ಗೌರಿ-ಗಣೇಶ ಹಬ್ಬ ಆಚರಿಸಿದ ಕಿರುತೆರೆ ನಟಿಯರು: ಗೌರಿ ಲುಕ್‌ನಲ್ಲಿ ಮಿಂಚಿದ ಬೆಡಗಿಯರು

By ಪ್ರಿಯಾ ದೊರೆ

ಗೌರಿ-ಗಣೇಶ ಹಬ್ಬ ಬೀದಿ ಬೀದಿಗಳಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಪ್ರತಿಯೊಬ್ಬರ ಮನೆಯಲ್ಲೂ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ, ಕರ್ಚಿಕಾಯಿ ಸವಿದಿದ್ದಾಗಿದೆ.

ಕಿರುತೆರೆ ನಟಿಯರ ಮನೆಗಳಲ್ಲೂ ಗೌರಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಕೆಲವರು ಸಿಂಪಲ್ ಆಗಿ ಹಬ್ಬ ಮಾಡಿದ್ದರೆ, ಮತ್ತು ಕೆಲವರು ಅದ್ಧೂರಿಯಾಗೇ ಆಚರಿಸಿದ್ದಾರೆ. ನಟಿಯರು ಹಬ್ಬದ ಸಂಭ್ರಮವನ್ನು ಡಬಲ್ ಮಾಡಿಕೊಳ್ಳಲು ಮುದ್ದು ಮುದ್ದಾಗಿ, ಸಿಂಗಾರ ಮಾಡಿಕೊಂಡಿದ್ದಾರೆ.

Kannada serial actress Gowri-Ganesha Festival Celebration photos

ಕೆಲವರಂತೂ ಗೌರಿ ಲುಕ್‌ನಲ್ಲಿ ಮಿಂಚಿದ್ದು, ವಿಘ್ನ ನಿವಾರಕನನ್ನು ಕೈಯಲ್ಲಿಡಿದು ಫೋಟೋಶೂಟ್ ಮಾಡಿಸಿದ್ದಾರೆ. ಬನ್ನಿ ಯಾರು ಯಾರ ಮನೆಯಲ್ಲಿ ಹೇಗೆ ಹಬ್ಬವನ್ನು ಆಚರಸಿದ್ದಾರೆ ಎಂದು ನೋಡೋಣ.

ಗೌರಿಯಂತೆ ರೆಡಿಯಾದ ಬೆಡಗಿಯರು

ನಟಿ ಕವಿತಾ ಗೌಡ ಅವರು ಈಗ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗಷ್ಟೇ ಮೆಟರ್ನಿಟಿ ಫೋಟೋಶೂಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಇದೀಗ ಗೌರಿ-ಗಣೇಶ ಹಬ್ಬದ ಸ್ಪೆಷಲ್ ಆಗಿ ಗೌರಿಯಂತೆ ಸಿಂಗಾರ ಮಾಡಿಕೊಂಡಿದ್ದು, ಗಣಪನ ವಿಗ್ರಹವನ್ನು ಮಡಿಲಲ್ಲಿ ಕೂರಿಸಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಕವಿತಾ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಇನ್ನು ನಟಿ ಗೌತಮಿ ಜಾಧವ್ ಕೂಡ ಗೌರಿ ರೀತಿ ಸಿಂಗಾರ ಮಾಡಿಕೊಂಡು ಗಣಪನೊಂದಿಗೆ ಫೋಟೋ ಅಪ್ಲೋಡ್ ಮಾಡಿದ್ದಾರೆ. 'ಬ್ರಹ್ಮಗಂಟು' ಧಾರಾವಾಹಿಯ ನಟಿ ಸನ್ಮಿತಾ ಕೂಡ ರೆಡಿಯಾಗಿ ಗಣಪನೊಂದಿಗೆ ಫೋಟೋ ಶೇರ್ ಮಾಡಿದ್ದಾರೆ.

