Gowthami Gowda : ದಸರಾ ಹಬ್ಬದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಗೌತಮಿ ಗೌಡ
ನಟಿ ಗೌತಮಿ ಗೌಡ ಇತ್ತೀಚೆಗೆ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದರು. ಇದೀಗ ಇವರ ಮನೆಗೆ ಪುಟ್ಟ ಲಕ್ಷ್ಮೀಯ ಆಗಮನವಾಗಿದೆ. ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ಅವರಿಗೆ ವಿಜಯ ದಶಮಿಯ ದಿನದಂದು ಹೆಣ್ಣುಮಗು ಜನನವಾಗಿದೆ. ಇದೀಗ ಗೌತಮಿ ಮನೆಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆ.
ಗೌತಮಿ ಗೌಡ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಶ್ರೇಷ್ಠಾ ಪಾತ್ರದಲ್ಲಿ ಕಾಣಿಸಿಕೊಂಡ ಇವರು ಬಹಳ ಅದ್ಭುತವಾಗಿ ನಟನೆ ಮಾಡಿದ್ದರು. ಇನ್ನೂ ಮನೆಗೆ ಲಕ್ಷ್ಮ ಯ ಆಗಮವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ಹೊರಹಾಕಿದ್ದಾರೆ. ನಟಿ ಬೇಬಿ ಬಂಪ್ ಫೋಟೋವಾನ್ನು ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.

ಹಾಗೆಯೇ ತನ್ನ ಸೀಮಂತದ ದಿನದಂದೇ ತನ್ನ ಗಂಡನ ಫೋಟೋವನ್ನು ಆಭಿಮಾನಿಗಳಿಗೆ ಮೊದಲ ಬಾರಿಗೆ ತೋರಿಸಿದ್ದರು. ನಟಿಯ ಪತಿ ಜಾರ್ಜ್ ಅವರ ಕೈಯಲ್ಲಿ ಹೆಣ್ಣು ಮಗುವಿನ ಆಗಮನ ಎನ್ನುವ ಫಲಕವಿದ್ದು, ಅದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ನಮ್ಮ ಸಂತೋಷವನ್ನ ಹೆಚ್ಚಿಸಲು ಪುಟಾಣಿ ಬರುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ನಟಿ ಗೌತಮಿ ಗೌಡ ಬರೆದುಕೊಂಡಿದ್ದರು.
ವಿಜಯದಶಮಿಯಂದು ಶುಭ ಸುದ್ದಿ ನೀಡಿದ ನಟಿ
ವಿಜಯ ದಶಮಿಯ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಗೌತಮಿ ಗೌಡ. ಗೌತಮಿ ಗೌಡ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ ಹಲವು ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. 'ಮಳೆ', 'ಜೆಸ್ಸಿ', 'ಅಂಬಿ ನಿಂಗ್ ವಯಸ್ಸಾಯ್ತೋ' ಮುಂತಾದ ಸಿನಿಮಾಗಳಲ್ಲಿಯೂ ನಟಿ ಗೌತಮಿ ಗೌಡ ಅಭಿನಯ ಮಾಡಿದ್ದಾರೆ. ಚಿ ಸೌ ಸಾವಿತ್ರಿ, ತಾಯವ್ವ, ಚೆಲುವಿ, ಚಲಿಸುವ ಮೋಡಗಳು ಮುಂತಾದ ಧಾರಾವಾಹಿಯಲ್ಲಿ ನಟನೆಯನ್ನು ಮಾಡಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಈ ನಟಿ.

ಹಲವು ಧಾರಾವಾಹಿಗಳಲ್ಲಿ ನಟನೆ
2018ರ ಆಗಸ್ಟ್ 17 ರಂದು ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ಗೌತಮಿ ಗೌಡ - ಜಾರ್ಜ್ ಕ್ರಿಸ್ಟಿ ವಿವಾಹ ಜರುಗಿತ್ತು. ಗೌತಮಿ ಗೌಡ ಅವರಿಗೆ ಚಿ ಸೌ ಸಾವಿತ್ರಿ ಧಾರಾವಾಹಿ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದರು. ಕುಣಿಯೋಣು ಬಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ಈಕೆ ಭಾಗವಹಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು.


Click it and Unblock the Notifications











