ದುಬೈನಲ್ಲಿ ಎಂಜಾಯ್ ಮಾಡುತ್ತಿರುವ ಚಂದನವನದ ಕ್ಯೂಟ್ ಕಪಲ್

By Poorva

ಕಿರುತೆರೆ, ಹಿರಿತೆರೆಯಲ್ಲಿ ಕೆಲಸ ಮಾಡಿರುವ ಕವಿತಾ ಗೌಡ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕಿರುತೆರೆ ಕಾಲಿಟ್ಟ ಬೆಡಗಿ. ಇನ್ನೂ ನಟ ಚಂದನ್ ಕುಮಾರ್‌ಗೆ ಬಹಳ ಹೆಸರು ತಂದು ಕೊಟ್ಟ ಧಾರವಾಹಿ ಅಂದರೆ ಲಕ್ಷ್ಮೀ ಬಾರಮ್ಮ. ಬಹಳ ಸೊಗಸಾಗಿ ಮೂಡಿ ಬರುತ್ತಿದ್ದ ಧಾರವಾಹಿ ನೋಡುಗರಿಗೆ ಬಹಳ ಖುಷಿ ನೀಡಿತ್ತು.

ಲಕ್ಷ್ಮೀ ಬಾರಮ್ಮ ನೋಡುತ್ತಿದ್ದ ವೀಕ್ಷಕರು ಚಂದನ್ ಹಾಗೂ ಕವಿತಾ ಇಬ್ಬರು ರಿಯಲ್ ಲೈಫ್‌ಲ್ಲಿ ಜೋಡಿ ಆಗಬಾರದಾಗಿತ್ತತ್ತಾ ಎಂದು ಆಗಾಗ ಅಂದುಕೊಲ್ಳುತ್ತಿದ್ದರು. ಇದರ ಬೆನ್ನಲ್ಲೇ ಈ ಸೀರಿಯಲ್‌ನ ಈ ಜೋಡಿ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ರೀಲ್ ಜೋಡಿ ಕವಿತಾ ಹಾಗೂ ಚಂದನ್ ರಿಯಲ್ ಲೈಫ್‌ನಲ್ಲಿಯೂ ಮದುವೆಯಾದರು.

actress-kavita-gowda-family-dubai-trip

ಈ ಮುದ್ದಾದ ಜೋಡಿ ವಿವಾಹವಾಗಿ ಬಹಳ ಅನ್ಯೋನ್ಯತೆಯಿಂದ ಮಾದರಿಯಾಗುವಂತೆ ಬದುಕುತ್ತಾ ಇದ್ದಾರೆ.. ಚಂದನ್ ಕೂಡ ಬಹಳ ಉತ್ತಮ ನಟ.. ಕಿರುತೆರೆಯಿಂದ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದರು. ಕನ್ನಡವಲ್ಲದೇ ಇತರ ಭಾಷೆಗಳಲ್ಲಿಯೂ ನಟಿಸಿದ್ದರು. ಕವಿತಾ ಹಾಗೂ ಚಂದನ್ ಚಂದನ ವನದ ಕ್ಯೂಟೆಸ್ಟ್ ಕಪಾಲ್ ಎಂದರೆ ತಪ್ಪಾಗದು.

ಸದ್ಯ ಚಂದನವನದಲ್ಲಿ ಈ ಜೋಡಿಯದ್ದೇ ಮಾತಾಗಿದೆ. ಇದೀಗ ಚಂದನ್ ಹಾಗೂ ಕವಿತಾ ಗೌಡ ಫ್ಯಾಮಿಲಿ ಸಮೇತರಾಗಿ ದುಬೈ ಟ್ರಿಪ್ ಗೆ ಹೋಗಿದ್ದಾರೆ. ಕವಿತಾ ಗೌಡ ಅವರ ಹುಟ್ಟು ಹಬ್ಬವನ್ನು ಕೂಡ ದುಬೈನಲ್ಲಿ ಆಚರಣೆ ಮಾಡಿದ್ದಾರೆ. ಹಾಗೆಯೇ ಕವಿತಾ ಈ ಬಾರಿಯ ಬರ್ತ್​ ಡೇ ಸೆಲಬ್ರೇಷನ್​ನ ಕುಟುಂಬದ ಜೊತೆ ದುಬೈಯಲ್ಲಿ ಆಚರಿಸಿಕೊಂಡಿದ್ದಾರೆ. ಇದರಿಂದ ಇಡೀ ಫ್ಯಾಮಿಲಿ ಜಾಲಿ ಮೂಡ್‌ನಲ್ಲಿ ಇದೆ.

