ಕನ್ನಡದ ಈ ಕಿರುತೆರೆ ನಟಿಯರ ಬಳಿ ಇರುವ ಐಷಾರಾಮಿ ಕಾರುಗಳ್ಯಾವುವು ಗೊತ್ತಾ?

By ಅನಿತಾ ಬನಾರಿ

ಐಷಾರಾಮಿ ವೆಹಿಕಲ್ ಒಂದಾದರೂ ಪಕ್ಕದಲ್ಲಿರಬೇಕೆಂಬುದು ಎಷ್ಟೋ ಸೆಲೆಬ್ರಿಟಿಗಳ ಕನಸಾಗಿರುತ್ತದೆ. ಇದು ಸಾಕಾರಗೊಳ್ಳಲು ಅವರು ಹಲವು ವರ್ಷಗಳ ಕಾಲ ಕಾಯುವ ಪರಿಸ್ಥಿತಿ ಬರುವುದೂ ಇದೆ. ಹೀಗೆ ಕಿರುತೆರೆಯಲ್ಲಿ ಒಂದು ಹೆಸರು ಸಂಪಾದಿಸಿದ ಬಳಿಕ ಆ ಹೆಸರು ನನಸಾಗಿದ್ದೂ ಇದೆ.

ನಟನೆಯ ಮೂಲಕ, ತಮ್ಮ ಸಾಮರ್ಥ್ಯದ ಮೂಲಕ ಕನಸನ್ನು ಹಲವರು ನನಸಾಗಿಸಿಕೊಂಡಿದ್ದಾರೆ. ಈಗ ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್‌ಗಳ ಮಾಲೀಕರೂ ಆಗಿದ್ದಾರೆ. ಇಂತಹವರಲ್ಲಿ ಕೆಲವರನ್ನು ನಾವೀಗ ನೋಡೋಣ.

Kannada Serial Actress Kiran, Chaitra, Raksh, Shamanth Gowda and othes Luxury cars Details

ಚೈತ್ರಾ ವಾಸುದೇವನ್

ಬಿಗ್ ಬಾಸ್ ಕನ್ನಡ ಸೀಸನ್ 7 ರ ಸ್ಪರ್ಧಿ, ನಟಿ ಹಾಗೂ ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ಈ ಸೆಲೆಬ್ರಿಟಿಗಳ ಗುಂಪಿಗೆ ಇತ್ತೀಚೆಗೆ ಸೇರಿಕೊಂಡವರು. ನಟಿಯಾಗಿ ಸುಮಾರು 72 ಲಕ್ಷ ರೂ ಮೌಲ್ಯದ ಐಷಾರಾಮಿ ಎಸ್‌ಯುವಿಯ ಹೆಮ್ಮೆಯ ಮಾಲಕಿ. "ಇದನ್ನು ಖರೀದಿಸಲು ನಾನು ತುಂಬಾ ಕಾಲದಿಂದ ಹಣ ಉಳಿಸುತ್ತಿದ್ದೆ. ಅಂತಿಮವಾಗಿ ಇದು ನನ್ನ ಕೈ ಸೇರಿದೆ" ಎಂದು ತನ್ನ ಹೊಸ ಕಾರಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುವುದರೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

'ಗಟ್ಟಿಮೇಳ' ರಕ್ಷ್

'ಗಟ್ಟಿಮೇಳ' ಧಾರಾವಾಹಿಯ ನಟ ಮತ್ತು ನಿರ್ಮಾಪಕ ಆಗಿರುವ ರಕ್ಷ್ ಸುಮಾರು 60 ಲಕ್ಷ ರೂ.ಮೌಲ್ಯದ ಐಷಾರಾಮಿ ಕಾರಿನ ಮಾಲೀಕರಾಗಿದ್ದಾರೆ. ರಕ್ಷ್ ಸ್ಪೋರ್ಟ್‌ ಸರಣಿಯ ಪ್ರೀಮಿಯಂ ಕಾರನ್ನು ಹೊಂದಿದ್ದಾರೆ. ತಾವು ಸ್ವಯಂ-ಗಳಿಸಿದ ಆಸ್ತಿಯ ಬಗ್ಗೆ ಸಾಕಷ್ಟು ಹೆಮ್ಮೆಪಡುವ ರಕ್ಷ್‌ ಬಳಿ ಮುದ್ದಾದ ಜಿಪ್ಸಿ ಕೂಡ ಇದೆ.

