ವಾರಗಿತ್ತಿಯರೆಂದರೆ ಹೀಗೆಯೇ ಇರಬೇಕು; ದೀಪಿಕಾ, ಪೂರ್ಣಿಮಾ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ

By ಪೂರ್ವ

ಕಿರುತೆರೆಯಲ್ಲಿ ಸದಾ ಕಿತ್ತಾಡುತ್ತಿರುವ ವಾರಗಿತ್ತಿಯರಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪೂರ್ಣಿಮಾ ಹಾಗೂ ದೀಪಿಕಾ ಕೂಡ ಸದಾ ಮುಂದು. ಪೂರ್ಣಿಮಾ ಅನಾಥೆ ಎನ್ನುವ ಕಾರಣಕ್ಕೆ ದೀಪಿಕಾ ಆಕೆಯನ್ನು ಹಂಗಿಸಿ ಮಾತನಾಡುತ್ತಲೇ ಇರುತ್ತಾಳೆ. ಆಕೆಗೆ ತಾನೇ ಪೂರ್ಣಿಮಾಗಿಂತ ಹೆಚ್ಚು. ಪೂರ್ಣಿಮಾ ಈ ಮನೆಗೆ ಏನು ಇಲ್ಲದೆ ಬಂದಿದ್ದಾಳೆ. ಅವಳನ್ನು ಈ ಮನೆಯಿಂದ ಓಡಿಸಿದರೆ ಮತ್ತೆ ನನ್ನ ಕೆಲಸ ಸುಲಭ. ಇಲ್ಲವಾದರೆ ಈ ಆಸ್ತಿ ಇಬ್ಬಾಗವಾಗಬೇಕು. ಹಾಗಾದರೆ ಮಾತ್ರ ಈ ಮನೆಯ ಖುಷಿ ಹಾಳಾಗುತ್ತದೆ. ಪೂರ್ಣಿಮಾ ಹೆಸರು ಕೂಡ ಹಾಳಾಗುತ್ತದೆ ಎನ್ನುವುದು ದೀಪಿಕಾಳಲ್ಲಿರುವ ಕೆಟ್ಟ ಆಸೆ.

ಆದರೆ ದೀಪಿಕಾಳ ಆಸೆಗೆ ಯಾರೂ ಕುಮ್ಮಕ್ಕು ನೀಡುತ್ತಿಲ್ಲ. ಶಾರ್ವರಿ ಕೂಡ ದೀಪಿಕಾಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆಕೆಯ ಜೊತೆ ನಯವಾಗಿ ಮಾತನಾಡಿ ಮನೆಯವರ ಎದುರು ಆಕೆಯನ್ನು ಎತ್ತಿ ಕಟ್ಟುತ್ತಿದ್ದಾರೆ. ಮೊದಲೆಲ್ಲ ಅಭಿ ನನ್ನವನು ಆಗಬೇಕು ಎನ್ನುವ ಆಸೆ ದೀಪಿಕಾಗೆ ಇತ್ತು. ಆದರೆ, ಇದೀಗ ಅಭಿ ಮನದೊಡತಿ ನಾನೇ ಆಗಿರುವಾಗ ನನ್ನ ತಂದೆಗೆ ಅವಮಾನ ಮಾಡಿದ ಮನೆಗೆ ನನಗೂ ಬೇಡ ಎಂದು ದೀಪಿಕಾ ಮನಸ್ಸಿನಲ್ಲಿ ಮೂಡಿದೆ.

Kannada serial actress Lavanya and Darshini dance video goes viral

ಇನ್ನೂ ಪೂರ್ಣಿಮಾಗೆ ಎಲ್ಲರೂ ಒಂದಾಗಿ ಇರಬೇಕು. ಈ ಮನೆಯಲ್ಲಿ ಸಂತಸ ಯಾವತ್ತೂ ನೆಲೆಯೂರಬೇಕು, ಯಾರು ಹೆಚ್ಚು ಅಲ್ಲ ಯಾರು ಕಡಿಮೆಯೂ ಅಲ್ಲ. ಕೆಟ್ಟತನಕ್ಕೆ ತಲೆಬಾಗದೆ ಒಳ್ಳೆಯತನಕ್ಕೆ ಮಾತ್ರ ತಲೆಬಾಗಬೇಕು ಎನ್ನುವುದು ಆಕೆಯ ಪಾಲಿಸಿ. ಇನ್ನೂ ಆದರೆ ಸೀರಿಯಲ್‌ನಲ್ಲಿ ಈ ಇಬ್ಬರು ನಟಿಯರಿಗೆ ಮನಸ್ತಾಪ ಇದ್ದರೂ, ನಿಜ ಜೀವನ ಎಂದು ಬಂದಾಗ ಇಬ್ಬರೂ ಬಹಳ ಉತ್ತಮ ಗೆಳೆಯರು. ಆಗಾಗ ರೀಲ್ ಮಾಡುತ್ತಾ ಎಲ್ಲರ ಜೊತೆ ಖುಷಿಯಾಗಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು.

