Neenade Na ; ಜಾಲಿ ಟ್ರಿಪ್ ನಲ್ಲಿ ವಿಕ್ರಂ ವೇದಾ, ಗುಡ್ ನ್ಯೂಸ್ ಇದೆಯಾ ಎಂದ ಫ್ಯಾನ್ಸ್ ..!

By ಪೂರ್ವ

ವಿಕ್ರಂ ವೇದಾ ಎಂದರೆ ಧಾರವಾಹಿ ಪ್ರಿಯರಿಗೆ ಎಲ್ಲರಿಗೂ ಕೂಡ ಬಹಳ ಇಷ್ಟನೆ. ನೀನಾದೆ ನಾ ಧಾರಾವಾಹಿಯ ಮೂಲಕ ಎಲ್ಲರ ಮನಸ್ಸು ಗೆದ್ದ ಈ ಜೋಡಿ ಇದೀಗ ಮತ್ತೊಮ್ಮೆ ಹೊಸದಾಗಿ ಕಮಾಲ್ ಮಾಡುತ್ತಿದ್ದು ಅಭಿಮಾನಿಗಳಿಗೆ ಮಾತ್ರ ಖುಷಿಯನ್ನು ನೀಡುತ್ತಿದ್ದಾರೆ. ನೀನಾದೆ ನಾ ಧಾರಾವಾಹಿ ಮುಗಿಯುತ್ತಿದೆ ಎಂದು ಹೇಳಿದಾಗಲೇ ನೀನಾದೆ ನಾ ಟೂ ಧಾರವಾಹಿ ಅನೌನ್ಸ್ ಆಗುತ್ತದೆ. ಈ ಧಾರವಾಹಿ ಕರಾವಳಿ ಗರಿಗೆ ಬಹಳ ಅಚ್ಚುಮೆಚ್ಚಿನ ಧಾರವಾಹಿ ಆಗುವುದರಲ್ಲಿ ಡೌಟ್ ಬೇಡ. ಕರಾವಳಿಗರು ಮಾತನಾಡುವ ಕನ್ನಡ ಬಳಸಿಕೊಂಡು ಹಾಗೆಯೇ ಮಂಗಳೂರಿನ ಭಾಗದಲ್ಲಿ ಈ ಧಾರವಾಹಿ ಬಹಳ ಹೆಚ್ಚಾಗಿ ಶೂಟಿಂಗ್ ನಡೆಯುತ್ತಿರುವುದರಿಂದ ಈ ಧಾರಾವಾಹಿಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ.

ಇನ್ನೂ ಕೆಲವು ಜನ ದಿಲೀಪ್ ಹಾಗೂ ಖುಷಿ ಅವರನ್ನು ತೆರೆ ಮುಂದೆ ನೋಡಲು ಹೆಚ್ಚು ಇಷ್ಟ ಪಡುತ್ತಾರೆ. ಇದೀಗ ದಿಲೀಪ್ ಫ್ಯಾಮಿಲಿ ಹಾಗೆಯೇ ಖುಷಿ ಫ್ಯಾಮಿಲಿ ಗೋವಾಕ್ಕೆ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಬೀಚ್ ಹಾಗೆಯೇ ಇತರ ಸ್ಥಳಗಳಲ್ಲಿ ಫೋಟೋಗಳನ್ನ ತೆಗೆದಿದ್ದಾರೆ. ಹಾಗೆಯೇ ಸಾಕಷ್ಟು ಎಂಜಾಯ್ ಕೂಡ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೋಡುಗರಿಗೆ ಮಾತ್ರ ಬಹಳಷ್ಟು ಖುಷಿಯನ್ನು ನೀಡುತ್ತಿದೆ.

kannada serial actres neenade na serial actrs gova trip

ಇನ್ನೂ ವಿಕ್ರಂ ವೇದಾ ನೀವು ಯಾಕೆ ನಿಜ ಜೀವನದಲ್ಲಿ ಕೂಡ ಮದುವೆ ಆಗಬಾರದು ಎಂದು ಜನರು ಆಗಾಗ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಅಷ್ಟರ ಮಟ್ಟಿಗೆ ವೀಕ್ಷಕರಿಗೆ ಈ ಧಾರವಾಹಿ ಬಹಳಷ್ಟು ಹತ್ತಿರ ಆಗಿದೆ. ಅನೇಕ ಜನರು ದಿಲೀಪ್ ಹಾಗೂ ಖುಷಿ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ. ಎಂದು ಗುಸು ಗುಸು ಪಿಸು ಪಿಸು ಆಡುತ್ತಿರುತ್ತಾರೆ. ಇನ್ನು ಖುಷಿ ಶಿವು ಅವರ ತಂದೆ ಹಾಗೂ ದಿಲೀಪ್ ಅವರ ಸಹೋದರ ಧೀರಜ್ ಶೆಟ್ಟಿ ಹಾಗೂ ತಾಯಿ ಐದು ಜನ ಸೇರಿ ಗೋವಾಕ್ಕೆ ಹೋಗಿದ್ದಾರೆ.

