ಸಿಂಪಲ್ ಉಡುಗೆಯ ಫೋಟೋಶೂಟ್ ಮೂಲಕ ನೆಟ್ಟಿಗರ ಮನಗೆದ್ದ ಮೇಘಾಶೆಟ್ಟಿ
ಅನು ಸಿರಿಮನೆ ಎಂದು ಖ್ಯಾತಿ ಪಡೆದ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ. ವೀಕ್ಷಕ ಪ್ರಿಯರು ಮಾತ್ರ ಇವರ ಅಭಿನಯಕ್ಕೆ ಶಭಾಸ್ ಎಂದಿದ್ದಾರೆ. ಮೇಘ ನೋಡಲು ಬಹಳ ಸುಂದರವಾಗಿದ್ದಾರೆ. ಇವರನ್ನು ನೋಡಿದ ಅನೇಕ ಜನರಿಗೆ ಹಾಗೆಯೇ ಇವರ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮೇಘ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಆಗಾಗ ರೀಲ್ಸ್, ಫೋಟೋಸ್ ಅನ್ನು ಶೇರ್ ಮಾಡುತ್ತಾ ಇರುತ್ತಾರೆ. ಇವರನ್ನು ನೋಡಿದ ಅಭಿಮಾನಿಗಳಿಗೆ ಬಹಳ ಖುಷಿ ಆಗುತ್ತಿತ್ತು. ಮೊನ್ನೆಯಷ್ಟೇ ಬಿಳಿ ಬಟ್ಟೆಯನ್ನು ತೊಟ್ಟು ಮೇಘ ಶೆಟ್ಟಿ ಅಪ್ಸರೆಯ ಹಾಗೆ ಕಾಣುತ್ತಾ ಇದ್ದರು. ಆದರೆ ಇದೀಗ ಸಿಂಪಲ್ಲಾಗಿ ಬಟ್ಟೆ ತೊಟ್ಟು ಸಖತ್ ಆಗಿ ಕಾಣಿಸುತ್ತ ಇದ್ದಾರೆ.

ಇವರನ್ನು ನೋಡಿದ ಅಭಿಮಾನಿಗಳು ಮೇಘ ಅವರೇ ನೀವು ಸಿಂಪಲ್ ಡ್ರೆಸ್ ನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದಿರಾ ಎಂದು ಹೇಳುತ್ತಿದ್ದಾರೆ. ಇನ್ನು ಮೇಘ ಶೆಟ್ಟಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುವುದು ಈಕೆಯ ಮನದಾಸೆ ಎಂದರೆ ತಪ್ಪಾಗದು. ಅಕಸ್ಮಾತಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮೇಘಾ ಪಾಲಿಗೆ ಅದೃಷ್ಟದ ಬಾಗಿಲು ತೆರೆದುಕೊಂಡ ಹಾಗೆಯೇ ಅನ್ನಿಸುತ್ತಿದೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಿದ ನಟಿ ಬಹಳ ಫೇಮಸ್ ಆಗಿದ್ದರು. ಎಲ್ಲರೂ ಈಗ ಕೂಡ ಅನು ಎಂದೇ ಕರೆಯುತ್ತಾರೆ. ಅಷ್ಟರ ಮಟ್ಟಕ್ಕೆ ವೀಕ್ಷಕ ಪ್ರಿಯರು ಅನು ಪಾತ್ರಕ್ಕೆ ಫಿದಾ ಆಗಿದ್ದಾರೆ. ಇದೀಗ ಮೇಘ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಿಂಪಲ್ಲಾಗಿ ಇರುವ ಫೋಟೋವನ್ನು ಶೇಟ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಂತೂ ಈ ಫೋಟೋಗಳನ್ನು ಲೈಕ್ ಮಾಡುತ್ತಾ ಇದ್ದಾರೆ.
ಮೇಘ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಅಪ್ಲೋಡ್ ಮಾಡಿದ್ದೆ ತಡ ಕಾಮೆಂಟ್ ಮೇಲೆ ಕಾಮೆಂಟ್ ಬರುತ್ತಿದೆ. ಹಾಗೆಯೇ ಫೋಟೋ ಅಪ್ಲೋಡ್ ಮಾಡಿ ಹತ್ತು ನಿಮಿಷಗಳಲ್ಲಿ 11 ಸಾವಿರಕ್ಕೂ ಮೇಲ್ಪಟ್ಟ ಜನ ಫೋಟೋವನ್ನು ಲೈಕ್ ಮಾಡಿದ್ದಾರೆ. ಇದನ್ನು ನೋಡಿದ ಮೇಘ ಶೆಟ್ಟಿಗೆ ಬಹಳ ಖುಷಿ ಆಗಿದೆ. ಮೇಘ ಶೆಟ್ಟಿ ಹರಸಿ ಸಾಲು ಸಾಲು ಸಿನಿಮಾಗಳಲ್ಲಿ ಆಫರ್ ಬರುತ್ತಿದೆ.
ಇದರಿಂದ ಮೇಘ ಕೊಂಚ ಬ್ಯುಸಿ ಆಗಿದ್ದಾರೆ. ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅಲ್ಲದೇ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೇಘಗೆ ಧಾರಾವಾಹಿಯಲ್ಲಿ ಕೂಡ ಆಫರ್ ಬರುತ್ತಿದೆ. ಆದರೆ ಚಿತ್ರರಂಗದತ್ತ ಮುಖ ಮಾಡಿರುವ ಮೇಘಾ ಧಾರಾವಾಹಿಗಳಲ್ಲಿ ನಟನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಮೇಘಾ ಶೆಟ್ಟಿಗೆ ಇನ್‍ಸ್ಟಾಗ್ರಾಮ್‌ನಲ್ಲಿ 1.1 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಲ್ಲಿಯವರೆಗೆ 334 ಪೋಸ್ಟ್ ಹಾಕಿದ್ದಾರೆ. ಮೇಘಾ ಏನೇ ಅಪ್‌ಡೇಟ್ ಇದ್ದರೂ ಅದನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.


Click it and Unblock the Notifications











