ತೆಲುಗು ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಟಿ ಧನ್ಯಾ ದೀಪಿಕಾ

ಕನ್ನಡ ಕಿರುತೆರೆಯ ಖ್ಯಾತ ನಟಿ ಧನ್ಯಾ ದೀಪಿಕಾ ತೆಲುಗು ಕಡೆ ಮುಖ ಮಾಡಿದ್ದಾರೆ. ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಧನ್ಯಾ ಸದ್ಯ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ತೆಲುಗು ಧಾರಾವಾಹಿ ಒಂದರಲ್ಲಿ ಧನ್ಯಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತನ್ನ ಮೊದಲ ತೆಲುಗು ಧಾರಾವಾಹಿಯ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಇಂಟಿಕಿ ದೀಪಂ ಇಲ್ಲಾಲು' ಎನ್ನುವ ಧಾರಾವಾಹಿ ಮೂಲಕ ದೀಪಿಕಾ ಇನ್ಮುಂದೆ ಪ್ರತಿದಿನ ತೆಲುಗು ಪ್ರೇಕ್ಷಕರ ಮನೆಗೆ ಎಂಟ್ರಿ ಕೊಡಲಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಬಹಿರಂಗ ಪಡಿಸಿರುವ ದೀಪಿಕಾ, ಎಲ್ಲರ ಪ್ರೀತಿ ಮತ್ತು ಬೆಂಬಲ ಕೋರಿದ್ದಾರೆ. ಹೊಸ ಹೆಜ್ಜೆ ಇಟ್ಟಿರುವ ದೀಪಿಕಾ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು ವಿಶ್ ಮಾಡುತ್ತಿದ್ದಾರೆ.

Kannada serial Actress Dhanya Deepika enters to Telugu Serial

ದೀಪಿಕಾ ಕುಲವಧು ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಧಾರಾವಾಹಿಯ ಧನ್ಯಾ ಪಾತ್ರ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಧನ್ಯಾ ಆಗಿಯೇ ಗುರುತಿಸಿಕೊಳ್ಳುತ್ತಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಈ ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಧಾರಾವಾಹಿ ಜೊತೆಗೆ ದೀಪಿಕಾ ಸಿನಿಮಾದಲ್ಲೂ ಮಿಂಚಿದ್ದಾರೆ.

ಸದ್ಯ ದೀಪಿಕಾ ಸೇವಂತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ದೀಪಿಕಾ ತೆಲುಗು ಪ್ರೇಕ್ಷಕರನ್ನು ರಂಜಿಸಲಿ, ದೊಡ್ಡ ಮಟ್ಟದ ಖ್ಯಾತಿಗಳಿಸಲಿ ಎನ್ನುವುದು ಕನ್ನಡ ಅಭಿಮಾನಿಗಳ ಆಶಯ.

English summary
Kannada serial Actress Dhanya Deepika enters to Telugu Serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X