ಇನ್‌ಸ್ಟಾಗ್ರಾಮ್‌ನಲ್ಲಿ 900K ಫಾಲೋವರ್ಸ್ ಹೊಂದಿರುವ ಕನ್ನಡದ ಈ ಚೆಲುವೆ ಯಾರು. ?
ಪಾರು ಧಾರಾವಾಹಿಯ ಮೂಲಕ ಜನರ ಮನಗೆದ್ದ ನಟಿ ಎಂದರೆ ಅವರೇ ಮೋಕ್ಷಿತ ಪೈ. ಎಲ್ಲರಿಗೂ ಕೂಡ ಚಿರಪರಿಚಿತರಾದ ಬೆಡಗಿ. ಬಿಗ್ ಬಾಸ್ ಮೂಲಕ ಎಲ್ಲರ ಮನದಲ್ಲಿ ಕಮಾಲ್ ಮಾಡಿದವರು ಇವರು ಎಂದರೆ ತಪ್ಪಾಗದು. ಸಾಕಷ್ಟು ಹೋರಾಟ ಮಾಡಿ ತನ್ನ ತನವನ್ನು ಉಳಿಸಿಕೊಂಡು ಅಭಿಮಾನಿಗಳ ಪ್ರೀತಿಯನ್ನು ಸಂಪಾದನೆ ಮಾಡಿದ ಮುದ್ದು ಮೊಗದ ಚೆಲುವೆ.
ಅವರು ಬೇರೆ ಯಾರು ಅಲ್ಲ ಬದಲಿಗೆ ಮುದ್ದು ಮುಖದ ಮೋಕ್ಷಿತಾ. ಪಾರು ಧಾರಾವಾಹಿಯ ಮೂಲಕ ಎಲ್ಲರ ಗಮನ ಸೆಳೆದ ನಟಿ ಮೋಕ್ಷಿತಾ ಅಭಿನಯಕ್ಕೆ ಮಾರು ಹೋಗದವರೆ ಇಲ್ಲ. ಅಷ್ಟು ಚೆನ್ನಾಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ ಸುಂದರಿ ಮೋಕ್ಷಿತಾ. ಅಪಾರ ಜನಪ್ರಿಯತೆ ಸಿಕ್ಕರೂ ಕಿರುತೆರೆಯಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಕೂಡ ಪಾರು ಧಾರಾವಾಹಿ ಮುಗಿದ ಬಳಿಕ ಮೋಕ್ಷಿತ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಅರೇ ಮೋಕ್ಷಿತಾ ಎಲ್ಲಿ ಹೋದರೂ ಎಂದು ಅನೇಕ ಜನರು ಚಿಂತಿತರಾಗಿದ್ದರು.

ಹೀಗಿರುವಾಗ ಸುಮಾರು ದಿನಗಳ ಬಳಿಕ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡರು. ಮೊದ ಮೊದಲು ಮೌನಿಯಾಗಿದ್ದ ಮೋಕ್ಷಿತಾ ಬಳಿಕ ತನ್ನ ವರಸೆಯನ್ನು ತೋರಿಸಿದರು. ಆಟದ ಮೂಲಕವೇ ಎಲ್ಲರಿಗೂ ಉತ್ತರವನ್ನು ನೀಡಿದರು. ಮೋಕ್ಷಿತ ಮಾತಿನ ಚಾತುರ್ಯದಿಂದ ಎಲ್ಲರ ಮನಸನ್ನು ಗೆದ್ದ ನಟಿ. ಇದೀಗ ಕಣ್ಣಿನ ಸುಂದರಿ ಬಹಳಷ್ಟು ಅಭಿಮಾನಿಗಳ ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ. ಇದೆಲ್ಲಾ ಬಹಳ ಕಷ್ಟ. ಕಷ್ಟಗಳು ಏನೇ ಬಂದರೂ ಅದೆಲ್ಲವನ್ನೂ ಮೆಟ್ಟಿ ನಿಂತಿರುವ ನಟಿ ಮೋಕ್ಷಿತಾ.
