ಕವಿತಾ ಗೌಡ: ಮೊನ್ನೆ ಮೊನ್ನೆ ಚೆನ್ನಾಗಿದ್ದ ಚಿನ್ನು ಮುಖ ಹೀಗ್ಯಾಕೆ ಆಯ್ತು?
ಚಿನ್ನು ಅಲಿಯಾಸ್ ಕವಿತಾ ಗೌಡ ಅವರ ಈ ಫೋಟೊ ನೋಡಿ ಖಂಡಿತಾ ನಿಮಗೆಲ್ಲಾ ಶಾಕ್ ಆಗಿರುತ್ತೆ ಅಲ್ಲವಾ. ಇತ್ತೀಚೆಗೆಷ್ಟೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಎರಡನೇ ಚಿನ್ನು ರಶ್ಮಿ ಪ್ರಭಾಕರ್ ಮದುವೆಗೆ ಬೇರೆ ಹೋಗಿ ಬಂದಿದ್ದರು. ಅಂದವಾಗಿ ರೆಡಿಯಾಗಿದ್ದರು. ಗುಲಾಬಿ ಬಣ್ಣದ ಸೀರೆಯುಟ್ಟು, ದೊಡ್ಡ ಜ್ಯುವೆಲ್ಲರಿ ಹಾಕಿ, ಮುದ್ದು ಮುದ್ದಾಗಿ ರೆಡಿಯಾಗಿ, ಗಂಡ ಹೆಂಡತಿ ಖುಷಿಯಾಗಿ ಮದುವೆ ಅಟೆಂಡ್ ಮಾಡಿದ್ದರು. ಈ ಕ್ಯೂಟ್ ಕಪಲ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೇನಾದ್ರೂ ದೃಷ್ಟಿಯಾಗಿ ಚಿನ್ನುಗೆ ಈ ರೀತಿ ಆಗಿ ಬಿಟ್ಟಿದೆಯಾ ಅಂತ ಯೋಚನೆ ಮಾಡುತ್ತಿದ್ದೀರಾ?
ರಶ್ಮಿ ಪ್ರಭಾಕರ್ ಮದುವೆಯಲ್ಲಿ ಕವಿತಾ ಹಾಗೂ ಚಂದನ್ ಮುದ್ದು ಮುದ್ದಾಗಿ ಕಾಣುತ್ತಿದ್ದರು. ಅದಕ್ಕೆ ಉದಾಹರಣೆ ಅವರ ಫೋಟೊಗೆ ಬಂದಿರುವ ಕಮೆಂಟ್‌ಗಳೇ ಸಾಕ್ಷಿ. ದೃಷ್ಟಿ ಆಗಿದ್ದರು ಆಗಿರಬಹುದು. ಆದರೆ ಈಗ ತೋರಿಸುತ್ತಿರುವ ಫೋಟೊಗೂ ದೃಷ್ಟಿ ಆಗಿರಬಹುದು ಎಂಬುದಕ್ಕೂ ಲಿಂಕ್ ಇಲ್ಲ. ಅದೆಲ್ಲ ಮುಂದೆ ಓದಿದರೆ ನಿಮಗೆ ಇಂಟ್ರೆಸ್ಟಿಂಗ್ ಕಹಾನಿ ತಿಳಿಯುತ್ತೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಅದ್ಯಾವಾಗ ಚಿನ್ನು ಎಂಬ ಪಾತ್ರಧಾರಿಯಾಗಿ ಎಂಟ್ರಿಯಾದರೋ ಅಂದಿನಿಂದ ಇಲ್ಲಿಯವರೆಗೂ ಕವಿತಾ ಗೌಡ ಎನ್ನುವುದಕ್ಕಿಂತ ಚಿನ್ನು ಎಂದೇ ಕರೆಯುತ್ತಾರೆ. ಕೊನೆ ಕೊನೆಯ ಎಪಿಸೋಡಿನಿಂದ ಕವಿತಾ ಗೌಡ ದೂರಾಗಿದ್ದರು. ಆ ಬಳಿಕ ಕವಿತಾ ಅವರನ್ನೇ ಹೋಲುವಂತ ರಶ್ಮಿಯನ್ನು ಧಾರಾವಾಹಿ ತಂಡ ಕರೆದುಕೊಂಡು ಬಂದಿತ್ತು. ರಶ್ಮಿಗೂ ಚಿನ್ನು ಎಂಬ ಹೆಸರೇ ಮುಂದುವರೆದರೂ ಕವಿತಾರಿಗೆ ಮಾತ್ರ ಚಿನ್ನು ಎಂಬುದೇ ಫೇಮಸ್ ಆಗಿ ಹೋಯಿತು. ಇದೀಗ ಕಿರುತೆರೆಯಿಂದ ಕೊಂಚ ದೂರವೇ ಉಳಿದಿರುವ ಚಿನ್ನು 'ದ್ವಿಮುಖ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅದರ ಹೊರತಾಗಿಯೂ ಆಗಾಗ ಧಾರಾವಾಹಿಗಳಲ್ಲಿ ಆಗಾಗ ಗೆಸ್ಟ್ ಆಗಿ ಬಂದು ಹೋಗುತ್ತಾರೆ.

