ಚೊಚ್ಚಲ ಮಗುವನ್ನು ಸಂಭ್ರಮದಿಂದ ಬರಮಾಡಿಕೊಂಡ ಅಜಯ್ ರಾಜ್ ದಂಪತಿ..!
ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿದ ಪದ್ಮಿನಿ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಅಭಿನಯ ಮಾಡುತ್ತಿರುವ ನಟ ಅಜಯ್ ರಾಜ್ ದಂಪತಿ ಗಂಡು ಮಗುವನ್ನು ಬಹಳ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಇದೀಗ ತಂದೆ ಅಜಯ್ ಹಾಗೂ ತಾಯಿ ಪದ್ಮಿನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದ ಪದ್ಮಿನಿ ದೇವನಹಳ್ಳಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಇದರಿಂದ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.
ಏಪ್ರಿಲ್ 15 ರಂದು ಪದ್ಮಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಖುಷಿ ಸುದ್ದಿಯನ್ನು ಅಜಯ್ ರಾಜ್ ಇನ್ಸ್ಟ್ರಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಅಜಯ್ ಹಾಗೂ ಪದ್ಮಿನಿ ಮದುವೆ ಆಗಿ ನಾಲ್ಕು ವರುಷ ಆಗಿದೆ. ಇದೀಗ ಪದ್ಮಿನಿ ಅವರು ಹೇಗಿದ್ದಾರೆ, ಚೆನ್ನಾಗಿದ್ದಾರ ಎಂದು ಆಗಾಗ ಪ್ರಶ್ನೆ ಮೇಲೆ ಪ್ರಶ್ನೆ ಅಭಿಮಾನಿಗಳು ಮಾಡುತ್ತಿದ್ದಾರೆ. ಕಲಾವಿದರ ಕುಟುಂಬದಲ್ಲಿ ಇದೀಗ ಬಹಳಷ್ಟು ಸಂತಸ ಮನೆ ಮಾಡಿದೆ. ಕಲಾವಿದರ ಕುಟುಂಬ ಎಂದು ಯಾಕೆ ಎಂದರೆ ಪದ್ಮಿನಿ ಹಾಗೂ ಅಜಯ್ ರಾಜ್ ಕೂಡ ನಟರೆ ಆದರೆ ಪದ್ಮಿನಿ ಅವರ ತಂದೆ ಕೂಡ ಒಬ್ಬ ಹಿರಿಯ ನಟ. ಹೌದು ಸೀತಾರಾಮ ಧಾರಾವಾಹಿಯ ಮೂಲಕ ಕಮಾಲ್ ಮಾಡುತ್ತಿರುವ ನಟ ಬೇರೆ ಯಾರು ಅಲ್ಲ. ಕಲಾ ಗಂಗೋತ್ರಿ ಮಂಜು ಅವರು ತಾತ ಆದ ಆಗುತ್ತಿರುವ ಖುಷಿಯಲ್ಲಿದ್ದಾರೆ.

ಪದ್ಮಿನಿ ಅವರ ತಂದೆ ಲಕ್ಷ್ಮೀ ಕಲಾ ಗಂಗೋತ್ರಿ ಮಂಜು ಬಹಳ ಖುಷಿಯಲ್ಲಿದ್ದಾರೆ. ಲಕ್ಷ್ಮೀ ಕಲಾಗಂಗೋತ್ರಿ ಮಂಜು ಅವರು ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ತಾತ ನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಪದ್ಮಿನಿ ಅವರು ಈ ಹಿಂದೆ ʼಮಹಾದೇವಿʼ, ʼಹಿಟ್ಲರ್ ಕಲ್ಯಾಣʼ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಜಯ್ ರಾಜ್ ಅವರು ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆ ಆಗಿ ನಾಲ್ಕು ವರುಷಗಳ ಆದ ಬಳಿಕ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ಅಜಯ್ ರಾಜ್ ಅವರು ಮುಕ್ತ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಾಗೆಯೇ ಹಲವಾರು ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಮುಂದಿನ ನಿಲ್ದಾಣ ಹಾಗೆಯೇ ಇಂತಹ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ
ಇದೀಗ ಪ್ರಸ್ತುತ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ. ಅಜಯ್ ರಾಜ್ ನಟ ಯಶ್ ನ ಒಳ್ಳೆಯ ಗೆಳೆಯ. ಚಿಕ್ಕ ವಯಸ್ಸಿನಿಂದಲೂ ಒಳ್ಳೆಯ ಅಭಿನಯ ಮಾಡಿಕೊಂಡು ಬಂದು ಇದೀಗ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಾಗೆಯೇ ಅಜಯ್ ರಾಜ್ ಮನೆಯಲ್ಲಿ ಖುಷಿ ದುಪ್ಪಟ್ಟಾಗಿದೆ. ಅಜಯ್ ರಾಜ್ ಸಣ್ಣ ವಯಸ್ಸಿನಿಂದಲೂ ಕೂಡ ನಟನೆಯನ್ನು ಕರಗತ ಮಾಡಿಕೊಂಡು ಬಂದಿದ್ದಾರೆ. ಏನಾದರು ಕಲಾ ಸಾಧನೆ ಮಾಡಬೇಕು ಎನ್ನುವ ಆಲೋಚನೆ ಅವರನ್ನು ಸದಾ ಕಾಡುತ್ತಿರುತ್ತದೆ.
ಹರೀಶನ ಪಾತ್ರ ನಿರ್ವಹಿಸುತ್ತಿರುವ ಅಜಯ್ ರಾಜ್
ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹರೀಶ ಎನ್ನುವ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಎಲ್ಲರೂ ಇರುತ್ತಾರೆ. ಜಾಹ್ನವಿ ಸತ್ತಿದ್ದಾಳೆ ಎಂದು ಎಲ್ಲರೂ ನಂಬಿ ಆಕೆಗೆ ಹಾಲು ತುಪ್ಪ ಬಿಡುವ ಕಾರ್ಯಕ್ರವನ್ನು ಮಾಡಿದ್ದರು ಆದರೆ ಹರೀಶನ ತಂಗಿ ಜಾಹ್ನವಿ ಇನ್ನೂ ಕೂಡ ಬದುಕಿದ್ದಾಳೆ ಎಂದು ಇನ್ನಷ್ಟೇ ತಿಳಿಯಬೇಕಾಗಿದೆ.


Click it and Unblock the Notifications