ಗೋವಾ ಟ್ರಿಪ್ ಎಂಜಾಯ್ ಮಾಡಿದ ಖುಷಿ

ಅಲ್ಲಿ ಬಹಳ ಖುಷಿ ಖುಷಿಯಿಂದಲೇ ದಿನಗಳನ್ನು ಕಳೆದಿದ್ದಾರೆ. ಅನೇಕ ಜನರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ ನೀನಾದೆ ನಾ ಮುಗಿಯುವ ಹಂತಕ್ಕೆ ಬಂದಾಗ ಮಾತ್ರ ಅನೇಕ ಜನರಿಗೆ ಈ ವಿಚಾರ ತರಿದಿತ್ತು. ಏಕೆಂದರೆ ವಿಕ್ರಂ ವೇದಾ ಜೋಡಿ ಎಂದಾಗ ಅಭಿಮಾನಿಗಳಿಗೆ ಬಹಳ ಪ್ರೀತಿ. ಅದಾದ ಬಳಿಕ ಮತ್ತೆ ನೀನಾದೆ ನಾ ಧಾರವಾಹಿ ಮುಂದುವರೆಯುತ್ತದೆ ಆದರೆ ಬೇರೆ ರೀತಿಯಲ್ಲಿಯೇ ಇವರಿಬ್ಬರ ನಟನೆ ಮಾಡುವ ಧಾರಾವಾಹಿಯ ಕಥಾ ಹಂದರ ಮೂಡಿಬರುತ್ತದೆ ಎನ್ನುವುದು ತಿಳಿಯುತ್ತದೆ.

ವಿಕ್ರಂ ವೇದಾ ಜೋಡಿ ನೋಡುವುದೇ ಚೆಂದ ಎಂದ ಫ್ಯಾನ್ಸ್

ಈ ವಿಚಾರ ಅನೇಕರಿಗೆ ಬೇಸರ ತರಿಸಿದೆ. ನಮಗೆ ಮೊದಲೇ ಇದ್ದ ನೀನಾದೆ ನಾ ಧಾರವಾಹಿ ಬಹಳ ಇಷ್ಟ ಆಗಿದೆ. ಅದೇ ಬೇಕು ಎಂದೆಲ್ಲ ಹೇಳಿದ್ದರು. ಇನ್ನು ಗೋವಾ ಟ್ರಿಪ್ ನಲ್ಲಿ ಎಲ್ಲರೂ ಕೂಡ ಸಖತ್ ಆಗಿ ಎಂಜಸ್ಟ್ ಮಾಡಿದ್ದಾರೆ. ಹಾಗೆಯೇ ಫೋಟೋಗಳನ್ನು ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಹಾಗೆಯೇ ಫ್ಯಾನ್ಸ್ ಆಗಾಗ ಇವರಿಬ್ಬರ ಬಳಿ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಏನಾದರು ಗುಡ್ ನ್ಯೂಸ್ ಇಲ್ವಾ ಎಂದೆಲ್ಲ ಕೇಳುತ್ತಲೇ ಇದ್ದಾರೆ ಆದರೆಯಿದ್ಯಾವುದಕ್ಕೆ ಕೂಡ ಇವರಿಬ್ಬರೂ ಪ್ರತಿಕ್ರಿಯೆ ನೀಡಿಲ್ಲ. ಖುಷಿ ಹಾಗೂ ದಿಲೀಪ್ ತೆರೆ ಮುಂದೆ ಎಷ್ಟು ಖುಷಿಯಾಗಿ ಇರುತ್ತಾರೆ. ಅದೇ ರೀತಿ ತೆರೆಯ ಹಿಂದೆ ಕೂಡ ಅದೇ ಇರುತ್ತಾರೆ. ಮುಂದೆ ಇವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಾರ ಕಾದು ನೋಡಬೇಕಿದೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X