ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ, ಮಗುವನ್ನು ಮನೆಗೆ ಕರೆತಂದ ಚಂದನ್ ಕುಮಾರ್- ವಿಡಿಯೋ ವೈರಲ್..!
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹಾಗೆಯೇ ಕವಿತಾ ಹಾಗೂ ಅವರ ಮಗು ಆರೋಗ್ಯವಾಗಿದ್ದು ಮನೆಗೆ ಹೊಸ ಅತಿಥಿ ಬಂದಿರುವುದು ಚಂದನ್ ಗೌಡ ಹಾಗೂ ಅವರ ಮನೆಯವರಿಗೆ ಬಹಳಷ್ಟು ಖುಷಿಯನ್ನು ನೀಡಿದೆ. ಇನ್ನೂ
ಕವಿತಾ ಗೌಡ ಅವರು ಗರ್ಭಿಣಿ ಎಂದು ತಿಳಿದ ಕ್ಷಣದಿಂದ ಚಂದನ್ ತನ್ನ ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ. ಯಾವುದು ಇಷ್ಟ, ಅದೆಲ್ಲವನ್ನೂ ಕೂಡ ಈಡೇರಿಸಿದ್ದಾರೆ.
ಇದೀಗ ಡೆಲಿವರಿ ಆಗುವ ಮುಂಚೆ ಕೂಡ ಚಂದನ್ ಗೌಡ ವಿಡಿಯೋ ಮಾಡಿದ್ದಾರೆ ಹಾಗೆಯೇ ಅದಾದ ಬಳಿಕ ಮಗುವಿನ ಕಾಲಿನ ಫೋಟೋ ಹಾಗೆಯೇ ಮಗು ತಂದೆಯ ಕೈ ಹಿಡಿದಿರುವ ಫೋಟೋವನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ಕವಿತಾ ಗೌಡ ಆರಾಮ ಆಗಿರುವುದನ್ನು ಕೂಡ ಚಂದನ್ ಗೌಡ ವಿಡಿಯೋ ಮಾಡುವುದರ ಮೂಲಕ ರಿವಿಲ್ ಮಾಡಿದ್ದಾರೆ. ಈಗಾಗಲೇ ಕವಿತಾ ಗೌಡ ಡಿಸ್ಚಾರ್ಜ್ ಮಾಡಿಸುವ ವೇಳೆ ಕವಿತಾ ಗೌಡ ಅವರಿಗೆ ಗಿಡವನ್ನು ಕೊಟ್ಟಿದ್ದಾರೆ ಹಾಗೆಯೇ ಮಗುವನ್ನು ಚಂದನ್ ಗೌಡ ಹಿಡಿದುಕೊಂಡು ಬಹಳ ಖುಷಿಯಿಂದ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ.

ಇನ್ನು ಚಂದನ್ ಗೌಡ ಬಹಳ ಖುಷಿಯಲ್ಲಿ ಇದ್ದಾರೆ. ಈ ಮುಂಚೆ ಕವಿತಾ ಗೌಡ ಅವರು ನನಗೆ ಹೆಣ್ಣು ಮಗು ಆಗಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದರು. ಗಂಡು ಮಗು ಚಂದನ್ ಗೌಡ ಇದ್ದಾರೆ. ನನಗೆ ಹೆಣ್ಣಾಗಲಿ ಎಂದು ಹೇಳಿದ್ದರು. ಇದೀಗ ಮನೆಗೆ ಕೃಷ್ಣ ನ ಆಗಮನವಾಗಿದೆ ಮನೆ ಮಂದಿಯ ಖುಷಿಗೆ ಪಾರವೇ ಇಲ್ಲದ ಹಾಗೆ ಆಗಿದೆ. ಇನ್ನು ಕವಿತಾ ಗೌಡ ಹಾಗೂ ಮಗುವಿಗೆ ಮನೆಯಲ್ಲಿ ಕೂಡ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಚಂದನ್ ಗೌಡ ಕಾರಿಗೆ ಬೀಬಿ ಆನ್ ಬೋರ್ಡ್ ಎಂದು ಹಾಕಲಾಗಿದೆ.
ಮಗು ಜೊತೆ ಮನೆಗೆ ಬಂದ ಕವಿತಾ
ಇನ್ನು ಮನೆಗೆ ಮಗುವನ್ನು ಹಿಡಿದುಕೊಂಡು ಚಂದನ್ ಗೌಡ ಹಾಗೆ ಕವಿತಾ ಗೌಡ ಬಂದಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ಸೇರಿ ಮನೆಯನ್ನು ಸಿಂಗಾರ ಮಾಡಿದ್ದಾರೆ ಹಾಗೆಯೇ ಮಗು ಹಿಡಿದು ನಿಂತ ಚಂದನ್ ಗೌಡ ಹಾಗೂ ಕವಿತಾ ಗೌಡ ಗೆ ಆರತಿ ಎತ್ತಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಧಾರಾವಾಹಿಯ ಮೂಲಕ ಒಂದಾದ ಜೋಡಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಚಂದನ್ ಹಾಗೂ ಕವಿತಾ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರು ಅದಾದ ಬಳಿಕ 2021 ರ ಸಮಯದಲ್ಲಿ ಮದುವೆ ಮಾಡಿಕೊಂಡಿದ್ದರು. ಇದೀಗ ಚಂದನ್ ಗೌಡ ಹಾಗೂ ಕವಿತಾ ಗೌಡ ತಂದೆ ತಾಯಿ ಆದ ಖುಷಿಯಲ್ಲಿ ಇದ್ದಾರೆ. ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಚ್ಚಿ ಚಂದು ಎಂದೇ ಇವರಿಬ್ಬರೂ ಫೇಮಸ್ ಆಗಿದ್ದರು. ಇದೀಗ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಹಾಗೆಯೇ ಚಂದನ್ ಮಾತ್ರ ಮಗು ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು


Click it and Unblock the Notifications











