Deepa Katte: ಮದುವೆಗೂ ಮುಂಚೆ ಗೆಳೆಯನೊಂದಿಗೆ ಇದ್ದ ಬಾಂಧವ್ಯ, ಪ್ರೀತಿ ಬಗ್ಗೆ ಬಿಚ್ಚಿಟ್ಟ ನಟಿ ದೀಪಾ ಕಟ್ಟೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ಮಗಳ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡುತ್ತಿರುವ ನಟಿಯ ಹೆಸರು ಸಂಧ್ಯಾ. ಇದೀಗ ಸಂಧ್ಯಾ ತಮ್ಮ ರಿಯಲ್ ಲೈಫ್‌ ಹೀರೋ ಬಗ್ಗೆ ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾರೆ. ಹೌದು ದೀಪಾ ಕಟ್ಟೆ ತನ್ನ ಗಂಡ ರಕ್ಷಿತ್ ಬಗ್ಗೆ ಬಹಳ ಓಪನ್ ಆಗಿ ಮಾತನಾಡಿದ್ದಾರೆ.

ಇನ್ನು ಧಾರಾವಾಹಿಯಲ್ಲಿ ಸಂಧ್ಯಾ ಪಾತ್ರದಲ್ಲಿ ಸದಾ ಕಿರಿ ಕಿರಿ ಮಾಡುವ ಹಾಗೆಯೇ ಆಸೆ ಬುರುಕಿ ಆಗಿರುವ ಈಕೆ ರಿಯಲ್ ಲೈಫ್ ನಲ್ಲಿ ಮಾತ್ರ ಬಹಳ ಶಾಂತತೆಯಿಂದ ಇರುವ ಹುಡುಗಿ ಅಂತೆ. ತಾನಾಯಿತು ತನ್ನ ಪಾಡಾಯಿತು ಎಂದು ಇರುವ ಹುಡುಗಿ ಈಕೆ. ಇದೀಗ ಇವರಿಬ್ಬರೂ ಕಪಲ್ಸ್ ಕಿಚನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Kannada serial actress Deepa Katte talks about her husband Rakshith PR

ಕಾರ್ಯಕ್ರಮದಲ್ಲಿ ತನ್ನ ಗಂಡನ ಬಗ್ಗೆ ಹಾಗೆಯೇ ಎಲ್ಲಿ ಯಾವಾಗ ಮೀಟ್ ಮಾಡಿ ಗೆಳೆತನ ಶುರುವಾಯಿತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ದೀಪಾ ಹಾಗೂ ರಕ್ಷಿತ್ ಪ್ರೀತಿಸಿ ಮದುವೆಯಾದ ಜೋಡಿ ಇವರಿಬ್ಬರ ಪ್ರೀತಿ ಕಾಲೇಜು ಲೈಫ್‌ನಿಂದ ಶುರುವಾಗಿ ಕೆಲಸ ಸಿಗುವವರೆಗಿನ ಪಯಣವನ್ನು ದೀಪಾ ಕಪಲ್ಸ್ ಕಿಚನ್ ರಿಯಾಲಿಟಿ ಶೋ ಮೂಲಕ ಬಿಚ್ಚಿಟ್ಟಿದ್ದಾರೆ.

ಇಂಜಿನಿಯರಿಂಗ್ ಪದವಿ ಪಡೆದಿರುವ ನಟಿ ದೀಪಾ

ಯಾವುದೇ ಕ್ಷಣ ಭೇಟಿ ಆಗಬೇಕು ಎಂದುಕೊಂಡಾಗ ಇಬ್ಬರು ಬಿಡುವು ಮಾಡಿಕೊಂಡು ಭೇಟಿ ಮಾಡುತ್ತಿದ್ದರು. ಇದರಿಂದಾಗಿ ಸಂಧ್ಯಾ ಹಾಗೂ ರಕ್ಷಿತ್ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬಹಳ ಸಹಾಯ ಆಯಿತು ಎಂದು ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ . ದೀಪಾ ಕಟ್ಟೆ ಇಂಜಿನಿಯರಿಂಗ್ ವಿಧ್ಯಾಭ್ಯಾಸ ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಆದರೆ, ನಟನೆಯತ್ತ ಹೆಚ್ಚು ಒಲವು ತೋರಿಸಿದ ದೀಪಾ ನಟನಾ ರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಇದಕ್ಕೆ ರಕ್ಷಿತ್ ಅವರ ಪ್ರೋತ್ಸಾಹ ಕೂಡ ಇತ್ತು. ಇನ್ನು ಕಿರುತೆರೆಯ ಮೂಲಕ ಸಾಕಷ್ಟು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮನಮೆಚ್ಚಿದ ಗೆಳೆಯನೊಂದಿಗೆ ಸುಂದರ ದಾಂಪತ್ಯ