ಮಾತಿನ ದಾಟಿಯಿಂದ ಅಭಿಮಾನಿಗಳ ಮೆಚ್ಚುಗೆ ಗಳಿಸಿದ ನಟಿ
ಕಣ್ಣಿನ ನೋಟದಿಂದಲೇ ಬಹಳ ಅಭಿಮಾನಿಗಳನ್ನು ತನ್ನತ್ತ ಆಕರ್ಷಿಸಿಕೊಂಡ ನಟಿಯ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಕೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟಿಗೆ ಟ್ರೆಕ್ಕಿಂಗ್ ಹೋಗುವುದು ಹಾಗೆಯೇ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಎಂದರೆ ಸಖತ್ ಇಷ್ಟ. ಇತ್ತೀಚಿಗೆ ಗೆಳೆಯರ ಜೊತೆಗೆ ಸೇರಿ ಸಖತ್ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ . ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಮಾರು 900 ಸಾವಿರ ಫಾಲೋವರ್ಸ್ ಆಗಿರುವುದರಿಂದ ಮೋಕ್ಷಿತ ಬಹಳಷ್ಟು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಮೋಕ್ಷಿತ
ಹಾಗೆಯೇ ಅಭಿಮಾನಿಗಳಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ. ಮೋಕ್ಷಿತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ವೆಕೇಶನ್ ಮೂಡ್ ನಲ್ಲಿದ್ದರು.ಗೆಳೆಯರ ಜೊತೆಗೆ ಕೇರಳದ ವಯನಾಡಿಗೆ ಭೇಟಿ ನೀಡಿದ್ದಾರೆ. ಇದರ ಸುಂದರವಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಮೋಕ್ಷಿತ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಕ್ಟಿವ್ ಆಗಿದ್ದಾರೆ. ಸೀರಿಯಲ್ ನಲ್ಲಿ ಅಭಿನಯ ಮಾಡಬೇಕಾದರೆ ಅಷ್ಟಾಗಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರಲಿಲ್ಲ.
ಸಿನಿಮಾದಲ್ಲಿ ನಟನೆ ಮಾಡಲು ಸಜ್ಜಾದ ನಟಿ
ಇದೀಗ ಮತ್ತೆ ಸಿನಿಮಾದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಲು ಸುಂದರಿ ಸಜ್ಜಾಗಿದ್ದಾರೆ. ಮಿಡಲ್ ಕ್ಲಾಸ್ ರಾಮಾಯಣ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕಪ್ಪು ಹುಡುಗಿಯ ಪಾತ್ರದಲ್ಲಿ ಮೋಕ್ಷಿತಾ ಅಭಿನಯ ಮಾಡಿದ್ದಾರೆ. ಮೋಕ್ಷಿತಾ ಅಭಿನಯಕ್ಕೆ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದು ಸಿನಿಮಾ ರಿಲೀಸ್ ಇನ್ನೇನು ಆಗಬೇಕಾಗಿದೆ. ಮೋಕ್ಷಿತ ಮಿಡಲ್ ಕ್ಲಾಸ್ ಚಿತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದದ್ದು ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಪಾರು ಧಾರಾವಾಹಿಯಲ್ಲಿ ಮುಗ್ಧ ಪಾತ್ರವನ್ನು ಹೆಚ್ಚಾಗಿ ನಿಭಾಯಿಸಿದ್ದಾರೆ. ನಟಿಯ ಅಭಿನಯಕ್ಕೆ ಮಾರು ಹೋಗಿರುವುದಂತೂ ಸತ್ಯ. ಮೋಕ್ಷಿತಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹರಿಯಬಿಡುತ್ತಿದ್ದರು. ಹಾಗೆಯೇ ಮಿಲ್ಕಿ ಬ್ಯುಟಿಯ ಸಾಕಷ್ಟು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು ನೋಡುಗರಿಗೆ ಬಹಳಷ್ಟು ಮುದ ನೀಡುತ್ತಿರುವುದು ಮಾತ್ರ ಸತ್ಯ.


Click it and Unblock the Notifications











