Malaika vasupal: ಬೆಳಗ್ಗೆಯಿಂದ ರಾತ್ರಿವರೆಗೂ ತಿಂತಾ ಇರು ತಿಂತಾ ಇರು; ಇದು ಮಲೈಕಾ ಡಯೆಟ್!
ಎಜೆ ವೈಫ್ ಲೀಲಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಡವಟ್ಟು ಮಾಡ್ಕೊಂಡು, ಸಿಟ್ಟು ತರಿಸುತ್ತಿದ್ದ ಲೀಲಾ, ಆಮೇಲೆ ಆಮೇಲೆ ಎಜೆಗೆ ಮಾತ್ರವಲ್ಲ ವೀಕ್ಷಕರಿಗೂ ಬಹಳ ಇಷ್ಟವಾಗಿ ಬಿಟ್ಟಿದ್ದರು. ಮುದ್ದು ಮುದ್ದಾಗಿರುವ, ಪಟಪಟ ಅಂತ ಮಾತಾಡುವ ಲೀಲಾಗೆ ಎಲ್ಲರೂ ಫಿದಾ ಆಗೋಗಿದ್ದರು. ಆದರೆ ಅಂದುಕೊಂಡಿದ್ದಕ್ಕಿಂತ ಬೇಗನೇ ಮುಗಿದು ಹೋಯಿತು. ಧಾರಾವಾಹಿಯಲ್ಲಿ ಒಳ್ಳೆ ಎಂಡಿಂಗ್ ಬರುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ಇಲ್ಟಾ ಆಗಿತ್ತು.
ಲೀಲಾ ಸೀರಿಯಲ್ ಮಾಡುತ್ತಿರುವಾಗಲೇ ಸಿನಿಮಾದಲ್ಲಿಯೂ ರಂಜಿಸಿದ್ದರು. 'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣನಿಗೆ ಜೋಡಿಯಾಗಿ ಗಮನ ಸೆಳೆದರು. ಈಗ ಮತ್ತೊಂದು ಸಿನಿಮಾದಲ್ಲಿ ನಾಗಭೂಷಣ್‌ಗೆ ಜೋಡಿಯಾಗಿದ್ದಾರೆ. ಸಿನಿಮಾದಲ್ಲಿ ಬ್ಯುಸಿಯಾಗಿರುವ ಲೀಲಾ ಅಲಿಯಾಸ್ ಮಲೈಕಾ ಸದ್ಯ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಇದೀಗ ತಮ್ಮ ಬ್ಯೂಟಿ ಸೀಕ್ರೆಟ್ ಹೇಳಿದ್ದಾರೆ.

ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
ಮಲೈಕಾ ಟಿ ವಸುಪಾಲ್ ದಾವಣಗೆರೆಯ ಚೆಲುವೆ. ನೋಡುವುದಕ್ಕೂ ಹಾಲ್ಗೆನ್ನೆಯ ಚೆಲುವೆ. ಆದರೆ ಈ ಬ್ಯೂಟಿಯನ್ನ ಮೆಂಟೈನ್ ಮಾಡಿದ್ದೇಗೆ..? ಯಾವ ರೀತಿಯ ಕ್ರೀಂಗಳನ್ನ ಬಳಸುತ್ತಾರೆ ಹೀಗೆ ಹಲವು ಪ್ರಶ್ನೆಗಳು ಸಾಮಾನ್ಯರಿಗೆ ಕಾಡುತ್ತವೆ. ಅದಕ್ಕೆ ಇದಕ್ಕೆ ಉತ್ತರವೂ ಸಿಕ್ಕಿದೆ. ಅವರ ಬ್ಯೂಟಿ ಸೀಕ್ರೆಟ್ ಅನ್ನ ಇದೀಗ ರಿವೀಲ್ ಮಾಡಿದ್ದಾರೆ.