ಇದೀಗ ಸುಂದರ ದಾಂಪತ್ಯ ಬದುಕಿನತ್ತ ತನ್ನ ಚಿತ್ತ ಹರಿಸಿದ್ದಾರೆ. ಹಾಗೆಯೇ ವೈವಾಹಿಕ ಜೀವನದಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ದೀಪಾ ಹಾಗೂ ಆಕೆಯ ಗಂಡ ಒಟ್ಟಿಗೆ ಒಂದು ಕೋರ್ಸ್ ಮಾಡಿ ಮುಗಿಸಿದ್ದರು. ಆ ಬ್ಯಾಚ್‌ನಲ್ಲಿ 350 ಮಂದಿ ಇದ್ದರು . ಅದರಲ್ಲಿ 9 ಮಂದಿಗೆ ಕೆಲಸ ಆಯಿತು ಆ ಪಟ್ಟಿಯಲ್ಲಿ ನಾನು ಹಾಗೂ ರಕ್ಷಿತ್ ಕೂಡ ಇದ್ದೆವು ಎಂದು ಕಪಲ್ಸ್ ಕಿಚನ್ ಶೋ ನಲ್ಲಿ ಹೇಳಿಕೊಂಡಿದ್ದಾರೆ.

Kannada serial actress Deepa Katte talks about her husband Rakshith PR

ಗೆಳೆಯನ ಬಗ್ಗೆ ಮನದ ಮಾತು ಹಂಚಿಕೊಂಡ ನಟಿ

ಗೆಳೆತನದಿಂದ ಶುರುವಾದ ಪ್ರೀತಿ ಇದೀಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇನ್ನು ಒಂದೇ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಮಾಡಲು ಅವಕಾಶ ಸಿಕ್ಕಿತು. ಹಾಗೆಯೇ ಒಂದೇ ತಂಡದಲ್ಲಿ ನಾವು ಇದ್ದೆವು ..ನಮ್ಮಿಬ್ಬರನ್ನು ಆ ದೇವರು ಒಂದು ಮಾಡಿ ಬಿಟ್ಟಿದ್ದಾನೆ ಎಂದು ತನ್ನ ಮನದಾಳದ ಮಾತನ್ನು ದೀಪಾ ಹೇಳಿದ್ದಾರೆ.

ದೀಪಾ ನಾಟಕ ತಂಡದಲ್ಲಿ ಕೂಡ ಕೆಲಸ ಮಾಡಿದ್ದಾರೆ. ನಾಟಕ ಶೋ ಇರಬೇಕಾದರೆ ತಂದೆ ತಾಯಿ ರಕ್ಷಿತ್ ಕೂಡ ಇದ್ದರೂ ಆ ವೇಳೆ ನನ್ನನ್ನು ನೋಡಿ ರಕ್ಷಿತ್ ಕಳೆದುಹೋಗಿದ್ದಾರೆ ಎಂದು ಸಣ್ಣದಾಗಿ ಕಿಚಾಯಿದ್ದಾರೆ. ದೀಪಾ ಮೊದಲು ನಿರೂಪಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟವರು ಆದಾದ ಬಳಿಕ ಸಿನಿಮಾ ಧಾರಾವಾಹಿಗಳಲ್ಲಿ ಅಭಿನಯ ಮಾಡಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಮಿಥುನರಾಶಿ ಧಾರಾವಾಹಿ ದೀಪಾಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ಪ್ರಸ್ತುತ ನಟನಾ ರಂಗದಲ್ಲಿ ಕೂಡ ದೀಪಾ ಕಟ್ಟೆ ಬ್ಯುಸಿ ಆಗಿದ್ದಾರೆ.

More from Filmibeat

English summary
Actress Deepa Katte talks about her husband Rakshith PR.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X