ಚೆಲ್ವಿ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಮಾಡರ್ನ್,ಅಶ್ವಿನಿ ನೈಜ ಬದುಕು ಹೇಗಿದೆ ಗೊತ್ತಾ?
ಲಕ್ಷ್ಮೀ ನಿವಾಸ ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ವೀಕ್ಷಕರು ಬಹಳ ಕುತೂಹಲದಿಂದ ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ. ಇನ್ನೂ ಈ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಹೂ ಮಾರುವ ಹುಡುಗಿ ಪಾತ್ರದಲ್ಲಿ ಚೆಲ್ವಿ ಎನ್ನುವ ಹೆಸರಿನ ಮೂಲಕ ಎಲ್ಲರ ಮನೆ ಮಾತಾದ ಅಶ್ವಿನಿ ಆರ್ ಮೂರ್ತಿ ಧಾರಾವಾಹಿಯಲ್ಲಿ ಹಳ್ಳಿ ಸ್ಟೈಲ್ ಬಟ್ಟೆ ತೊಟ್ಟು ಬಹಳ ಅದ್ಭುತವಾಗಿ ನಟನೆಯನ್ನು ಮಾಡುತ್ತಾ ಎಲ್ಲರ ಮನಸ್ಸನ್ನೂ ಕದ್ದಿದ್ದಾರೆ.
ಆದರೆ ಅವರು ನಿಜವಾಗಲೂ ನೋಡಲು ಸಿಕ್ಕಾಪಟ್ಟೆ ಸ್ಟೈಲಿಶ್. ಅಭಿನಯದಲ್ಲಿ ಯಾರು ಅವರ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದು ಇಲ್ಲ ಅಷ್ಟು ಚೆನ್ನಾಗಿ ಅಭಿನಯವನ್ನು ಮಾಡುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ವೆಂಕಿ ಹಾಗೂ ಚೆಲ್ವಿ ಜೋಡಿ ಎಲ್ಲರ ಮನಸ್ಸನ್ನು ಕೂಡ ಗೆದ್ದಿತ್ತು. ಇದೀಗ ಅಶ್ವಿನಿ ಅವರು ರಿಯಲ್ ಲೈಪ್ ನಲ್ಲಿ ಹೇಗಿದ್ದಾರೆ ಎನ್ನುವ ಕುತೋಹಲ ಎಲ್ಲರಲ್ಲಿ ಕೂಡ ಮನೆ ಮಾಡಿತು. ಅಶ್ವಿನಿ ಅವರು ರಿಯಲ್ ಆಗಿ ಬಹಳ ಸ್ಟೈಲಿಶ್ ಆಗಿದ್ದಾರೆ. ನೋಡಲು ಸಖತ್ ಸ್ಮಾರ್ಟ್ ಆಗಿದ್ದು ಇವರೇನಾ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವ ಚೆಲ್ವಿ ಎನ್ನುವ ರೀತಿ ಎಲ್ಲರೂ ನೋಡುತ್ತಿರುತ್ತಾರೆ.