ಬೆಳಗ್ಗೆಯಿಂದ ಸಂಜೆ ತನಕ ಡಯೆಟ್
ಮನುಷ್ಯನ ದೇಹಕ್ಕೆ ಪೌಷ್ಟಿಕಾಂಶ ಬಹಳ ಮುಖ್ಯ. ಆ ಆಹಾರವನ್ನ ದೇಹಕ್ಕೆ ಒದಗಿಸಿದರೆ ಬರೀ ದೇಹವಷ್ಟೇ ಶಕ್ತಿಯಾಗಿರುವುದಿಲ್ಲ. ಬದಲಿಗೆ ಸೌಂದರ್ಯವೂ ಹೆಚ್ಚಾಗುತ್ತದೆ. ಮಲೈಕಾ ಬೆಳಗ್ಗೆ 7 ಗಂಟೆಗೆ ತಮ್ಮ ರೋಟಿನ್ ಶುರು ಮಾಡುತ್ತಾರೆ. ಆಮ್ಲಾ ಜ್ಯೂಸ್, ಬಿಟ್ರೂಟ್, ಕ್ಯಾರೆಟ್, ದಾಳಿಂಬೆ ಹಾಕಿದ ಜ್ಯೂಸ್ ಕುಡಿಯುತ್ತಾರೆ. ಮಧ್ಯಾಹ್ನಕ್ಕೆ ಹೆಲ್ದಿ ಫುಡ್ ತಿನ್ನುತ್ತಾರೆ. ಚಪಾತಿ, ಪನ್ನೀರ್, ಪಲ್ಯವನ್ನ ಊಟದಲ್ಲಿ ಸೇರಿಸುತ್ತಾರೆ. ಸಂಜೆ ವೇಳೆಗೆ ಸ್ನ್ಯಾಕ್ಸ್ ಅಂತ ಜೋಳ ತಿನ್ನುತ್ತಾರೆ. ಇದನ್ನ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ.
ಮಲೈಕಾ ಫ್ಯಾನ್ಸ್ ದಿಲ್‌ಖುಷ್
ಮಲೈಕಾಗೆ ಹೇಳಿ ಕೇಳಿ ಅಭಿಮಾನಿಗಳು ಜಾಸ್ತಿ. ಲೀಲಾ ಆಗಿದ್ದಾಗಿನಿಂದಲೂ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ನಕೂಡ ಹೆಚ್ಚು ಮಾಡಿಕೊಂಡಿದ್ದಾರೆ. ಮಲೈಕಾದ ಊಟದ ಮೆನು ನೋಡಿ ಫ್ಯಾನ್ಸ್ ಇದೇನಾ ನಿಮ್ಮ ಬ್ಯೂಟಿ ಸೀಕ್ರೆಟ್ ಎಂದು ಕೇಳುತ್ತಿದ್ದಾರೆ. ಸಣ್ಣಗಿರುವ ಹುಡುಗಿಯರೇ ಹೆಚ್ಚು ತಿನ್ನೋದು ಎಂದೆಲ್ಲಾಕಮೆಂಟ್ ಹಾಕುತ್ತಿದ್ದಾರೆ. ಇನ್ನು ಹಲವರು ಲವ್ ಸಿಂಬಲ್, ಹಾರ್ಟ್ ಗಳನ್ನ ಹಾಕಿ ವಿಶ್ ಮಾಡುತ್ತಿದ್ದಾರೆ.
ಡಾನ್ಸ್‌ನಲ್ಲೂ ಎಕ್ಸ್‌ಪರ್ಟ್
ಇನ್ನು ಮಲೈಕಾ ವಸುಪಾಲ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಫೋಟೋಶೂಟ್ ಮಾಡಿಸಿ ಹಿಸ ಬಗೆಯ ಫೋಟೋಗಳನ್ನು ಹಾಕುತ್ತಾ ಇರುತ್ತಾರೆ. ಸೀರೆಯಲ್ಲಿ ಅಂದವಾಗಿ ಕಂಗೊಳಿಸುತ್ತಾ ಇರುತ್ತಾರೆ. ಅದರಲ್ಲೂ ಡ್ಯಾನ್ಸ್ ಎಕ್ಸ್ ಪರ್ಟ್ ಕೂಡ. ಶ್ರೀರಸ್ತು ಶಿಭವಸ್ತು ವಿಲನ್ ದೀಪಿಕಾ ಜೊತೆಗೆ ಸೇರಿ ಆಗಾಗ ಹಳೆಯ ಹಾಡುಗಳಿಗೆ ಹೊಸ ಬಗೆಯ ನೃತ್ಯ ಮಾಡುತ್ತಾ ಇರುತ್ತಾರೆ. ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮಲೈಕಾಗೆ ಅಭಿಮಾನಿಗಳ ಸಂಖ್ಯೆಯು ಕಡಿಮೆ ಇಲ್ಲ. ಅವರಮ್ನ ಮನಸ್ಸಿನಲ್ಲಿಯೇ ಆರಾಧಿಸುವ ಹೃದಯಗಳು ಜಾಸ್ತಿಯೇ ಇದಾವೆ.


Click it and Unblock the Notifications











