ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಲಾವಿದರ ಡ್ಯುಯೆಟ್ ಕಂಡು ಅಭಿಮಾನಿಗಳು ಶಾಕ್!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸ್ನೇಹ ಹಾಗೂ ಮುರಳಿ ಇಬ್ಬರು ಇದೀಗ ಡುಯೆಟ್ ಸಾಂಗ್‌ಗೆ ಹೆಜ್ಜೆ ಹಾಕುತ್ತಿದ್ದಾರೆ ಇದನ್ನು ನೋಡಿದ ಅಭಿಮಾನಿಗಳು ಇದೇನು ಬಾವ ಹಾಗೂ ನಾದಿನಿಯ ಲವ್ ಸ್ಟೋರಿ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಮುರಳಿ ಹಾಗೂ ಸ್ನೇಹ ಬಾವ ನಾದಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ನೇಹಾ ಅಕ್ಕನ ಗಂಡನಾಗಿ ಮುರಳಿ ಕಾಣಿಸಿಕೊಂಡಿದ್ದಾರೆ. ಸಹನಾ ತಂಗಿಯಾಗಿ ಸ್ನೇಹಾ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಿಗೂ ಈ ಧಾರಾವಾಹಿ ಒಳ್ಳೆ ಹೆಸರು ಕೊಟ್ಟಿದೆ. ಆದರೆ ಇವರಿಬ್ಬರು ಒಟ್ಟಿಗೆ ಇರುವುದನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದೇನು ನಾದಿನಿ ಭಾವನನ್ನು ಮರಳು ಮಾಡಿದಂತಿದೆ ಎಂದು ಅನೇಕರು ಮಾತನಾಡುತ್ತಿದ್ದಾರೆ. ಆದರೆ, ಸ್ನೇಹಾ ಹಾಗೂ ಮುರಳಿ ಅಷ್ಟಕ್ಕೂ ರಿಯಲ್ ಆಗಿ ಒಂದಾಗಿಲ್ಲ ಬದಲಾಗಿ ಶಾರ್ಟ್ ಮೂವಿ ಒಂದರಲ್ಲಿ ಆಕ್ಟ್ ಮಾಡುತ್ತಿದ್ದಾರೆ.

 Kannada Serial Actors Sanjana Burli and Pavan Kumar romantic photo viral

ಸ್ನೇಹಾ ಎಲ್ಲರ ನೆಚ್ಚಿನ ಮುದ್ದಿನ ಸೊಸೆಯಾಗಿ ಮಿಂಚಿದ್ದಾರೆ .ಇವರ ನಿಜವಾದ ಹೆಸರು ಸಂಜನಾ ಬುರ್ಲಿ. ಹಾಗೆಯೇ ಮುರಳಿಯ ನಿಜವಾದ ಹೆಸರು ಪವನ್ ಕುಮಾರ್. ಈ ಇಬ್ಬರು ಜೋಡಿ ಇದೀಗ ಡ್ಯುಯೆಟ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಇದನ್ನು ನೋಡಿದ ಸೀರಿಯಲ್ ಪ್ರೇಮಿಗಳು ಕನ್ಫ್ಯೂಸ್ ಆಗುತ್ತಾರೆ. ಲವ್ ರಿಸೆಟ್ ಎನ್ನುವ ಶಾರ್ಟ್ ಮೂವಿಯಲ್ಲಿ ಇವರಿಬ್ಬರೂ ಒಟ್ಟಾಗಿ ನಟನೆ ಮಾಡುತ್ತಿದ್ದು ನೋಡುಗರು ಬಹಳ ಖುಷಿ ಪಟ್ಟಿದ್ದಾರೆ.

ಶಾರ್ಟ್ ಸಿನಿಮಾದಲ್ಲಿ ಒಂದಾದ ಸ್ನೇಹಾ, ಮುರಳಿ

ಇನ್ನು ಈ ಶಾರ್ಟ್ ಮೂವಿಯಲ್ಲಿ ಇಬ್ಬರು ಬಹಳ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಇದ್ದಾರೆ. ಇಬ್ಬರು ಹಾಡಿಗೆ ಸ್ಟೆಪ್ ಹಾಕಿದ್ದು ಜೋಡಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಇನ್ನೂ ಕೆಲವರು ಸೀರಿಯಲ್‌ನಿಂದಾ ಹೊರಬರಲು ಆಗದೆ ಸ್ನೇಹಾ ಹಾಗೂ ಮುರಳಿಯನ್ನು ಕಂಡು ಬೆರಗಾಗಿದ್ದಾರೆ. ಇನ್ನು ಕೆಲವರು ಮುರಳಿ ಜೊತೆ ಯಾಕೆ ಇರಬೇಕು. ಹಾಗಾದರೆ ನೀವು ಕಂಠಿ ಗೆ ಮೋಸ ಮಾಡಿದ್ರಾ ಎಂದು ಫನ್ನಿಯಾಗಿ ಕಮೆಂಟ್ ಮಾಡುತ್ತಾ ಇದ್ದಾರೆ.

 Kannada Serial Actors Sanjana Burli and Pavan Kumar romantic photo viral

ಫನ್ನಿ ಕಾಮೆಂಟ್ ಮಾಡುತ್ತಿರುವ ಜನ

ಜನವರಿ 15 ಕ್ಕೆ ಕಿರುಚಿತ್ರ ಬಿಡುಗಡೆ ಆಗುತ್ತಿದ್ದು ನೋಡುಗರಿಗೆ ಮಾತ್ರ ಹಬ್ಬದೂಟ ಬಡಿಸಲು ತಯಾರಾಗಿದೆ. 7 ಶೇಡ್ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಜನವರಿ 22 ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಇವರಿಬ್ಬರೂ ಜೋಡಿಯನ್ನು ಅಭಿಮಾನಿಗಳು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಲವ್ ರಿಸೆಟ್ ಎನ್ನುವ ಟೈಟಲ್‌ಗೆ ತಕ್ಕ ಹಾಗೆಯೇ ಉತ್ತಮ ಕಥಾ ಹಂದ ಹೊಂದಿದೆ ಎಂದರೆ ತಪ್ಪಾಗದು. ಚಿತ್ರದಲ್ಲಿ ರೊಮ್ಯಾಂಟಿಕ್ ಆಗಿ ಎಲ್ಲರ ಮುಂದೆ ಬರಲಿದ್ದಾರೆ ಸಂಜನಾ ಬುರ್ಲಿ ಹಾಗೂ ಪವನ್ ಕುಮಾರ್ ಎಲ್ಲರ ಮುಂದೆ ಕಾಣಿಸಿಕೊಂಡು ಇದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಸಿಕ್ಕಾ ಪಟ್ಟೆ ಟ್ರೊಲ್ ಮಾಡುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಂಜನಾ ಹಾಗೂ ಮುರಳಿ ಬಾವ ನಾದಿನಿ ಆದರೆ ಇದೀಗ ಲವ್ ರಿಸೆಟ್ ರೋಮ್ಯಾಂಟಿಕ್ ಜೋಡಿ. ಇವರಿಬ್ಬರನ್ನು ನೋಡಿದ ಅನೇಕ ಜನರು ಬಹಳ ಬೇಸರ ವ್ಯಕ್ತ ಪಡಿಸಿರುವುದಂತು ಸತ್ಯ.

More from Filmibeat

English summary
Actors Sanjana Burli and Pavan kumar romantic photo viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X