ಇನ್ನೂ ಅಶ್ವಿನಿ ಅವರು ಲಕ್ಷಣ ಸೀರಿಯಲ್ ನಲ್ಲಿ ನಕ್ಷತ್ರಾ ಅಕ್ಕ ಆಗಿ ನಟಿಸಿದ್ದರು, ಅಷ್ಟೇ ಅಲ್ಲದೆ ಮರಳಿ ಮನಸಾಗಿದೆ, ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲೂ ಅಶ್ವಿನಿ ಬಹಳ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ . ಬ್ಯುಸಿನೆಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅಶ್ವಿನಿ ಅವರನ್ನ ಸೆಳೆದಿದ್ದು ನಟನೆ. ತಾನು ಕೂಡ ಉತ್ತಮ ನಟಿ ಆಗಬೇಕು ಎನ್ನುವ ಆಸೆ ಆಕೆಗೆ. ಆದ ಕಾರಣ ಅವರು ಬ್ಯುಸಿನೆಸ್ ಹಾಗೂ ನಟನೆಯನ್ನು ಸರಿದೂಗಿಸಿಕೊಂಡು ಹೋಗುತ್ತಾರೆ.
ವರ್ಕ್ ಆಯ್ತು ವೆಂಕಿ ಚೆಲ್ವಿ ಲವ್ ಸ್ಟೋರಿ
ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಧಾರವಾಹಿ ಎಂದರೆ ಅದು ಲಕ್ಷ್ಮೀ ನಿವಾಸ ಧಾರವಾಹಿ ಎಂದರೆ ತಪ್ಪಾಗದು. ಅಷ್ಟರ ಮಟ್ಟಿಗೆ ವೆಂಕಿ ಹಾಗೂ ಚೆಲ್ವಿ ಕೆಮಿಸ್ಟ್ರಿ ವರ್ಕ್ ಆಗಿದೆ. ಇವರಿಬ್ಬರನ್ನು ನೋಡಲು ಅನೇಕ ಜನ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಇನ್ನೂ ಇವರು ಗ್ಲಾಮ್ ಹೌಸ್ ಯುನಿಸೆಕ್ಸ್ ಬ್ಯೂಟಿ ಸಲೂನ್ ಮಾಲೀಕರು ಹೌದು. ಹೇರ್, ಸ್ಕಿನ್, ನೈಲ್ ಆರ್ಟ್, ಮೇಕಪ್ ಎಲ್ಲವನ್ನೂ ಇಲ್ಲಿ ಮಾಡಿ ಕೊದುತ್ತಾರೆ. ಈ ಬ್ಯೂಟಿ ಸೆಲೂನ್ ರಾಜಾಜಿ ನಗರದಲ್ಲಿದೆ. ಇವರ ಬ್ಯೂಟಿ ಸೆಲೂನ್ ಗೆ ಅನೇಕ ನಟಿಮಣಿಯರು ಬಂದು ಎಲ್ಲಾ ಸೇವೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ.

ಬ್ಯುಸಿನೆಸ್ ನಲ್ಲಿ ತನ್ನದೇ ಛಾಪು ಮೂಡಿಸಿದ ನಟಿ
ಅಂದ ಹಾಗೆ ನಟಿಯರಾದ ವಿಜಯಲಕ್ಷ್ಮೀ, ಸ್ವಾತಿ, ಅಭಿಜ್ಞಾ ಭಟ್, ರುಹಾನಿ ಶೆಟ್ಟಿ, ಪೂಜಾ ದುಗ್ಗಣ್ಣ, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಕೂಡ ಭೇಟಿ ನೀಡಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಮೂರ್ತಿ ಬಹಳ ಫೇಮಸ್ ಆಗಿದ್ದು ಸುಮಾರು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರ ಅಂದಕ್ಕೆ ಜನರು ಕೂಡ ಬಹಳ ಫಿದಾ ಆಗಿದ್ದಾರೆ. ಮಾಡರ್ನ್ ಡ್ರೆಸ್ ಗಿಂತ ಸೀರೆಯುಟ್ಟರೆ ಈಕೆ ಮತ್ತಷ್ಟು ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ .
ಅಶ್ವಿನಿ ನೋಟಕ್ಕೆ ಫಿದಾ ಆಗಿರುವ ಅಭಿಮಾನಿಗಳು
ಇವರ ಫೋಟೋ ನೋಡಿ ಅಭಿಮಾನಿಗಳು ಸಖತ್ ಖುಷಿ ಪಡುತ್ತಾರೆ ಹಾಗೆಯೇ ನೋಡಿದರೆ ಮತ್ತೊಮ್ಮೆ ನೋಡುವಷ್ಟು ಅಶ್ವಿನಿ ಅವರ ಕಣ್ಣೋಟ ಹೀಗೆ ಅಭಿಮಾನಿಗಳು ಮಾತ್ರ ಅಶ್ವಿನಿ ಅಂದವನ್ನು ಬಣ್ಣನೆ ಮಾಡುತ್ತಿರುತ್ತಾರೆ. 41 ಸಾವಿರ ಕ್ಕಿಂತ ಹೆಚ್ಚು ಜನರು ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಇದ್ದಾರೆ.


Click it and Unblock the Notifications











