ. ಅದೇ ರೀತಿ ನಮ್ರತಾಗೆ ಕೂಡ ಈ ಮನೆಯಲ್ಲಿ ಸರಿಯಾಗಿ ನಿದ್ದೆ ಬರುವುದಿಲ್ಲವೆಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ನಮ್ರತಾ ಗೌಡ ಕಣ್ಣಿಗೆ ಹಬ್ಬ ನೀಡುತ್ತಾ ಇದ್ದಾರೆ. ಅಭಿಮಾನಿಗಳು ನಮ್ರತಾ ಮನೆ ನೋಡಿ ಸಖತ್ ಖುಷಿಯಾಗಿದ್ದಾರೆ. ಒಂದಲ್ಲ ಒಂದು ಸುದ್ದಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ನಮ್ರತಾ ಗೌಡ ಸಕ್ರಿಯರಾಗಿದ್ದಾರೆ.


Click it and Unblock the Notifications











