'ರಾಧಾ ರಮಣ' ಖ್ಯಾತಿಯ ನಟಿ ದೀಪಿಕಾ ಈಗ ಹೇಗಾಗಿದ್ದಾರೆ ನೀವೆ ನೋಡಿ

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಾಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿಗಳಲ್ಲಿ ರಾಧ ರಮಣ ಕೂಡ ಒಂದು. ರಾಧಾ ಮತ್ತು ರಮಣ ಪಾತ್ರದ ಜೊತೆಗೆ ವಿಲನ್ ಸಿತಾರ ದೇವಿ ಮತ್ತು ಪುತ್ರಿ ದೀಪಿಕಾ ಪಾತ್ರಗಳನ್ನು ಜನ ಮರೆಯಲು ಸಾಧ್ಯವಿಲ್ಲ. ದಾರಾವಾಹಿ ಕೊನೆಯಾಗಿ ತಿಂಗಳುಗಳೆ ಆಗಿದೆ. ಆದರೆ ಧಾರಾವಾಹಿಯ ಪಾತ್ರಗಳು ಮಾತ್ರ ಜನರನ್ನು ಇಂದಿಗೂ ಕಾಡುತ್ತಲೆ ಇವೆ.

ಈ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಗೆದ್ದ ಪಾತ್ರಗಲ್ಲಿ ದೀಪಿಕಾ ಪಾತ್ರ ಕೂಡ ಒಂದು. ದೀಪಿಕಾ ನಿಜವಾದ ಹೆಸರು ಅನುಷಾ ಹೆಗ್ಡೆ. ಆದರೆ ಅನುಷಾ ಹೆಗ್ಡೆ ಅಂದರೆ ಥಟ್ ಅಂತ ಗೊತ್ತಾಗಲ್ಲ. ದೀಪಿಕಾ ಅಂದರೆ ಎಲ್ಲರಿಗೂ ಗೊತ್ತು. ಇತ್ತೀಚಿಗಷ್ಟೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದ ಅನುಷಾ ಈಗ ವಿಭಿನ್ನ ಗೆಟಪ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಕ್ಕಾ ಸಂಪ್ರದಾಯಸ್ತ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅನುಷಾ ಈಗ ದಿಢೀರನೆ ಲುಕ್ ಬದಲಿಸಿಕೊಂಡಿದ್ದಾರೆ.

ತೆಲುಗು ಧಾರಾವಾಹಿಯಲ್ಲಿ ಅನುಷಾ

ತೆಲುಗು ಧಾರಾವಾಹಿಯಲ್ಲಿ ಅನುಷಾ

ಅನುಷಾ, ರಾಧ ರಮಣ ಧಾರಾವಾಹಿ ಮುಗಿಯುತ್ತಿದ್ದಂತೆ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಆಗಿ ಕನ್ನಡಿಗರ ಮನಗೆದ್ದ ಅನುಷಾ ಈಗ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅನುಷಾ ಅಭಿನಯಕ್ಕೆ ತೆಲುಗು ಮಂದಿ ಕೂಡ ಫಿದಾ ಆಗಿದ್ದಾರೆ.

ಸೂರ್ಯಕಾಂತಂ ಧಾರಾವಾಹಿಯಲ್ಲಿ ಅನುಷಾ

ಸೂರ್ಯಕಾಂತಂ ಧಾರಾವಾಹಿಯಲ್ಲಿ ಅನುಷಾ

ಅನುಷಾ ಸದ್ಯ ತೆಲುಗಿನ ಸೂರ್ಯಕಾಂತಂ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯ ಪಾತ್ರಕ್ಕಾಗಿ ಅನುಷಾ ಸಂಪೂರ್ಣವಾಗಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಕನ್ನಡದಲ್ಲಿ ಪಕ್ಕ ಸಂಪ್ರದಾಯಸ್ತ ಹೆಣ್ಣುಮಗಳಾಗಿ ಕಾಣಿಸಿಕೊಳ್ಳುತ್ತಿದ್ದ ಅನುಷಾ, ತೆಲುಗಿನಲ್ಲಿ ಹೇರ್ ಕಟ್ ಮಾಡಿಸಿ ಫುಲ್ ಮಾರ್ಡರ್ನ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷಾರ ಈ ವಿಭಿನ್ನ ಗೆಟಪ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ.

ನಿನ್ನ ಪೆಳ್ಳಾಡತಾ ಧಾರಾವಾಹಿಯಲ್ಲಿ ಅಭಿನಯ

ನಿನ್ನ ಪೆಳ್ಳಾಡತಾ ಧಾರಾವಾಹಿಯಲ್ಲಿ ಅಭಿನಯ

ತೆಲುಗು ಕಿರುತೆರೆಯಲ್ಲಿ ಅನುಷಾ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಸೂರ್ಯಕಾಂತಂ ಧಾರಾವಾಹಿಗೂ ಮೊದಲು ನಿನ್ನ ಪೆಳ್ಳಾಡತಾ ಧಾರಾವಾಹಿಯಲ್ಲಿ ಬಣ್ಣಹಚ್ಚಿದ್ದರು. ರಾಧ ರಮಣ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನುಷಾ ಈಗ ತೆಲುಗು ಕುರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯ ಜೊತೆಗೆ ಒಂದು ಸಿನಿಮಾದಲ್ಲಿ ಮಿಂಚಿದ್ದಾರೆ.

ಪ್ರತಾಪ್ ಸಿಂಗ್ ಶಾ ಜೊತೆ ಮದುವೆ ಫಿಕ್ಸ್

ಪ್ರತಾಪ್ ಸಿಂಗ್ ಶಾ ಜೊತೆ ಮದುವೆ ಫಿಕ್ಸ್

ತೆಲುಗಿನ 'ನಿನ್ನೆ ಪೆಳ್ಳಾಡತಾ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಪ್ರತಾಪ್ ಸಿಂಗ್ ಶಾ ಜೊತೆ ಪ್ರೀತಿಯಲ್ಲಿ ಬಿದ್ದ ಅನುಷಾ ಅವರ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಶೂಟಿಂಗ್ ನಡುವೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಅವಾರ್ಡ್ ಫಂಕ್ಷನ್ ನ ವೇದಿಕೆ ಮೇಲೆಯೇ ಅನುಷಾ ಹೆಗ್ಡೆಗೆ ಪ್ರತಾಪ್ ಸಿಂಗ್ ಶಾ ಲವ್ ಪ್ರಪೋಸ್ ಮಾಡಿ ಸದ್ದು ಮಾಡಿದ್ದರು. ಈ ವರ್ಷ ಈ ಜೋಡಿ ಮದುವೆ ಆಗುವ ಸಾಧ್ಯತೆ ಇದೆ.

English summary
Kannada Serial Actress Anusha Hegde famous in Telugu Serial. Anusha Hegde appeared new look for telugu serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X