ರೇಷ್ಮೆ ಸೀರೆಯುಟ್ಟು ಮಿಂಚಿದ 'ಜಂಗ್ಲಿ ರಾಣಿ': ಮತ್ತೆ ಕಿರುತೆರೆಯತ್ತ ಮುಖ ಮಾಡೋದ್ಯಾವಾಗ ಕಾವ್ಯಾ ಗೌಡ?

By ಪೂರ್ವ

'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋ ಮೂಲಕ ಬಂದು ಜಂಗ್ಲಿ ರಾಣಿ ಜನಪ್ರಿಯರಾದ ಕಾವ್ಯಾ ಗೌಡ ಎಲ್ಲರ ಮನೆ ಮಾತಾಗಿದ್ದರು. ಆ ಮಟ್ಟಿಗೆ ಉಳಿದ ಸ್ಪರ್ಧಿಗಳಿಗೆ ಪೈಪೋಟಿ ನೀಡಿದ್ದ ನಟಿಯಿವರು. ಈ ರಿಯಾಲಿಟಿ ಶೋ ಬಳಿಕ ಕಿರುತೆರೆಯಲ್ಲಿ ಸಖತ್ ಆಗಿಯೇ ಮಿಂಚಿದ್ದರು.

ಅಂದ್ಹಾಗೆ ಕಾವ್ಯಾ ಗೌಡ ಮೂಲತಃ ಬೆಂಗಳೂರಿನವರೇ. ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲಿ ಮುಗಿಸಿ, ಬಳಿಕ ಕ್ರೀಡೆಯ ಕಡೆ ಗಮನ ಹರಿಸುತ್ತಾರೆ. ಕಾವ್ಯಾ ಗೌಡ ಉತ್ತಮ ರನ್ನರ್. ಆದರೆ ಅವರ ಕಾಲಿಗೆ ಪೆಟ್ಟಾದ ಬಳಿಕ ಮಾಡೆಲಿಂಗ್‌ ಕಡೆಗೆ ಮುಖ ಮಾಡಿದ್ದರು. ಆನಂತರ ಜಾಹೀರಾತುಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು.

Kannada serial actress Kavya Gowda Photo with traditional Saree goes viral

ಮಾಡಲಿಂಗ್, ಜಾಹೀರಾತು ಅಂತ ಬ್ಯುಸಿಯಾಗಿದ್ದ ಕಾವ್ಯಾ ಗೌಡ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಶುಭ ವಿವಾಹ' ಇವರ ಮೊದಲ ಧಾರಾವಾಹಿ. ಇದರ ಮೂಲಕವೇ ಜನಪ್ರಿಯರಾದರು. ಇಲ್ಲಿಂದ ಕಿರುತೆರೆಯಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

ಕನ್ನಡ ಕಿರುತೆರೆಯಲ್ಲಿ ಕಾವ್ಯಾ ಕಮಾಲ್

'ಶುಭ ವಿವಾಹ'ದಿಂದ ಜನಪ್ರಿಯರಾಗುತ್ತಿದ್ದಂತೆ 'ಮೀರಾ ಮಾಧವ' ಎನ್ನುವ ಮತ್ತೊಂದು ಧಾರಾವಾಹಿಯಲ್ಲಿ ನಟಿಸಿದ್ದರು. ಆ ಧಾರಾವಾಹಿ ಕೂಡ ಕಮಾಲ್ ಮಾಡಿತ್ತು. ಈ ಸೀರಿಯಲ್‌ನಲ್ಲಿ ಮೀರಾ ಅನ್ನೋ ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರದಿಂದ ಕಿರುತೆರೆ ವೀಕ್ಷಕರನ್ನು ಸೆಳೆದುಬಿಟ್ಟಿದ್ದರು.

'ವೀರಾ' ಪಾತ್ರ ಕಾವ್ಯಾ ಗೌಡಗೆ ಒಳ್ಳೊಳ್ಳೆ ಅವಕಾಶಗಳನ್ನು ತಂದುಕೊಟ್ಟಿತ್ತು. ಆ ಬಳಿಕ 'ರಾಧ ರಮಣ' ಧಾರಾವಾಹಿಯಲ್ಲಿ ನಟಿಸಿದ್ದರು. ಅದೂ ಕೂಡ ಜನಪ್ರಿಯ ಧಾರಾವಾಹಿ ಎನಿಸಿಕೊಂಡಿತ್ತು. ಹಾಗೇ 'ಗಾಂಧಾರಿ' ಧಾರಾವಾಹಿಯ ಮೂಲಕ ಎಲ್ಲರ ಕಾವ್ಯಾ ಗೌಡ ಎಲ್ಲರ ಮನೆ ಮಾತಾಗಿದ್ದರು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ

ಕಿರುತೆರೆಯಲ್ಲಿ ಹೆಸರು ಗಳಿಸುತ್ತಿದ್ದಂತೆ ಸಿನಿಮಾ ಕಡೆ ಮುಖ ಮಾಡಿದ್ದರು. 'ಬಕಾಸುರ' ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಸಿನಿಮಾ ಯಾಕೋ ಇವರ ಕೈ ಹಿಡಿಯಲಿಲ್ಲ. ಇತ್ತೀಚೆಗಷ್ಟೇ ನಟನೆಯಿಂದ ಕೊಂಚ ದೂರ ಉಳಿದಿದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಾವ್ಯಾ ಗೌಡ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸೋಮಶೇಖರ್ ಅವರನ್ನೂ ವಿವಾಹವಾಗಿದ್ದಾರೆ. ಮದುವೆಗೆ ಮುನ್ನ ದುಬೈನಲ್ಲಿ ಅದ್ದೂರಿಯಾಗಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿ ಗಮನ ಸೆಳೆದಿದ್ದರು. ಆದರೆ ಇದೀಗ ಮತ್ತೊಮ್ಮೆ ಕಾವ್ಯ ಗೌಡ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

More from Filmibeat

English summary
Kannada serial actress Kavya Gowda Photo with traditional Saree goes viral, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X