ಫ್ಯಾಮಿಲಿ ಜೊತೆ ದುಬೈಗೆ ಹಾರಿದ ನಟಿ

ನಟನಾ ಪ್ರಯಾಣದಿಂದ ಕೊಂಚ ಮಟ್ಟಿಗೆ ಗ್ಯಾಪ್ ತೆಗೆದು ಕೊಂಡಿರುವ ಈ ಜೋಡಿ.. ತಮ್ಮ ಫ್ಯಾಮಿಲಿ ಜೊತೆ ಕಾಲ ಕಳೆಯಲು ದೂರದ ವಿದೇಶಕ್ಕೆ ತೆರಳಿದ್ದಾರೆ. ಚಂದನ್ ಹಾಗೂ ಕವಿತಾ ಇವರಿಬ್ಬರೂ ನಟನ ಲೋಕದಲ್ಲಿ ಅಷ್ಟೇ ಅಲ್ಲದೆ ತಮ್ಮದೇ ಆದ ಕೆಲವೊಂದು ಬ್ಯುಸಿನೆಸ್ ಕೂಡ ಮಾಡುತ್ತಾ ಇದ್ದಾರೆ.. ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‌ನಲ್ಲಿರುವ ಇವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಫೋಟೋಗಳನ್ನು ಕ್ಲಿಕ್ಕಿಸಿ ಖುಷಿ ಪಟ್ಟ ನಟಿ

ನಟಿ ಕವಿತಾ ಗೌಡ ಫೋಟೋಗಳನ್ನು ಕ್ಲಿಕ್ಕಿಸಿ ಬಹಳ ಖುಷಿ ಪಡುತ್ತಾ ಇರುತ್ತಾರೆ. ಇದೀಗ ಇವರಿಬ್ಬರೂ ಟ್ರಿಪ್‌ನಲ್ಲಿ ಸಖತ್ ಆಗಿ ಎಂಜಾಯ್ ಮಾಡುತ್ತ ಇದ್ದಾರೆ. ಇವರಿಬ್ಬರನ್ನು ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಇನ್ನೂ ದುಬೈನಲ್ಲಿ ಕ್ಲಿಕ್ಕಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಲೈಕ್ ಕೊಡುತ್ತಾ, ಕಾಮೆಂಟ್ ಮಾಡುತ್ತಾ ಇದ್ದಾರೆ.

ದುಬೈ ಟ್ರಿಪ್ ಎಂಜಾಯ್ ಮಾಡುತ್ತಿರುವ ಜೋಡಿ

ಕವಿತಾ ಗೌಡ ಶೇರ್ ಮಾಡಿರುವ ಫೋಟೋಗಳಲ್ಲಿ ಚಂದನ್ ಕೂಡ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಹೆಂಡತಿಯ ಖುಷಿಗಾಗಿ ದುಬೈ ಟ್ರಿಪ್ ಆಯೋಜನೆ ಮಾಡಿ ಹೆಂಡತಿಯ ಹುಟ್ಟು ಹಬ್ಬವನ್ನು ಅಷ್ಟೇ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರ ಫ್ಯಾಮಿಲಿ ಖುಷಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

More from Filmibeat

English summary
Kannada serial actress kavita gowda family dubai trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X