'ಕಥೆಯೊಂದು ಶುರುವಾಗಿದೆ' ಚಂದು ಗೌಡ

ನಟನಾಗಿರುವುದರ ಜೊತೆಗೆ, ಚಂದು ಗೌಡ ಅವರಿಗೆ ಆಟೋಮೊಬೈಲ್‌ಗಳ ಮೇಲೆ ತೀವ್ರ ಆಸಕ್ತಿಯಿದೆ. ಅವರು ಸುಮಾರು 16 ಲಕ್ಷ ರೂ ಮೌಲ್ಯದ ಸೂಪರ್ ಬೈಕನ್ನು ಹೊಂದಿದ್ದಾರೆ. ಅಲ್ಲದೆ, ಅವರ ಬಳಿ ಸಾಕಷ್ಟು ಸ್ಪೋರ್ಟ್ಸ್ ಕಾರುಗಳ ಸಂಗ್ರಹವಿದೆ. ಇದಕ್ಕಾಗಿಯೇ ಚಂದು ತಮ್ಮ ಮನೆಯ ಮುಂದೆ ದೊಡ್ಡದಾದ ಪಾರ್ಕಿಂಗ್ ಏರಿಯಾವನ್ನು ನಿರ್ಮಿಸಿದ್ದಾರೆ.

Kannada Serial Actress Kiran, Chaitra, Raksh, Shamanth Gowda and othes Luxury cars Details

'ಕನ್ನಡತಿ' ಕಿರಣ್ ರಾಜ್

'ಕನ್ನಡತಿ' ಧಾರಾವಾಹಿಯ ಖ್ಯಾತ ಪಾತ್ರಕ್ಕಾಗಿ ಎಲ್ಲರಿಂದ ಹರ್ಷ ಎಂದು ಪ್ರೀತಿಯಿಂದ ಕರೆಯಲ್ಪಡುವ ಕಿರಣ್ ರಾಜ್ ಜನಪ್ರಿಯ ಐಷಾರಾಮಿ ಕಾರನ್ನು ಹೊಂದಿದ್ದಾರೆ. ಇದರ ಬೆಲೆ 40-60 ಲಕ್ಷ ರೂಪಾಯಿಗಳು. ಕಿರಣ್ ರಾಜ್ ಆಟೋಮೊಬೈಲ್ ಉತ್ಸಾಹಿಯೂ ಆಗಿದ್ದು, ಹೀಗಾಗಿ ಅದ್ದೂರಿ ಬೈಕನ್ನು ಕೂಡ ಹೊಂದಿದ್ದಾರೆ.

'ಲಕ್ಷ್ಮಿಬಾರಮ್ಮ' ಶಮಂತ್ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿ ಶಮಂತ್ ಬ್ರೋ ಗೌಡ ಅವರು ಸುಮಾರು 42 ಲಕ್ಷ ರೂ ಬೆಲೆಯ ಪ್ರೀಮಿಯಂ ಕಾರನ್ನು ಹೊಂದಿದ್ದಾರೆ. ಬಿಗ್ ಬಾಸ್ 8 ರ ನಂತರ ಶಮಂತ್ ತಾವು ಸ್ವಯಂ ಗಳಿಸಿದ ಹಣದಲ್ಲಿ ಈ ಕಾರನ್ನು ಖರೀದಿಸಿದ್ದರು.

'ಬೆಟ್ಟದ ಹೂ' ದರ್ಶಕ್ ಗೌಡ

ಆಟೋಮೊಬೈಲ್ ಕುರಿತು ಆಸಕ್ತಿಯನ್ನು ಹೊಂದಿರುವ ಇನ್ನೊಬ್ಬ ನಟ ದರ್ಶಕ್ ಅವರು ಭರ್ಜರಿಯಾದ ಸೂಪರ್ ಬೈಕನ್ನು ಹೊಂದಿದ್ದಾರೆ. ದುಬಾರಿ ಬೈಕನ್ನು ಹೊಂದಿರುವ ಇವರಿಗೆ ಸವಾರಿ ಹೋಗುವುದು ನೆಚ್ಚಿನ ಹವ್ಯಾಸವಂತೆ. ಬೈಕ್ ಅಷ್ಟೇ ಅಲ್ಲದೆ, ತಮ್ಮ ಸಾಹಸಯನದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಿರುವಂತಹ ಒಂದು ಫೋರ್ ವಿಲ್ಲರನ್ನು ಕೂಡ ದರ್ಶಕ್ ಇತ್ತೀಚೆಗಷ್ಟೇ ಖರೀದಿಸಿದರು.

