ಬೋಲ್ಡ್ ಲುಕ್‌ನಲ್ಲಿ ಮಿಂಚಿದ ನಮ್ರತಾ ಗೌಡ; ಪ್ಯಾಂಟ್ ಎಲ್ಲಮ್ಮಾ ಎಂದು ಕಾಲೆಳೆದ ನೆಟ್ಟಿಗರು

By Poorva

ನಮ್ರತಾ ಗೌಡ ಯಾರಿಗೆ ತಾನೆ ಗೊತ್ತಿಲ್ಲ. ಬೆಂಗಳೂರಿನ ಬೆಡಗಿ ಈಕೆ. ಚಿತ್ರರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಎಂಬುವುದು ಈಕೆಯ ಹಂಬಲ. ಹೌದು 2011ರಲ್ಲಿ ಕೃಷ್ಣ ರುಕ್ಮಿಣಿ ಎಂಬ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ನಮ್ರತಾ ಗೌಡ ಕಾಲಿಡುತ್ತಾರೆ. ನಂತರ ಪುಟ್ಟ ಗೌರಿ ಧಾರವಾಹಿ ನಮ್ರತಾ ಗೌಡಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

ಹಿಮಾ ಎಂದೇ ಫೇಮಸ್ ಆಗಿದ್ದ ನಟಿ ನೋಡಲು ಬಹಳ ಕ್ಯೂಟ್ ಆಗಿದ್ದರು. ನಂತರದ ದಿನಗಳಲ್ಲಿ ನಮ್ರತಾಗೆ ಅವಕಾಶಗಳು ಅರಸಿ ಬರುತ್ತಿದ್ದವು. ಆ ಬಳಿಕ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಾಗಿಣಿ 2 ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ.

Kannada serial actors Namratha Gowda new photoshoot

ಈ ನಟಿ ನಾಗಿಣಿಯಾಗಿ ಜನರ ಮನ ಕದ್ದ ಬೆಡಗಿಗೆ ಅಭಿಮಾನಿಗಳು ಸಾಕಷ್ಟು ಇದ್ದಾರೆ. ಹಾಗೆಯೇ ಉತ್ತಮ ಕಥೆ ಸಂಭಾಷಣೆ ಹೊಂದಿದ ಧಾರಾವಾಹಿಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗೆಯೇ ಇವರ ನಟನೆಗೆ ಅಭಿಮಾನಿಗಳು ಫಿದಾ ಆಗಿರುವುದಂತು ಸತ್ಯ.

ಇನ್ನು ನಮ್ರತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಹಾಗೆಯೇ ಟ್ರೊಲ್ ಕೂಡಾ ಆಗುತ್ತಾರೆ. ಹೌದು ನಮ್ರತಾ ಗೌಡ ಫೋಟೋ ಷೂಟ್ ಮಾಡಿಸಿಕೊಂಡಿದ್ದಾರೆ. ನಮ್ರತಾ ಸೀರಿಯಲ್ ನಲ್ಲಿ ಗೌರಮ್ಮ ತರ ಉಡುಗೆಯಲ್ಲಿ ಇರುತ್ತಾರೆ.

ಆದರೆ ನಿಜ ಜೀವನದಲ್ಲಿ ನಮ್ರತಾ ಸಖತ್ ಮಾಡರ್ನ್. ಇದೀಗ ಈ ನಟಿ ಬೋಲ್ಡ್ ಆಗಿ ಫೋಟೋ ಷೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಇದ್ದನ್ನು ನೋಡಿದ ಅಭಿಮಾನಿಗಳು ಮಾತ್ರ ಖುಷಿ ಪಟ್ಟರೆ ಇನ್ನೂ ಕೆಲವರು ಏನು ನಮ್ರತಾ ಪ್ಯಾಂಟ್ ಹಾಕಿರುವುದನ್ನು ಮರೆತು ಬಿಟ್ಟಿದ್ದಿರಾ ಎಂದು ಕಾಮೆಂಟ್ ಮಾಡಿ ನಮ್ರತಾ ಕಾಲು ಎಳೆದಿದ್ದಾರೆ.

ಆದರೆ ನಮ್ರತಾ ಮಾತ್ರ ಇದಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ನಮ್ರತಾ ನಟನೆ ನೋಡಿದ ಅನೇಕ ಮಂದಿ ಇವರ ನಟನೆಗೆ ಮಾರು ಹೋಗಿದ್ದಾರೆ. ಇದೀಗ ನಮ್ರತಾ ಅವರ ಬೋಲ್ಡ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪುಟ್ಟ ಗೌರಿ ಮೂಲಕ ಖ್ಯಾತಿ ಪಡೆದ ನಮ್ರತಾಗೆ ಇನ್ನೂ ಸಹ ಅಭಿಮಾನಿಗಳಿದ್ದಾರೆ.

ನಮ್ರತಾ ಆ ಬಳಿಕ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ಮಿಂಚಿ ಇನ್ನಷ್ಟು ಜನರ ಮನ ಗೆದ್ದಿದ್ದಾರೆ ಎಂದರೆ ತಪ್ಪಾಗದು. ಹಾಗೆ ಈ ಧಾರಾವಾಹಿಯಲ್ಲಿ ನಟಿ ಐಶ್ವರ್ಯಾ ಸಿಂಧೋಗಿ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರ ನಟನೆ ಕೂಡ ಬಹಳ ಅದ್ಭುತವಾಗಿ ಇತ್ತು. ಇನ್ನು ನಮ್ರತಾ ಕ್ಯೂಟ್ ಆಗಿ ಇರುವ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾ ಇರುತ್ತಾರೆ. ಈ ಬಾರಿ ಮಾತ್ರ ಸಖತ್ ಬೋಲ್ಡ್ ಆಗಿ ಫೋಟೋದಲ್ಲಿ ಕಾಣಿಸಿಕೊಂಡು ಇದ್ದಾರೆ. ಈ ಫೋಟೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.

More from Filmibeat

English summary
Kannada serial actors namrata photo shoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X