ಮಾಡರ್ನ್ ಲುಕ್ ನಲ್ಲಿ ಅಭಿಮಾನಿಗಳ ಮನಸ್ಸು ಕದ್ದ ನಟಿ,ಮೇಘಾ ಶೆಟ್ಟಿ ಫೋಟೋಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ !

By ಪೂರ್ವ

ಅನು ಸಿರಿಮನೆ ಎಂಬ ಪಾತ್ರದ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದ ನಟಿ ಮೇಘ ಶೆಟ್ಟಿ. ಮೇಘ ಶೆಟ್ಟಿ ಸಾಕಷ್ಟು ಸಿನಿಮಾದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಆದರೆ ಅವರು ಮೊದಲು ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾದ ನಟಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೇಘ ಶೆಟ್ಟಿ ಮಾಡರ್ನ್ ಡ್ರೆಸ್ ಗಳ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಇದೀಗ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಫೋಟೋ ನೋಡುಗರಿಗೆ ಬಹಳ ಖುಷಿ ತಂದಿದೆ.

ಹೌದು ಕಪ್ಪು ಬಣ್ಣದ ಬಟ್ಟೆ ತೊಟ್ಟ ನಟಿ ನೋಡಲು ಬಹಳ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ. ಮೇಘ ಶೆಟ್ಟಿ ಫೋಟೋ ನೋಡಿದ ಅನೇಕ ಅಭಿಮಾನಿಗಳು ನೀವು ನೋಡಲು ತುಂಬಾ ಚೆನ್ನಾಗಿದ್ದೀರಾ, ಲುಕ್ಕಿಂಗ್ ಬ್ಯೂಟಿಫುಲ್ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಫೋಟೋ ಬಹಳಷ್ಟು ಕಾಮೆಂಟ್ ಗಳು ಬರುತ್ತಿದ್ದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಇತ್ತೀಚಿನ ದಿನಗಳಲ್ಲಿ ಮೇಘ ಶೆಟ್ಟಿ ಸೀರಿಯಲ್ ನಲ್ಲಿ ಸಖತ್ ಬ್ಯುಸಿ ಆಗಿದ್ದು ಅಭಿಮಾನಿಗಳಿಗೆ ಬಹಳಷ್ಟು ಹತ್ತಿರವಾಗುತ್ತಿದ್ದಾರೆ. ಮೇಘ ಶೆಟ್ಟಿ ನಗುವಿಗೆ ಅನೇಕ ಜನರು ಕ್ಲೀನ್ ಬೌಲ್ಡ್ ಆಗಿದ್ದಾರೆ.

kannada-serial-actres-megha-shetty-photo-shoot

ಕಪ್ಪು ಬಣ್ಣದ ಗೌನ್ ಧರಿಸಿದ ಮೇಘಾ ಶೆಟ್ಟಿ, ಕಿವಿಗೆ ಒಲೆಯನ್ನು ಧರಿಸಿಕೊಂಡು ಫೋಟೋ ಗೆ ಪೋಸ್ ನೀಡಿದ್ದಾರೆ. ಹಾಗೆಯೇ ಮುಖಕ್ಕೆ ಸಿಂಪಲ್ ಮೇಕಪ್ ಮಾಡಿ ಮತ್ತಷ್ಟು ಜನರಿಗೆ ಇಷ್ಟವಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೇಘ ಶೆಟ್ಟಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಮೇಘಾ ಶೆಟ್ಟಿ ಕಪ್ಪು ಬಣ್ಣದ, ಸ್ಲೀವ್ ಲೆಸ್, ಥೈ ಹೈ ಸ್ಲಿಟ್ ಶಾರ್ಟ್ ಡ್ರೆಸ್ ಧರಿಸಿದ್ದಾರೆ. ಈ ಡ್ರೆಸ್ ಮೇಘ ಶೆಟ್ಟಿಯ ಅಂದವನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಸೀರಿಯಲ್ ನಿರ್ದೇಶನದತ್ತ ಒಲವು ತೋರಿದ ನಟಿ

ಮೇಘ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸೀರಿಯಲ್ ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ ಹಾಗೆಯೇ ಸಾಕಷ್ಟು ಸಿನಿಮಾಗಳಲ್ಲಿ ಆಕ್ಟ್ ಮಾಡಲು ತನ್ನನ್ನು ತಾನು ಟೊಡಗಿಸಿಕೊಳ್ಳುತ್ತಿದ್ದಾರೆ.ಜಿಮ್ ಗೆ ಹೋಗಿ ಸಾಕಷ್ಟು ವರ್ಕೌಟ್ ಕೂಡ ಮಾಡುತ್ತಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಧಾರವಾಹಿ ನೋಡಿದ ಜನರಿಗೆ ಬಹಳಷ್ಟು ಮೆಚ್ಚುಗೆಯ ಸುರಿಮಳೆ ಶುರುವಾಗಿದೆ. ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಪಲ್ ರೈಡಿಂಗ್, ಕೃಷ್ಣ ಹಾಗೂ ನಿಶ್ವಿಕಾ ನಾಯ್ಡು ಜೊತೆ ದಿಲ್ ಪಸಂದ್ ಹಾಗೂ ಧನ್ವೀರ್ ಜೊತೆ ಕೈವಾ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ

ಹಾಗೆಯೇ ಇನ್ನೂ ಮೂರು ಸಿನಿಮಾದಲ್ಲಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ ಆದರೆ ಸಿನಿಮಾ ರಿಲೀಸ್ ಯಾವಾಗ ಎನ್ನುವುದು ತಿಳಿಯಬೇಕಾಗಿದೆ. ಆಪರೇಶನ್ ಲಂಡನ್ ಕೆಫೆ, ಚೀತಾ, ಗ್ರಾಮಾಯಣ ಸಿನಿಮಾಗಳಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು ಆದರೆ ಅದಾದ ಬಳಿಕ ಸಿನಿಮಾದಲ್ಲಿ ಕೂಡ ಅಷ್ಟಾಗಿ ಅವರು ಹೆಚ್ಚು ಫೇಮಸ್ ಆಗಲಿಲ್ಲ.

More from Filmibeat

English summary
kannada serial actress megha shetty photo shoot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X