ಎರಡು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ವಾಪಸ್ ಬಂದ ನಟಿ ಯಮುನಾ ಶ್ರೀನಿಧಿ: ಯಾವುದು ಆ ಸೀರಿಯಲ್?

By ಅನಿತಾ ಬನಾರಿ

ಕಿರುತೆರೆ ನಟಿ ಯಮುನಾ ಶ್ರೀನಿಧಿ ಎರಡು ವರ್ಷಗಳ ನಂತರ ಕಿರುತೆರೆಗೆ ವಾಪಸ್ ಆಗುತ್ತಿದ್ದಾರೆ. ಹೌದು, ನಟಿ ಯಮುನಾ ಶ್ರೀನಿಧಿ ಕಿರುತೆರೆ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳಿಂದ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಯಮುನಾ ಶ್ರೀನಿಧಿ ಕಿರುತೆರೆಯಿಂದ ಎರಡು ವರ್ಷಗಳಿಂದ ದೂರವೇ ಇದ್ದಾರೆ.

ಇದೀಗ 'ನನ್ನ ದೇವ್ರು' ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ ಆಗುತ್ತಿರುವ ನಟಿ ಯಮುನಾ ಶ್ರೀನಿಧಿಯವರು ತಮ್ಮ ಈ ಬದಲಾದ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. "ಎರಡು ವರ್ಷಗಳಿಂದ ನನಗೆ ಯಾವುದೇ ರೀತಿಯ ಧಾರಾವಾಹಿಗಳಿಗೆ ಕಮಿಟ್ ಆಗಲು ಅವಕಾಶವಾಗಲಿಲ್ಲ. ಹಲವಾರು ವೈಯಕ್ತಿಕ ಕಾರಣಗಳಿಂದ ನಾನು ಧಾರಾವಾಹಿಗಳಿಂದ ದೂರವೇ ಉಳಿದಿದ್ದೆ. ಇದೀಗ ನನ್ನ ಮಗಳು ಬಹಳಷ್ಟು ಸಪೋರ್ಟ್ ಮಾಡುತ್ತಿರುವುದರಿಂದ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದೇನೆ. ಈ ಬಗ್ಗೆ ನನಗೆ ಬಹಳ ಸಂತೃಪ್ತಿ ಇದೆ ಎಂದಿದ್ದಾರೆ" ನಟಿ ಯಮುನಾ ಶ್ರೀನಿಧಿ.

Kannada serial actres Yamuna Srinidhi is back on television after two years gap

ನನ್ನ ಮಗ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾನೆ. ಅವನೊಂದಿಗೆ ನನ್ನ ಪತಿಯೂ ಅಮೆರಿಕದಲ್ಲಿದ್ದಾರೆ‌. ಈ ಕಾರಣಕ್ಕೆ ನಾನು ಮಗಳಾದ ಲಾಸ್ಯಾಳೊಂದಿಗೆ ಹೆಚ್ಚಿನ ಸಮಯ ಕಳೆಯಬೇಕೆಂಬ ನಿರ್ಧಾರಕ್ಕೆ ಬಂದೆ. ಹಾಗಾಗಿ ಕಿರುತೆರೆಯಿಂದ ದೂರವೇ ಉಳಿದೆ. ಬರೀ ಸಿನಿಮಾಗಳಲ್ಲಿ ಒಂದಷ್ಟು ಪಾತ್ರಗಳನ್ನು ಮಾಡಿಕೊಂಡು ಬಂದೆ. ಆದರೆ ಈಗ ನನ್ನ ಮಗಳ ಸಹಕಾರದಿಂದ ಮತ್ತೆ ಕಿರುತೆರೆಗೆ ವಾಪಸ್ ಆಗುತ್ತಿದ್ದೇನೆ. 'ನನ್ನ ದೇವ್ರು' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲು ಬಹಳ ಖುಷಿ ಇದೆ" ಎಂದು ಹೇಳಿಕೊಂಡಿದ್ದಾರೆ ನಟಿ ಯಮುನಾ ಶ್ರೀನಿಧಿ.

ಮಗಳ ಸಹಕಾರದ ಜೊತೆಗೆ ನಿರ್ದೇಶಕಿ ಹಾಗೂ ನಿರ್ಮಾಪಕ ಶೃತಿ ನಾಯ್ಡು ಅವರ ಸಹಕಾರವು ಬಹಳ ಪ್ರಮುಖ ಪಾತ್ರವನ್ನು ನಿಭಾಯಿಸಿದೆ. ನನ್ನ ವೈಯಕ್ತಿಕ ಜೀವನಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಜೊತೆಗೆ ಸಾಮಾಜಿಕ ಕಾರ್ಯಗಳಿಗೂ ಸಮಸ್ಯೆ ಆಗದ ರೀತಿಯಲ್ಲಿ ಶೃತಿ ನಾಯ್ಡು ಅವರು ನನಗೆ ಬಹಳ ಫ್ಲೆಕ್ಸಿಬಲ್ ಡೇಟ್ ಗಳನ್ನು ಕೊಟ್ಟಿದ್ದಾರೆ. ಹಾಗಾಗಿ ನನ್ನ ದೇವ್ರು ಧಾರಾವಾಹಿಯಲ್ಲಿ ನಟಿಸಲು ನನಗೆ ಬಹಳ ಕಷ್ಟ ಆಗುವುದಿಲ್ಲ ಎಂದು ನಂಬಿದ್ದೇನೆ. ಈ ಕಾರಣಕ್ಕೆ ನಾನು ಶ್ರುತಿ ನಾಯ್ಡು ಅವರಿಗೆ ಚಿರಋಣಿ ಎಂದು ಹೇಳಿದ್ದಾರೆ ಯಮುನಾ ಶ್ರೀನಿಧಿ.

ಧಾರಾವಾಹಿ ಎಂದ ಮೇಲೆ ಇದು ಬಹುದೊಡ್ಡ ಕಮಿಟ್‌ಮೆಂಟ್. ಹಾಗಾಗಿ ನನ್ನ ವೈಯಕ್ತಿಕ ಜೀವನಕ್ಕೂ ಯಾವುದೇ ರೀತಿಯ ತೊಂದರೆ ಆಗದಂತೆ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮ್ ಮಾಡಲು ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಇದೇ ಜುಲೈನಿಂದ ನಾನು 'ನನ್ನ ದೇವ್ರು' ಧಾರಾವಾಹಿಯಲ್ಲಿ ಒಂದು ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದೇನೆ. " ಎಂದು ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ ನಟಿ ಯಮುನಾ ಶ್ರೀನಿಧಿ.

ಅಂದಹಾಗೆ ನಟಿ ಯಮುನಾ ಶ್ರೀನಿಧಿ ಅವರು ಇತ್ತೀಚೆಗೆ ಬಿಡುಗಡೆ ಆದ 'ಸಪ್ತ ಸಾಗರದಾಚೆ ಎಲ್ಲೋ', 'ಕೌಸಲ್ಯ ಸುಪ್ರಜಾ ರಾಮ', 'ಘೋಸ್ಟ್' ಪ್ರಮುಖ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

More from Filmibeat

English summary
Kannada serial actres Yamuna Srinidhi is back on television after two years gap
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X