ಕವಿತಾ ಸಿಕ್ಕಾಪಟ್ಟೆ ಸ್ಟೈಲಿಶ್ & ಬಬ್ಲಿ
ನಿಜವಾಗಲೂ ಕವಿತಾ ಮುದ್ದು ಮುದ್ದಾಗಿದ್ದಾರೆ. ಸಾಕಷ್ಟು ಜನರಿಗೆ ಅವರ ಸ್ಮೈಲ್ ಎಂದರೆ ಸಿಕ್ಕಾಪಟ್ಟೆ ಇಷ್ಟ. ಅವರ ನಗುವಿಗಾಗಿಯೇ ಕಾಯುತ್ತಿರುತ್ತಾರೆ. ಇನ್ನು ಅವರ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟು ನೋಡಿದರೆ ಅವರ ಜೀವನ ಶೈಲಿ ಎಷ್ಟು ಶೈನ್ ಆಗಿದೆ ಎಂಬುದು ಗೊತ್ತಾಗುತ್ತದೆ. ಅವರ ಫೋಟೊಗಳಿಗೂ ಅಭಿಮಾನಿಗಳು ಸೋ ಬ್ಯೂಟಿಫುಲ್, ಕ್ಯೂಟ್ ಅಂತೆಲ್ಲಾ ಹಾಕಿರುವ ಕಮೆಂಟ್‌ಗಳೇ ಕಾಣಿಸುತ್ತವೆ. ಅಷ್ಟೇ ಅಲ್ಲ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

ನಾಯಿ ಕಂಡರೆ ಚಿನ್ನುಗೆ ಸಿಕ್ಕಾಪಟ್ಟೆ ಇಷ್ಟ
ಈಗಾಗಲೇ ನಮ್ಮಲ್ಲಿಯೇ ಈ ಸೆಲೆಬ್ರೆಟಿಗಳ ಶ್ವಾನದ ಪ್ರೀತಿ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಯಾವುದೇ ನಟ ನಟಿಯರ ಜೀವನ ಶೈಲಿ ತೆಗೆದುಕೊಂಡರು ಸಹ ಅವರಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಪ್ರಾಣಿ ಪ್ರಿಯರೇ ಆಗಿರುತ್ತಾರೆ. ಅದರಂತೆ ಚಿನ್ನು ಅಲಿಯಾಸ್ ಕವಿತಾ ಗೌಡ ಅವರಿಗೂ ಶ್ವಾನಗಳು ಎಂದರೆ ಬಲು ಪ್ರೀತಿ. ತಮ್ಮಿಷ್ಟದ ನಾಯಿಗಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸರ್ಕಾರಿ ಶಾಲೆ ಅಭಿಯಾನದಲ್ಲಿ ಕವಿತಾ ಭಾಗಿ
ಖಾಸಗಿ ಶಾಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಹೆಚ್ಚಾಗಿದೆ. ಇದರಿಂದ ಈಗಾಗಲೇ ಸಾಕಷ್ಟು ಸರ್ಕಾರಿ ಶಾಲೆಗಳು ಮಕ್ಕಳ ಸಂಖ್ಯೆಯಿಲ್ಲದೆ ಮುಚ್ಚಿಕೊಂಡು ಹೋಗಿದೆ. ಕೊರೊನಾ ಕಾಣಿಸಿಕೊಳ್ಳುವುದಕ್ಕೂ ಮುನ್ನ ಹಲವು ಸಂಘಟನೆಗಳು ಸರ್ಕಾರಿ ಶಾಲೆ ಉಳಿಸುವ ಅಭಿಯಾನ ಕೈಗೊಂಡಿದ್ದರು. ಆ ಅಭಿಯಾನದಲ್ಲಿ ಕವಿತಾ ಕೂಡ ಕೈ ಜೋಡಿಸಿದ್ದರು. ಮಂಡ್ಯದ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಬಣ್ಣ ಬಳಿಯುವ ಮೂಲಕ ಬೆಂಬಲ ನೀಡಿದ್ದರು.

