ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಸೀತಾ ರಾಮ' ನಟಿ; ಮೇಘನಾ ಇಷ್ಟಪಟ್ಟ ಈ ಹುಡುಗ ಯಾರು?

By ಪೂರ್ವ

ಬಣ್ಣದ ಲೋಕದ ಕೆಲವು ತಾರೆಯರು 2025 ರ ಹೊಸ್ತಿಲಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರಲ್ಲಿ ಮೇಘನಾ ಶಂಕರಪ್ಪ ಕೂಡ ಒಬ್ಬರು. ಮೇಘನಾ ಮೊದಲು ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು. ಹೀರೋಯಿನ್ ಗೆಳತಿಯ ಪಾತ್ರದಲ್ಲಿ ಮಿಂಚಿರುವ ನಟಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಹಾಗೆಯೇ ತನ್ನದೇ ಅದ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಇವರು 'ಸೀತಾ ರಾಮ' ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ.

'ಸೀತಾ ರಾಮ' ಧಾರಾವಾಹಿಯಲ್ಲಿ ಪ್ರಿಯಾ ಪಾತ್ರಧಾರಿಯಾಗಿ ಈ ಚೆಂದುಳ್ಳಿ ಚೆಲುವೆ ಮಿಂಚುತ್ತಿದ್ದಾರೆ. ಮೊದಲು ಪ್ರಿಯಾ ಸೀತಾ ಗೆಳತಿಯಾಗಿಯೇ ಧಾರಾವಾಹಿಯಲ್ಲಿ ಪರಿಚಯ ಆಗಿದ್ದರು. ಅದಾದ ಬಳಿಕ ಅಶೋಕ್ ಹೆಂಡತಿಯಾಗಿ ಪ್ರಿಯಾ ಕಾಣಿಸಿಕೊಳ್ಳುತ್ತಾರೆ. ಸೀತಾ ರಾಮ ಹೇಗೆ ಜನರಿಗೆ ಹತ್ತಿರ ಆಗಿದ್ದಾರೋ ಆದೆ ರೀತಿ ಪ್ರಿಯಾ ಹಾಗೂ ಆಶೋಕ್ ಜೋಡಿ ಜನಗಳಿಗೆ ಮತ್ತಷ್ಟು ಹತ್ತಿರ ಆಗುತ್ತಿರುವುದು ಮಾತ್ರ ಅಷ್ಟೇ ಸತ್ಯ. ಇದೀಗ ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ಮೇಘನಾಗೆ ಶುಭ ಕೋರಿದ್ದಾರೆ.

Kannada serial actress Meghana Shankarappa introduced her fiance

ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ? ಮೇಘನಾ ಕಾಫಿ ಶಾಪ್‌ಗೆ ಹೋಗಿ ಕಾಫಿ ಆರ್ಡರ್ ಮಾಡುತ್ತಾರೆ. ಆದರೆ ಕಾಫಿಶಾಪ್‌ನವರು ಎರಡು ಕಾಫಿ ಕಪ್ ಅನ್ನು ಮೇಘನಾ ಮುಂದಿಡುತ್ತಾರೆ. ಆಗ ವ್ಯಕ್ತಿಯೊಬ್ಬರು ಕಾರಿನಿಂದ ಇಳಿದು ನೇರವಾಗಿ ಮೇಘನಾ ಇರುವಲ್ಲಿಗೆ ಬಂದು ಕಾಫಿಯನ್ನು ತನ್ನ ಕಡೆಗೆ ಎಳೆದುಕೊಂಡು ಕುಡಿಯುತ್ತಾರೆ. ಅವರನ್ನು ನೋಡಿ ನಟಿ ಮೇಘನಾ ಮುಗುಳುನಗೆ ಬೀರುತ್ತಾರೆ. ಹಾಗೆಯೇ ಆ ಹುಡುಗನ ಕೈಯನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಅವರಿಬ್ಬರೂ ಕಾಫಿ ಶಾಪ್‌ನಿಂದಾ ಹೊರಗಡೆ ಹೋಗುತ್ತಾರೆ. ಆ ವೇಳೆ "ಮೇಘಾ ಕರಗುವ ಸಮಯ.. ಹನಿ ನಾನು ಧ್ವನಿ ನೀನು.." ಎಂಬ ಸಣ್ಣ ಬರಹ ಎಲ್ಲರಿಗೂ ಕಾಣಿಸುತ್ತದೆ.

ಈ ವಿಡಿಯೋ ವೈರಲ್

ಅಷ್ಟಕ್ಕೂ ನಟಿ ಮೇಘನಾ ಶಂಕರಪ್ಪ ಜೊತೆ ಕಾಣಿಸಿಕೊಂಡು ಆ ವ್ಯಕ್ತಿ ಮತ್ತಾರೂ ಅಲ್ಲ ಅವರು ಮದುವೆ ಆಗುವ ಹುಡುಗ. ಅವರೇ ಜಯಂತ್ ಕುಮಾರಸ್ವಾಮಿ. ಜಯಂತ್ ಕುಮಾರಸ್ವಾಮಿ ಜೊತೆ ಮುಂದಿನ ವರ್ಷ ಅಂದರೆ, 2025 ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ ಬಳಿಕ One step closer to Forever ಎಂದೂ ಆ ವಿಡಿಯೋಗೆ ಕ್ಯಾಪ್ಷನ್‌ ನೀಡಿದ್ದಾರೆ. ಮೇಘನಾ ವರಿಸಲಿರುವ ಹುಡುಗನ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಮೇಘನಾ ಮದುವೆ ಆಗುವ ಹುಡುಗನನ್ನು ರಿವೀಲ್ ಮಾಡಿದರೂ, ವಿಡಿಯೋದಲ್ಲಿ ಅವರ ಹಿನ್ನೆಲೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ.

Kannada serial actress Meghana Shankarappa introduced her fiance

ಹಲವಾರು ಸಿನಿಮಾದಲ್ಲಿ ನಟಿಸಿರುವ ಮೇಘನಾ

ಮೇಘನಾ ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದಾರೆ. ಹಾಗೆಯೇ ಹಲವು ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ. 'ನಮ್ಮನೆ ಯುವರಾಣಿ', 'ಕಿನ್ನರಿ, ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಹಲವಾರು ಧಾರಾವಾಹಿಗಳಲ್ಲಿ ಮೇಘನಾ ಮಿಂಚಿದ್ದಾರೆ. ಇದೀಗ ಮೇಘನಾಗೆ ಸಾಕಷ್ಟು ಶುಭಾಶಯಗಳ ಮಹಾಪೂರಾ ಹರಿದು ಬುರುತ್ತಿದ್ದು, ಒಂಟಿಯಾಗಿದ್ದ ಮೇಘನಾ ಶಂಕ್ರಪ್ಪ ಇದೀಗ ಜಂಟಿ ಆಗುತ್ತಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿ ಶುಭ ಹಾರೈಸಿದ್ದಾರೆ.

More from Filmibeat

English summary
Kannada serial actress Meghana Shankarappa introduced her fiance;
Read more about: actress poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X