ಬೆಟ್ಟಗಳ ನಡುವೆ ಪ್ರಕೃತಿ ಸೊಬಗಿನಲ್ಲಿ ಕಳೆದು ಹೋದ ನಾಗಿಣಿ ನಟಿ ದೀಪಿಕಾ ದಾಸ್!

By Poorva

ನಾಗಿಣಿ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ನಟಿ ದೀಪಿಕಾ ದಾಸ್. ದೀಪಿಕಾ ದಾಸ್ ಮೊಟ್ಟ ಮೊದಲು ಕನ್ನಡ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದು ನಾಗಿಣಿ ಧಾರಾವಾಹಿಗೆ. ಈ ಧಾರಾವಾಹಿ ನೋಡಿದ ಸಾಕಷ್ಟು ಅಭಿಮಾನಿಗಳಿಗೆ ದೀಪಿಕಾ ಅಭಿನಯ ಬಹಳ ಅಚ್ಚುಮೆಚ್ಚು ಆಗಿತ್ತು. ಈ ಧಾರಾವಾಹಿ ಮಾಡಿದ ಬಳಿಕ ದೀಪಿಕಾ ದಾಸ್ ನಾಗಿಣಿ ಎಂದೇ ಸಖತ್ ಫೇಮಸ್ ಆಗಿದ್ದರು.

ನೋಡಲು ಬಹಳ ಸುಂದರಿಯಾಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇದ್ದಾರೆ. ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ. ಮೊದಲು ದೀಪಿಕಾ ಸಿನಿ ಜಗತ್ತಿಗೆ ಕಾಲಿಟ್ಟಿದ್ದು ಸ್ಯಾಮುವೆಲ್ ಟೋನಿ ನಿರ್ದೇಶನದ 'ದೂದ್‌ಸಾಗರ್' ಚಿತ್ರದ ಮೂಲಕ. ನಂತರ ತೆಲುಗಿ 'ಈ ಮನಸೇ' ಚಿತ್ರದಲ್ಲಿ ನಟಿಸಿ, 2017 ರಲ್ಲಿ ತೆರೆಕಂಡ 'ಡ್ರೀಮ್ ಗರ್ಲ್' ಚಿತ್ರದಲ್ಲಿ ಕೂಡ ನಾಯಕಿಯಾಗಿ ನಟಿಸಿದರು.

Kannada serial actress, former bigg boss contestant Deepika das in wayanad vacation

ಆ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ನಟಿಯ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಧಾರಾವಾಹಿಯಲ್ಲಿ ಸುಮಾರು 800 ಸಂಚಿಕೆಯನ್ನು ಪೂರೈಸಿದೆ. ದೀಪಿಕಾ ಬಿಗ್ ಬಾಸ್ ನಲ್ಲಿ ಕೂಡ ತನ್ನದೇ ಹವಾವನ್ನು ಸೃಷ್ಟಿ ಮಾಡಿಕೊಂಡಿದ್ದರು. ಹಾಗೆಯೇ ದೀಪಿಕಾ ಟ್ರಾವೆಲಿಂಗ್‌ನಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಇದೀಗ ದೀಪಿಕಾ ಅವರು ಬೆಟ್ಟಗಳ ಮಧ್ಯೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕೇರಳದ ವೈಯಿನಾಡಿನಲ್ಲಿ ದೀಪಿಕಾ ದಾಸ್

ದೀಪಿಕಾ ದಾಸ್ ಕೇರಳದ ವಯಿನಾಡ್‌ನಲ್ಲಿ ಇರುವ ವೈಲ್ಡ್ ಪ್ಲಾನೆಟ್ ಬನಾ ಹೈಟ್ ರೆಸಾರ್ಟ್‌ಗೆ ಹೋಗಿದ್ದಾರೆ. ಈ ಪ್ರದೇಶ ಸಮುದ್ರ ಮಟ್ಟದಿಂದ 5,500 ಅಡಿ ಎತ್ತರದಲ್ಲಿ ಇರುವ ಮಂಗಳಸ್ಸೇರಿ ಬೆಟ್ಟದಲ್ಲಿ ಇದೆ. ನಿತ್ಯ ಹರಿದ್ವರ್ಣ ಕಾಡುಗಳು ಸುತ್ತುವರೆದ ಈ ರೆಸಾರ್ಟ್ ನೋಡಲು ಎರಡು ಕಣ್ಣು ಸಾಲದು. ದೀಪಿಕಾ ದಾಸ್ ಇದೀಗ ಇಲ್ಲಿಗೆ ಭೇಟಿ ನೀಡಿ ಟ್ರಕ್ಕಿಂಗ್ ಮಾಡಿ ಖುಷಿ ಪಟ್ಟಿದ್ದಾರೆ.

ಪ್ರಕೃತಿಯ ರಮಣೀಯ ದೃಶ್ಯವನ್ನು ಎಂಜಾಯ್ ಮಾಡುತ್ತಿರುವ ದೀಪಿಕಾ

ಹಾಗೆಯೇ ಹಲವಾರು ಫೋಟೋಗಳನ್ನು ತೆಗೆದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ದೀಪಿಕಾ ದಾಸ್ ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿ "ಟ್ರಾವೆಲಿಂಗ್ ಇಟ್ಸ್ ನಾಟ್ ಹಾಬಿ, ಇಟ್ಸ್ ಮೈ ಜಾಬ್" ಎಂದು ಬರೆದುಕೊಂಡು ಇದ್ದಾರೆ. ಈ ಫೋಟೋಗೆ ಇದೀಗ ಸಾಕಷ್ಟು ಲೈಕ್ ಕಾಮೆಂಟ್‌ಗಳು ಬರುತ್ತಿದೆ. ಕೇರಳದ ವಯನಾಡಿಗೆ ಆಗಮಿಸಿದ ನಾಗಿಣಿ ಖ್ಯಾತಿಯ ದೀಪಿಕಾ ಪ್ರಕೃತಿಯ ರಮಣೀಯ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡುತ್ತ ಕಾಲ ಕಳೆಯುತ್ತಾ ಇದ್ದಾರೆ.

More from Filmibeat

English summary
Kannada serial actress Deepika das in wayanad vacation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X