Ameeta Kulal: 'ಒಲವಿನ ನಿಲ್ದಾಣ' ಹುಡುಕಿ ಹೊರಟಿದ್ದ ನಟಿ ಅಮಿತಾ ಕುಲಾಲ್ ಈಗ ಎಲ್ಲಿದ್ದಾರೆ ಗೊತ್ತಾ..?

By Poorva

ನಟನೆಯಿಂದ ಕೊಂಚ ಬ್ರೇಕ್ ಪಡೆದಿರುವ ಅಮಿತಾ ಕುಲಾಲ್ ಇದೀಗ ವಾರಣಾಸಿಗೆ ತೆರಳಿ, ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ ಒಲವಿನ ನಿಲ್ದಾಣ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ಅಮಿತ ಕುಲಾಲ್ ಇದೀಗ ಜಾಲಿ ಮೂಡ್ ನಲ್ಲಿದ್ದಾರೆ. ಜಿಮ್, ಯೋಗ, ಟ್ರಾವೆಲ್ ಹೀಗೆ ಅನೇಕ ಬಗೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಹಳ ಆಕ್ಟಿವ್ ಆಗಿದ್ದಾರೆ ಅಮಿತಾ.

ವಾರಣಾಸಿಗೆ ಅಮಿತಾ ಕುಲಾಲ್ ಭೇಟಿ ನೀಡಿ ಅದ್ಭುತ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಹಾಗೆಯೇ ಅಲ್ಲಿ ಯೋಗದ ಬಗೆಗಿನ ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಅರಿತುಕೊಂಡಿದ್ದಾರೆ. ಸೀರಿಯಲ್‌ನಿಂದಾ ಕೊಂಚ ದೂರ ಸರಿದು ಇರುವ ಅಮಿತಾ ಇದೀಗ ಟ್ರಾವೆಲಿಂಗ್‌ನಲ್ಲಿ ದಿನ ಕಳೆಯುತ್ತಾ ಇದ್ದಾರೆ.

kannada serial actress Ameeta Kulal visited varanasi

ಹಲವರಿಗೆ ಟ್ರಾವೆಲಿಂಗ್ ಅಂದರೆ ಬಹಳ ಇಷ್ಟ ಇರುತ್ತದೆ. ಆದರೆ, ಕೆಲವರು ಬ್ಯುಸಿ ಶೆಡ್ಯೂಲ್‌ನಿಂದಾ ಕೊಂಚ ರಿಲೀಫ್ ಆಗಿರಲು ಟ್ರಾವೆಲಿಂಗ್ ಮೊರೆ ಹೋಗುತ್ತಾರೆ. ಅಮಿತಾ ಕುಲಾಲ್ ವಾರಣಾಸಿಗೆ ತೆರಳಿರುವುದು ಇದು ಮೊದಲ ಬಾರಿಯೇನಲ್ಲ. ಎರಡನೇ ಬಾರಿಗೆ ವಾರಣಾಸಿಗೆ ಭೇಟಿ ನೀಡಿ ಅಲ್ಲಿನ ಆಧ್ಯಾತ್ಮಿಕತೆ ಬಗ್ಗೆಯೂ ಸಖತ್ ಆಸಕ್ತಿ ಹೊಂದಿದ್ದಾರೆ.

ಸೀರೆಯುಟ್ಟು ಕಂಗೊಳಿಸಿದ ನಟಿ

ಸೀರೆಯುಟ್ಟು ಹಣೆ ಮೇಲೆ ಹರ್ ಹರ್ ಮಹಾದೇವ್ ಎಂದು ಬರೆದುಕೊಂಡು ನಟಿ ಗಂಗಾ ಆರತಿ ದರ್ಶನ ಪಡೆದಿದ್ದಾರೆ. ಇನ್ನು ಗಂಗಾ ನದಿಯಲ್ಲಿ ದೋಣಿ ಸವಾರಿ ಮಾಡಿ ಸಖತ್ ಖುಷಿ ಪಟ್ಟಿದ್ದಾರೆ. ಅಮಿತಾ ಕುಲಾಲ್ ಧಾರಾವಾಹಿಗಳಲ್ಲಿ ಮಾತ್ರ ಅಲ್ಲದೆ ಸಿನಿಮಾಗಳಲ್ಲೂ ನಟನೆ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮೊದಲ ಬಾರಿಗೆ ಸೃಜನ್ ಲೋಕೇಶ್ ಅವರ ಜೊತೆ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

kannada serial actress Ameeta Kulal visited varanasi

ಸಿನಿಮಾದಲ್ಲೂ ಸೈ ಎನಿಸಿಕೊಂಡ ನಟಿ ಅಮಿತಾ ಕುಲಾಲ್

ಹಾಗೆಯೇ ಅಮಿತಾ ಕುಲಾಲ್ ಬೆಂಗಳೂರು, ಮುಂಬೈ, ಸೇರಿ ದೇಶದ ಹಲವು ಕಡೆಗಳಲ್ಲಿ ಫ್ಯಾಷನ್ ಶೋಗಳಲ್ಲಿ ಮಿಂಚಿದ್ದಾರೆ. ಇನ್ನು ಒಲವಿನ ನಿಲ್ದಾಣ ಧಾರಾವಾಹಿ ಮೂಲಕ ಕಿರುತೆರೆಗೆ ಆಗಮಿಸಿದ ನಟಿಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರ ನಟನೆಯನ್ನು ಮೆಚ್ಚಿಕೊಂಡ ಜನ ಮನೆ ಮಗಳಂತೆ ಆಕೆಯನ್ನು ಸ್ವೀಕರಿಸಿದ್ದರು.

ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ನಟಿ

ಅಮಿತಾ ಕುಲಾಲ್ ಮಾಡೆಲಿಂಗ್ ಕ್ಷೇತ್ರದಲ್ಲಿ ಮಾತ್ರವಲ್ಲದೇ ಯೋಗ ಹಾಗೂ ಸ್ವಿಮ್ಮಿಂಗ್ ಮೂಲಕ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ ಈಕೆ. ವಾರಣಾಸಿಗೆ ತೆರಳಿದ ಅಮಿತಾ ಕುಲಾಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅವರ ಅಭಿಮಾನಿಗಳಿಗೆ ಬಹಳ ಖುಷಿ ನೀಡುತ್ತಿದೆ. ಹಾಗೆಯೇ ದೇವಾಲಯಕ್ಕೆ ಹೋಗುವಾಗ ಲಂಗ ಧಾವಣಿಯಲ್ಲಿ ಕಾಣಿಸಿಕೊಳ್ಳುತ್ತ ಇದ್ದ ಈ ಚೆಲುವೆ ಇದೀಗ ಸೀರೆಯಲ್ಲಿ ಮಿಂಚುತ್ತಾ ಇದ್ದಾರೆ.

More from Filmibeat

English summary
Actress Ameeta Kulal visited varanasi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X