Sushmita and Jaggappa; ಮಲೆ ಮಹದೇಶ್ವರನ ದರ್ಶನ ಪಡೆದ ಕ್ಯೂಟ್ ಕಪಲ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್.!

By ಪೂರ್ವ

ಸ್ಯಾಂಡಲ್ ವುಡ್ ಕ್ಯೂಟೆಸ್ಟ್ ಕಪಲ್ ಎಂದರೆ ಸುಶ್ಮಿತಾ ಹಾಗು ಜಗ್ಗಪ್ಪ ಎಂದು ಹೇಳಿದರು ತಪ್ಪಾಗದು. ಇವರಿಬ್ಬರೂ ಪ್ರೀತಿಸಿ ಮದುವೆಯಾದ ಜೋಡಿ.ಮಜಾ ಭಾರತ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ಮನ ಗೆದ್ದ ಈ ಜೋಡಿಯ ಮೋಡಿಗೆ ಮನಸೋಲದವರೇ ಇಲ್ಲ. ಮಜಾ ಭಾರತ ರಿಯಾಲಿಟಿ ಶೋ ನಿಂದ ಸುಶ್ಮಿತಾ ಹಾಗು ಜಗ್ಗಪ್ಪ ನಡುವೆ ಪ್ರೇಮಾಂಕುರಾಗಿತ್ತು. ಇನ್ನು ಮಜಾ ಭಾರತದಲ್ಲಿ ಕೂಡ ಈ ಕಪಲ್ಸ್ ತನ್ನದೇ ಆದ ಕಮಾಲ್ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗದು.

7 ವರ್ಷ ಪ್ರೀತಿಸಿ ಭರ್ಜರಿ ಬ್ಯಾಚುಲರ್ಸ್ ಫಿನಾಲೆ ವೇದಿಕೆಯಲ್ಲಿ ಜಗ್ಗಪ್ಪ ತನ್ನ ಪ್ರೀತಿಯ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಸುಶ್ಮಿತಾ ಕೂಡ ಹಾಸ್ಯ ಕಲಾವಿದೆ. ಮಜಾ ಭಾರತಿ ರಿಯಾಲಿಟಿ ಶೋ ಆದ ಬಳಿಕ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಇವರು ಮಿಂಚಿದ್ದಾರೆ. ವೀಕ್ಷಕರ ಮನಗೆದ್ದ ಧಾರವಾಹಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಗೆಳತಿ ಹಿತ ಪಾತ್ರದಲ್ಲಿ ಸುಶ್ಮಿತಾ ಮಿಂಚಿದ್ದರು . ಹಾಗೆಯೇ ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದಾರೆ.

kannada serial actres sushmita and jaggappa visit male mahadeshvara temple

ಸುಶ್ಮಿತಾ ಹಾಗೂ ಜಗ್ಗಪ್ಪ ಜೋಡಿ ಕಾರು ತೆಗೆದುಕೊಳ್ಳುವಾಗ ಎಲ್ಲರೂ ಖುಷಿ ಪಟ್ಟಿದ್ದರು. ಯಾಕೆಂದರೆ ಅವರಿಬ್ಬರೂ ಬಹಳ ಕಷ್ಟ ಪಟ್ಟು ಈ ಸ್ಥಾನಕ್ಕೆ ಬಂದಿದ್ದರು ಆದುದರಿಂದ ಅಭಿಮಾನಿಗಳಿಗೆ ಬಹಳ ಖುಷಿ ಕೂಡ ಆಗಿತ್ತು. ಹಾಗೆಯೇ ಗೌರಿ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಮನೆಯಲ್ಲಿ ಮಾಡಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇನ್ನು ಸುಶ್ಮಿತಾ ಡ್ರೆಸ್ಸಿಂಗ್ ಸ್ಟೈಲ್ ಗೆ ಅಭಿಮಾನಿಗಳು ಕೊಂಚ ಅಸಮಾಧಾನ ಮಾಡಿಕೊಂಡಿದ್ದರು.

ಫೋಟೋ ಗೆ ಪೋಸ್ ಕೊಟ್ಟ ನಟಿ

ಆದರೆ ಇದೀಗ ಜಗ್ಗಪ್ಪ ಹಾಗೂ ಸುಶ್ಮಿತಾ ಕುಟುಂಬ ಸಮೇತರಾಗಿ ಮಲೆ ಮಹದೇಶ್ವರನ ದರ್ಶನ ಮಾಡಲು ಹೋಗಿದ್ದಾರೆ. ಹೌದು ದೇವರ ದರ್ಶನ ಮಾಡಲು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಕುಟುಂಬ ಸಮೇತರಾಗಿಯೇ ಮಹಾದೇಶ್ವರನ ದರ್ಶನ ಪಡೆದು ಪುನೀತರಾಗಿದ್ದಾರೆ. ಅಭಿಮಾನಿಗಳು ಕೂಡ ಸುಶ್ಮಿತಾ ಹಾಗೂ ಜಗ್ಗಪ್ಪ ಅವರನ್ನು ಒಟ್ಟಾಗಿ ನೋಡಿ ಬಹಳ ಖುಷಿ ಪಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗದು.

7 ವರ್ಷ ಪ್ರೀತಿ ಮಾಡಿ ಮದುವೆಯಾದ ಜೋಡಿ

ಭರ್ಜರಿ ಬ್ಯಾಚುಲರ್ಸ್ ಫಿನಾಲೆ ವೇದಿಕೆಯಲ್ಲಿ ತನ್ನ ಪ್ರೀತಿ ವಿಚಾರವನ್ನು ಪ್ರಸ್ತಾಪ ಮಾಡಿದ್ದರು ಹಾಗೆಯೇ ತಾನು ಪ್ರೀತಿಸಿದ ಹುಡುಗಿಗೆ ಉಂಗುರ ಹಾಕಿ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಹೀಗೆ ಏಳು ವರ್ಷದ ಪ್ರೀತಿ ಮದುವೆಯತ್ತ ಮುಖ ಮಾಡಿತ್ತು. ಅದಾದ ಬಳಿಕ 2023 ನವೆಂಬರ್ 19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗ್ಗಪ್ಪ ವೀಕೆಂಡ್ ರಿಯಾಲಿಟಿ ಶೋ ಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಹಾಗೆಯೇ ಸುಶ್ಮಿತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯ ಆಗಿರುವ ನಟಿ ಎಂದು ಹೇಳಿದರು ತಪ್ಪಾಗದು. ಆಗಾಗ ಫೋಟೋಗಳನ್ನು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇವರ ನಟನೆಗೆ ಮನಸೋಲದವರೇ ಇಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X