'ನಾಗಿಣಿ' ದೀಪಿಕಾ ದಾಸ್

ತನ್ನ ನೆಚ್ಚಿನ ಕಾರಿನ ಹೊರತಾಗಿ, ದೀಪಿಕಾ ಇನ್ನೊಂದು ಹೊಸ ಐಷಾರಾಮಿ ಕಾರನ್ನು ಕೂಡ ಹೊಂದಿದ್ದಾರೆ. ಇತ್ತೀಚಿಗೆ ತಮ್ಮ ಪಟ್ಟಿಗೆ ಈ ಹೊಸ ಕಾರನ್ನು ಸೇರ್ಪಡೆಗೊಳಿಸಿದ್ದಾರೆ ಆದರೆ ಮೊದಲಿನಿಂದಲೇ ಕಾರಿನ ಬಗ್ಗೆ ತೀರ ಆಸಕ್ತಿಯನ್ನು ಹೊಂದಿರುವ ನಟಿ ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಸೆಡಾನ್ ಮತ್ತು ಹ್ಯಾಚ್ ಬ್ಯಾಕನ್ನು ಹೊಂದಿದ್ದರು.

'ನಾಗಿಣಿ 2' ನಮ್ರತಾ ಗೌಡ

ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ, ನಾಗಿಣಿ ನಟಿ ಸುಮಾರು 18 ಲಕ್ಷ ರೂ ಮೌಲ್ಯದ ಐಷಾರಾಮಿ ಎಸ್ ಯುವಿಯನ್ನು ತಮ್ಮ ಮನೆಗೆ ಸೇರಿಸಿಕೊಂಡಿದ್ದಾರೆ. ತನ್ನ ಕನಸಿನ ಕಾರನ್ನು ಖರೀದಿಸಿದ್ದ ಸಂದರ್ಭದಲ್ಲಿ ನಮ್ರತಾ ಅವರು "ಇದು ತನ್ನ ಜೀವನದಲ್ಲಿ ಬಹಳ ಮುಖ್ಯವಾದ ದಿನವಾಗಿದೆ" ಎಂದು ಖುಷಿಯನ್ನು ವ್ಯಕ್ತಪಡಿಸಿದ್ದರು.

ಬಿಗ್ ಬಾಸ್ ಅನುಪಮಾ ಗೌಡ

ನಟಿ ಹಾಗೂ ನಿರೂಪಕಿಯಾಗಿರುವ ಅನುಪಮಾ ಗೌಡ ಇತ್ತೀಚೆಗೆ 20 ಲಕ್ಷ ರೂ ಬೆಲೆಬಾಳುವ ಹೊಸ ಎಸ್ ಯುವಿಯನ್ನು ಖರೀದಿಸಿದ್ದಾರೆ. ಇದು ಅನುಪಮಾ ಅವರ ಮೂರನೇ ಕಾರಾಗಿದೆ. ಈ ಕಾರನ್ನು ಡೆಲಿವರಿ ಪಡೆಯಲು ಸುಮಾರು ಐದು ತಿಂಗಳ ಕಾಲ ಕಾದಿರುವುದನ್ನು ನಟಿ ವೀಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಬಿಗ್ ಬಾಸ್ ನಿವೇದಿತಾ ಗೌಡ

ಈ ಯುವ ರಿಯಾಲಿಟಿ ಸ್ಟಾರ್ 10 ಲಕ್ಷ ರೂ ಮೌಲ್ಯದ ಐಷಾರಾಮಿ ಎಸ್‌ಯುವಿ ಹೊಂದಿದ್ದಾರೆ. ನಿವೇದಿತಾ ಅವರಿಗೆ ಬಾಲ್ಯದಿಂದಲೂ ಅದ್ದೂರಿ ಕಾರನ್ನು ಹೊಂದಬೇಕೆಂಬುದು ದೊಡ್ಡ ಕನಸಾಗಿತ್ತಂತೆ. ಅಂತಿಮವಾಗಿ ತಮ್ಮ ದುಡಿಮೆಯ ಹಣದಿಂದ ವೆಹಿಕಲ್ ಖರೀದಿಸಿರುವುದಕ್ಕೆ ನಟಿ ಸಂತಸ ವ್ಯಕ್ತಪಡಿಸುತ್ತಾರೆ.

More from Filmibeat

English summary
Kannada Serial Actress Kiran, Chaitra, Raksh, Shamanth Gowda and othes Luxury cars Details, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X