ಡಿಫರೆಂಟ್ ಲುಕ್ ನಲ್ಲಿ ಮಿಂಚಿದ ತಾರಾ ಅನುರಾಧಾ, ವ್ಹಾವ್ ಸೋ ಕ್ಯೂಟ್ ಎಂದ ಫ್ಯಾನ್ಸ್...!
ಸಿನಿಮಾಗಳಲ್ಲಿ ಉತ್ತಮ ಛಾಪು ಮೂಡಿಸಿದ ನಟಿ ಮಣಿಯರಲ್ಲಿ ತಾರಾ ಅನುರಾಧಾ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗದು. ಹಿರಿಯ ನಟಿ ಆಗಿರುವ ತಾರ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಹಲವಾರು ಪೋಷಕ ಪಾತ್ರದಲ್ಲಿ ನಟನೆಯನ್ನು ಮಾಡಿದ್ದಾರೆ. ಇದೀಗ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟನೆ ಮಾಡುತ್ತಾ ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಜಡ್ಜ್ ಸ್ಥಾನದಲ್ಲಿ ಕುಳಿತು ತೀರ್ಪು ಕೊಡುತ್ತಾ ತನ್ನದೇ ಛಾಪನ್ನು ಮೂಡಿಸಿದ್ದಾರೆ.
ಹಾಗೇಯೇ ಇವರು ರಾಜಕೀಯದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ತಾರಾ ಅನುರಾಧ ಅವರು ಹೊಸದೊಂದು ವಿಚಾರಕ್ಕೆ ಸಖತ್ ಸುದ್ದಿಯಾಗಿದ್ದಾರೆ. ಡಿಸೈನರ್ ಲಕ್ಷ್ಮಿ ಕೃಷ್ಣ ಅವರ ಡಿಸೈನರ್ ಹಸಿರು ಶಿಫಾನ್ ಎಂಬ್ರಾಯ್ಡರಿ ಶರ್ಟ್ ಸೀರೆಯಲ್ಲಿ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ.

ಸದಾ ಒಂದಲ್ಲ ಒಂದು ಆಕರ್ಷಕ ಬಟ್ಟೆಗಳನ್ನು ತೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ನಟಿ ತಾರಾ ಎಲ್ಲರ ಜೊತೆ ನಗು ನಗುತ್ತಾ ಎಲ್ಲರಿಗೂ ಸ್ಫೂರ್ತಿ ತುಂಬುವ ಮಾತುಗಳನ್ನೇ ಹೇಳುತ್ತಿರುತ್ತಾರೆ. ಇನ್ನೂ ಹಲವಾರು ಬಾರಿ ತಾರಾ ಅನುರಾಧ ಅವರು ಪುಸ್ತಕಗಳನ್ನು ನಾನು ಹೆಚ್ಚಾಗಿ ಓದುತ್ತೇನೆ , ಬರೆಯುತ್ತೇನೆ ಎಂದೆಲ್ಲ ಹೇಳುತ್ತಿದ್ದರು. ಇದೀಗ ತಾರ ಅನುರಾಧ ಅವರ ಹೊಸ ಕಾಸ್ಟ್ಯೂಮ್ ಡಿಸೈನ್ ನೋಡಿ ಬಹುತೇಕ ಜನರಿಗೆ ಬಹಳ ಖುಷಿ ಆಗಿದೆ.
ಸಖತ್ ಟ್ರೆಂಡ್ ಸೃಷ್ಟಿ ಮಾಡಿದೆ ಶರ್ಟ್ ಸೀರೆ
ಶರ್ಟ್ ಸೀರೆಗಳು ಅತಿ ಹೆಚ್ಚಾಗಿ ಸಮ್ಮರ್ ಸೀಸನ್ ಹೊರತುಪಡಿಸಿ ಮಳೆಗಾಲ ಅಥವಾ ಚಳಿಗಾಲದಲ್ಲಿ ಟ್ರೆಂಡ್ ಆಗುತ್ತವೆ. ಇನ್ನೂ ಚಳಿಗಾಲದಲ್ಲಿ ಇಂತಹ ಸೀರೆಯುಟ್ಟರೆ ಚಳಿಗಾಲದ ಸಮಯದಲ್ಲಿ ಬಹಳ ಒಳ್ಳೆಯದು ಎಂಬ ಅಭಿಪ್ರಾಯ ಅನೇಕರದ್ದು. ಸದ್ಯ ತಾರಾ ಅನುರಾಧಾ ಅವರ ಡಿಫರೆಂಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಾರಾ ಅವರ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಲೈಕ್ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ತಾರಾ ಲುಕ್ ಗೆ ನೆಟ್ಟಿಗರು ಫಿದಾ
ಇನ್ನೂ ಕೆಲವರು ಮಾಡೆಲ್ ಹಾಗೆ ಇದ್ದೀರಾ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ತಾರಾ ಅವರ ಹೊಸ ಲುಕ್ ಗೆ ಎಲ್ಲರೂ ಫಿದಾ ಆಗಿರುವುದು ಮಾತ್ರ ಸತ್ಯ. ಇನ್ನೂ ತಾರಾ ಅನುರಾಧ ಅವರ ಹೊಸ ಸಾರಿ ಲುಕ್ ನಲ್ಲಿ ಫುಲ್ ಮಿಂಚುತ್ತಿದ್ದಾರೆ ನೋಡಲು ಶರ್ಟ್‌ನಂತಹ ಬ್ಲೌಸ್‌ಗಳು, ಈ ಸೀರೆಗೆ ಕಂಪ್ಲೀಟ್ ಇಂಡೋ-ವೆಸ್ಟರ್ನ್ ಲುಕ್ ಕಲ್ಪಿಸುತ್ತವೆ. ಇನ್ನು, ಈ ಕಾಲರ್ ಶರ್ಟ್ ಬ್ಲೌಸ್‌ಗೆ ಮಾಡಿದ ಎಂಬ್ರಾಯ್ಡರಿ ಸಿಂಗಾರ ಎಥ್ನಿಕ್ ಟಚ್ ಕೂಡ ನೀಡಿದೆ.
ತಾರಮ್ಮ ಗೆ ಸೀರೆ ಪಂಚ ಪ್ರಾಣ
ಮೊದಲಿಗೆ ಇಂತಹ ಸೀರೆಗಳು ಬಾಲಿವುಡ್ ಸ್ಟಾರ್ ಗಳು ಉಟ್ಟುಕೊಳ್ಳುತ್ತಿದ್ದರು.ತಾರಾ ಅನುರಾಧಾ ಅವರಿಗೆ ಮೊದಲಿನಿಂದಲೂ ಸೀರೆ ಎಂದರೆ ಪಂಚಪ್ರಾಣ. ಸೀರೆಯಲ್ಲಿ ಡಿಫರೆಂಟ್ ಲುಕ್ ನಲ್ಲಿ ತಾರಾ ಅನುರಾಧ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗೆಯೇ ಹಲವು ರಿಯಾಲಿಟಿ ಶೋ ನಲ್ಲಿ ಕೂಡ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