ಪೂರ್ಣಿಮಾ ದೀಪಿಕಾ ರಿಯಲ್ ಲೈಫ್ ಹೇಗಿದೆ?

ಇನ್ನೂ ಪೂರ್ಣಿಮ ರಿಯಲ್​ ಹೆಸರು ಲಾವಣ್ಯ. ಹಾಗೇ ದೀಪಿಕಾ ನಿಜವಾದ ಹೆಸರು ದರ್ಶಿನಿ ಡೆಲ್ಟಾ. ಇವರಿಬ್ಬರೂ ಆಗಾಗ ಹೊಸ ಹೊಸ ರೀಲ್ ಮಾಡುತ್ತಿರುತ್ತಾರೆ. ಹಾಗೆಯೇ ದರ್ಶಿನಿ ನಟಿಯಾಗೋ ಮೊದಲು ಮಾಡೆಲ್ ಜೊತೆಗೆ ಕೊರಿಯೋಗ್ರಫರ್ ಆಗಿ ಗುರುತಿಸಿಕೊಂಡಿದ್ದಾರೆ. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಕೂಡ ಮಾಡಿದ್ದಾರೆ.

ಕೋರಿಯಾಗ್ರಫರ್ ಆಗಿ ಕೆಲಸ ಮಾಡಿದ ದರ್ಶಿನಿ

ಡಾನ್ಸ್ ಮಾಡುವಾಗ ಕೂಡ ದರ್ಶಿನಿ ಮುಖ ಭಾವ ಹಾಗೂ ಡಾನ್ಸ್ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುತ್ತದೆ. ಹಲವು ಸಿನಿಮಾಗಳಲ್ಲಿ ಇವರು ಕೊರಿಯೋಗ್ರಫಿ ಮಾಡಿದ್ದಾರೆ. ಉಪಾಧ್ಯಕ್ಷ ಹಾಗೆಯೇ ಇನ್ನೂ ಕೆಲವು ಸಿನಿಮಾಗಳಿಗೆ ಇವರು ಕೊರಿಯೋಗ್ರಫಿಯಿದೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್‌ಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇನ್ನೂ ಲಾವಣ್ಯ ಕೂಡ ಕಿರುತೆರೆಯಲ್ಲಿ ಮಿಂಚಿದ ನಟಿ ಎಂದು ಹೇಳಿದರೆ ತಪ್ಪಾಗದು.

ಟ್ರೆಂಡಿ ಹಾಡಿಗೆ ಸಖತ್ ಸ್ಟೆಪ್

ಹಾಗೆಯೇ ಕೆಲವು ರಿಯಾಲಿಟಿ ಶೋ ನಲ್ಲಿ ಕಪ್ ಗೆದ್ದುಕೊಂಡರೆ, ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಶೋ ಕೊಟ್ಟು ಮಿಂಚಿದ್ದಾರೆ ಇವರ ಪತಿ ಕೂಡ ಕಿರುತೆರೆ ಕಲಾವಿದರು. ಪತಿ ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಶಶಿ ಅವರು 'ಅಮೃತಧಾರೆ' ಸೀರಿಯಲ್‌ನಲ್ಲಿ ಭೂಮಿಕಾ ಸಹೋದರನ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಲಾವಣ್ಯ ಹಾಗೂ ದರ್ಶಿನಿ ಫೇಮಸ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ 'ಕೃಷ್ಣ ಪ್ರಣಯ ಸಖಿ'ಯ "ದ್ವಾಪರ ದಾಟುತ ನನ್ನನೇ ನೋಡಲು.."ಎನ್ನುವ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಾರಗಿತ್ತಿಯರು ಎಂದರೆ ಹೀಗೆಯೇ ಇರಬೇಕು ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ.

More from Filmibeat

Read more about: actress poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X