Kannada serial actress Gowri-Ganesha Festival Celebration photos

ಮನೆಯಲ್ಲಿ ಹಬ್ಬ ಆಚರಿಸಿದ ನಟಿ ಮಣಿಯರು

ಇನ್ನು ನಟಿ ಮೋಕ್ಷಿತಾ ಪೈ ಗಣಪನನ್ನು ಮನೆಗೆ ಕರೆತಂದು ಕಡುಬು, ಕರ್ಜಿಕಾಯಿ ಮಾಡಿ ಗಣೇಶನ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಟಿ ವೈಷ್ಣವಿ ಗೌಡ ಕೂಡ ಮನೆಯಲ್ಲೇ ಇರುವ ಗಣಪನಿಗೆ ಸಿಂಗರಿಸಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ನಟಿ ನಮ್ರತಾ ಗೌಡ ಅವರ ಮನೆಯಲ್ಲಿ ಗೌರಿ-ಗಣೇಶನನ್ನು ಕರೆತಂದು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ. ಇದರ ವೀಡಿಯೋ ಮತ್ತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯ ನಟಿ ಅಶ್ವಿನಿ ಮೂರ್ತಿ ಅವರ ಮನೆಯಲ್ಲೂ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗಿದೆ.

ಕೊಡಗು ಉಡುಗೆಯಲ್ಲಿ ಹಬ್ಬ ಆಚರಣೆ

ನಟಿ ಶ್ವೇತಾ ಚೆಂಗಪ್ಪ ಅವರ ಮನೆಯಲ್ಲಿ ಗೌರಿ-ಗಣೇಶ ಚತುರ್ಥಿ ಅನ್ನು ಅದ್ಧೂರಿಯಾಗಿ ಆಚರಿಸಿದ್ದು, ತಮ್ಮ ಸಂಪ್ರದಾಯದಂತೆ ಕೊಡಗು ಸ್ಟೈಲ್‌ನಲ್ಲಿ ಸೀರೆಯನ್ನು ಧರಿಸಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಎಲ್ಲರಿಗೂ ವಿಶ್ ಮಾಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಗೌರಿ-ಗಣೇಶ ಹಬ್ಬದ ಹಿನ್ನೆಲೆ ಕೊಡಗು ಸ್ಟೈಲ್ ನಲ್ಲಿ ಪಿಂಕ್ ಸೀರೆ ಉಟ್ಟು ಪತಿ ಭುವನ್ ಪೊನ್ನಣ್ಣ ಅವರೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.

ಮಕ್ಕಳೊಂದಿಗೆ ಹಬ್ಬ ಆಚರಣೆ

ನಟಿ ಕಾವ್ಯಾ ಗೌಡ ಅವರು ತಮ್ಮ ಮಗಳೊಂದಿಗೆ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಮುದ್ದು ಮಗಳಿಗೆ ಲಂಗ-ಬ್ಲೌಸ್ ಹಾಕಿಸಿ ಹಬ್ಬದ ಸಂಭ್ರಮವನ್ನು ಡಬಲ್ ಮಾಡಿಕೊಂಡಿದ್ದಾರೆ. ಮಗಳೊಂದಿಗೆ ಮೊದಲ ಬಾರಿಗೆ ನಟಿ ಕಾವ್ಯಾ ಹಬ್ಬ ಆಚರಣೆ ಮಾಡಿದ್ದಾರೆ. ಇನ್ನು ನಿರೂಪಕಿ ಜಾಹ್ನವಿ ಅವರು ತಮ್ಮ ಮಗನಿಗೆ ಗಣಪನ ಮುಖವಾಡ ಹಾಕಿಸಿದ್ದು, ತಾವು ಗೌರಿಯಂತೆ ಸಿಂಗಾರ ಮಾಡಿಕೊಂಡು ಗೌರಿ-ಗಣೇಶ ಹಬ್ಬಕ್ಕೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
Kannada serial actress Gowri-Ganesha Festival Celebration photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X