ಬಣ್ಣ ಬಣ್ಣದ ಕಾಸ್ಟ್ಯೂಮ್‌ನಲ್ಲಿ ವೀಕ್ಷಕರ ಮನಗೆದ್ದ ಕಾವ್ಯಾ ಮಹಾದೇವ್; ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ
'ನಮ್ಮನೆ ಯುವರಾಣಿ' ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ನಟಿ ಕಾವ್ಯಾ ಮಹಾದೇವ್. ಈ ನಟಿ ಕಿರುತೆರೆಯಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾವ್ಯಾ ಮಹಾದೇವ್ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿ, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಆದರೆ, ಈ ಧಾರಾವಾಹಿ ಮುಗಿದ ಮೇಲೆ ಕಾವ್ಯಾ ಮಹಾದೇವ್ ಅವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಇನ್ನು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿಯೂ ಇವರು ಭಾಗವಹಿಸಿದ್ದರು. ಈ ಮೂಲಕ ವೀಕ್ಷಕರ ಮನಸ್ಸನ್ನೂ ಗೆದ್ದಿದ್ದರು. ಪತಿ ಕುಮಾರ್ ಜೊತೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕಾವ್ಯಾ ಮಹಾದೇವ್ ಬಹಳ ಅದ್ಭುತವಾಗಿ ಡ್ಯಾನ್ಸ್ ಮಾಡಿ ಕಿರುತೆರೆ ವೀಕ್ಷಕರ ಮನಸ್ಸನ್ನೂ ಕದ್ದಿದ್ದರು. ಆ ಸೀಸನ್ ವಿನ್ನರ್ ಆಗಿ ಕಿರೀಟವನ್ನು ಸಹ ಮುಡಿಗೇರಿಸಿಕೊಂಡಿದ್ದರು.

ಇದಾದ ಬಳಿಕ ಕಾವ್ಯಾ ಮಹಾದೇವ್ ವೈಯಕ್ತಿಕ ಜೀವನದಲ್ಲಿ ಹೆಚ್ಚಾಗಿ ಬ್ಯುಸಿ ಆಗಿ ಬಿಟ್ಟಿದ್ದರು. ಅಷ್ಟಾಗಿ ಯಾರ ಕಣ್ಣಿಗೆ ಬಿದ್ದಿರಲಿಲ್ಲ. ಕಾವ್ಯಾ ಮಹಾದೇವ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾವ್ಯಾ ಮಹಾದೇವ್ ಅವರ ಫೋಟೋಗಳು ವೈರಲ್ ಆಗುತ್ತಿವೆ. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಬಹಳ ಖುಷಿ ಆಗಿದ್ದಾರೆ. ಸದ್ಯ ನಟಿಯ ನಟನೆಯಿಂದ ಕೊಂಚ ಮಟ್ಟಿಗೆ ಅಂತರ ಕಾಯ್ದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ನಟಿ ಆಗಿದ್ದಾರೆ. ಆದರೆ, ಸೀರಿಯಲ್‌ನಲ್ಲಿ ಅಭಿನಯ ಮಾಡದೇ ಇರುವುದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ಚೆಂದುಳ್ಳಿ ಚೆಲುವೆ. ಇದೀಗ ಸಖತ್ ಸದ್ದು ಮಾಡುತ್ತಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಲೈಕ್ ಕಾಮೆಂಟ್‌ಗಳನ್ನು ನೀಡಿ ಖುಷಿ ಪಡುತ್ತಿದ್ದಾರೆ. ಹಾಗೆಯೇ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದಾರೆ . ಇನ್ನು ಕಾವ್ಯಾ ಫೋಟೋ ನೋಡಿದ ಅಭಿಮಾನಿಗಳು ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ, ಬ್ಯೂಟಿಫುಲ್, ಸೂಪರ್ ಎಂದೆಲ್ಲ ಬರೆದುಕೊಂಡಿದ್ದಾರೆ. ಇನ್ನು ಕಾವ್ಯಾ ಅವರ ಕಾಸ್ಟ್ಯೂಮ್ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ.
ಕಾವ್ಯಾ ಮಹಾದೇವ್ ಕಲರ್ ಫುಲ್ ಲೆಹೆಂಗಾ ಧರಿಸಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಲೆಹಂಗಾಗೆ ಮ್ಯಾಚ್ ಆಗುವ ಕಿವಿಯ ಒಲೆಯನ್ನು ಧರಿಸಿದ್ದಾರೆ. ಹಾಗೆಯೇ ತಲೆಗೆ ನೆತ್ತಿ ಬೊಟ್ಟು ಹಾಕಿ ಇನ್ನೂ ಆಕೆಯ ಸೌಂದರ್ಯ ಇಮ್ಮಡಿ ಆಗುವ ಹಾಗೆ ಆಗಿದೆ. ಇನ್ನು ಕಾವ್ಯಾ ಮಹಾದೇವ್ ತನ್ನ ಪ್ರತಿ ಜೊತೆ ಸಾಕಷ್ಟು ಬಾರಿ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.
ಹಾಗೆಯೇ ಕಾವ್ಯಾ ಮಹಾದೇವ್ ಅನೇಕ ಸೀರಿಯಲ್‌ನಲ್ಲಿ ಅಭಿನಯ ಮಾಡಿ ಎಲ್ಲರ ಮನಸನ್ನು ಗೆದ್ದಿದ್ದಾರೆ. 'ಚರಣ ದಾಸಿ', 'ನಾನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಟನೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇನ್ನೂ ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾವ್ಯಾ ಮಹಾದೇವ್ ಅವರು ನಟನೆ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.


Click it and Unblock the Notifications