ಸ್ನೇಹಿತರ ಜೊತೆ ಸಿಕ್ಕಾಪಟ್ಟೆ ಮಸ್ತಿ
ಸಿನಿಮಾ, ಸೀರಿಯಲ್ ಅಂತ ಬ್ಯುಸಿ ಇರುವ ಮಂದಿಗೆ ಗ್ಯಾಪ್ ಸಿಕ್ಕಿದರೆ ಸಾಕು ಕೊಂಚ ಮಾನಸಿಕ ವಿಶ್ರಾಂತಿ ಬೇಕು ಎಂಬಂತಾಗಿರುತ್ತದೆ. ಆ ವಿಶ್ರಾಂತಿ ಪಡೆಯುತ್ತಿದ್ದಿದ್ದು, ಟ್ರಿಪ್ ಮೂಲಕ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಬಂದ ಮೇಲಂತೂ ಈಡೀ ಟೀಂ ತುಂಬಾ ಬಾಂಡಿಂಗ್‌ನಲ್ಲಿದ್ದರು. ಎಲ್ಲಾದರೂ ಟ್ರಿಪ್ ಹೊರಟರೆ ಇಡೀ ಟೀಂ ಹೋಗುತ್ತಿತ್ತು. ಅದರಲ್ಲಿ ಹೆಚ್ಚು ಟ್ರೆಕ್ಕಿಂಗ್‌ಗಾಗಿಯೇ ವಿಹರಿಸಿದ್ದಾರೆ. 'ವಿದ್ಯಾ ವಿನಾಯಕ' ಧಾರಾವಾಹಿ ಶುರುವಾದ ಮೇಲೆ ಆ ಟೀಂನವರು ಕೂಡ ಸೇರಿಕೊಂಡು ಒಳ್ಳೆ ಟ್ರಿಪ್ ಎಂಜಾಯ್ ಮಾಡುತ್ತಿದ್ದರು.
ರೀಲ್ಸ್ ಎಫೆಕ್ಟ್‌ನಲ್ಲಿ ಮುಖ ಊದಿಸಿಕೊಂಡಂತೆ ಕಂಡ ಕವಿತಾ
ರೀಲ್ಸ್ ಮಾಡುವುದು ಈಗ ಎಲ್ಲರಿಗೂ ಕ್ರೇಜ್ ಆಗಿದೆ. ಆದರೂ ಇಂತಿಷ್ಟು ವರ್ಗ ಅಂತೇನೂ ಇಲ್ಲ. ಕ್ರೇಜ್ ಇರುವವರೆಲ್ಲಾ ಗ್ಯಾಪ್ ಸಿಕ್ಕಾಗ ಮಾಡುವುದೇ ಈ ರೀಲ್ಸ್. ಬೇಡಿಕೆ ಹೆಚ್ಚಾದಷ್ಟು ರೀಲ್ಸ್ ನಲ್ಲೂ ಅಪ್ಡೇಟ್ ಹೆಚ್ಚಾಗಿದೆ. ಮನರಂಜನೆ ನೀಡುವಂತೆ ಎಫೆಕಕ್ಟ್‌ಗಳು ಕಾಣ ಸಿಗುತ್ತವೆ. ಅಂತಹದ್ದೇ ಒಂದು ಎಫೆಕ್ಟ್ ಬಳಸಿ ಚಿನ್ನು ಮುಖ ಊದಿದವರಂತೆ ಕಂಡಿದ್ದಾರೆ. ಇದು ತಮಾಷೆಗೆ ಅಂತಾನೆ ಗೊತ್ತು. ನೀವೂ ಕೊಂಚ ಶಾಕ್ ಆಗಿರುತ್ತೀರಾ ಅಲ್ವಾ ಈ ಫೋಟೊ ನೋಡಿ. ಆದರೆ ಅವರ ತುಂಟಾಟದಲ್ಲಿ ಈ ಫೋಟೊ ಸೆರೆಯಾಗಿದೆ.


Click it and Unblock the Notifications











