ಮನಾಲಿಯಲ್ಲಿ 'ಪಾರು': ಫ್ಯಾಮಿಲಿ ಜೊತೆ ಟ್ರಿಪ್‌ನಲ್ಲಿ ಏನೇನು ಮಾಡಿದ್ರು ಗೊತ್ತಾ ಮೋಕ್ಷಿತಾ ಪೈ?

By Poorva

ಚಳಿಗಾಲ ಬಂತೆಂದರೆ ಸಾಕು ಪ್ರವಾಸಿಗರಿಗಂತು ಬಹಳ ಖುಷಿ . ಚುಮು ಚುಮು ಚಳಿಯಲ್ಲಿ ಸುತ್ತಾಡುವುದು ಎಂದರೆ ಅದರ ಮಜವೇ ಬೇರೆ. ಚಳಿಯಲ್ಲಿ ಟ್ರಿಪ್ ಹೋಗುವುದು ಎಂದರೆ ಎಲ್ಲರಿಗೆ ಕೂಡ ಬಹಳ ಇಷ್ಟ. ಇದೀಗ 'ಪಾರು' ಖ್ಯಾತಿಯ ಮೋಕ್ಷಿತಾ ಪೈ ಮನಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಜೀ ಕನಡದಲ್ಲಿ ಪ್ರಸಾರ ಆಗುತ್ತಿರುವ ಪಾರು ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಮಿಂಚುತ್ತಿರುವ ನಟಿ ಮೋಕ್ಷಿರಾ ಪೈ ಮನಾಲಿಯಲ್ಲಿ ಎಂಜಾಯ್ ಮಾಡುತ್ತಾ ಇದ್ದಾರೆ. ಮೋಕ್ಷಿತಾ ಹಾಗೂ ಆಕೆಯ ಕುಟುಂಬ ಉತ್ತರ ಭಾರತಕ್ಕೆ ಟ್ರಿಪ್ ಹೋಗಿದ್ದಾರೆ. ಮನಾಲಿಯಲ್ಲಿ ಮಂಜಿನಲ್ಲಿ ಆಡಿ ಬಹಳ ಖುಷಿ ಪಡುತ್ತಿದ್ದಾರೆ.

Kannada serial actress Mokshitha Pai enjoying manali trip with Family

ಮಂಜು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಅದರಲ್ಲೂ ನಮ್ಮ ಪಾರುಗಂತು ಹಿಮದಲ್ಲಿ ಆಟ ಆಡುವುದೆಂದರೆ ಬಹಳ ಖುಷಿಯಂತೆ. ಅಲ್ಲಿನ ಸೌಂದರ್ಯವನ್ನ ನೋಡಿ ಮೋಕ್ಷಿತ ಬಹಳ ಖುಷಿಯಿಂದ ನಲಿದಾಡುತ್ತ ಇದ್ದಾರೆ. ನಟಿ ಮೋಕ್ಷಿತಾ 'ಪಾರು' ಪಾತ್ರದ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದಾರೆ. ಮೋಕ್ಷಿತಾ ಹೆಚ್ಚಿನ ಕಡೆ ಟ್ರಿಪ್ ಹೋಗಬೇಕಾದರೆ ಹೆಚ್ಚಾಗಿ ತನ್ನ ತಾಯಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ.

ಇದೀಗ ಕುಟುಂಬದವರ ಜೊತೆ ಮನಾಲಿ, ಚಂಡೀಗಢ ಹಾಗೂ ಮತ್ತಿತರ ಪ್ರದೇಶಕ್ಕೆ ತೆರಳಿ ಅಲ್ಲಿರುವಂತಹ ಪ್ರಕೃತಿಯ ರಮಣೀಯ ದೃಶ್ಯವನ್ನು ನೋಡಿ ಎಂಜಾಯ್ ಮಾಡುತ್ತಾ ಇದ್ದಾರೆ. ಹಾಗೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುತ್ತಾ ಇದ್ದಾರೆ. ಹಿಮಾಚಲ ಪ್ರದೇಶ, ಮನಾಲಿ, ಚಂಡೀಗಢದ ಸುಂದರ ಜಲಪಾತ, ಹಿಮ, ಕೋಟೆ, ಮೊದಲಾದ ಪ್ರವಾಸಿ ತಾಣಗಳಿಗೆ ತೆರಳಿ ಸ್ನೋನಲ್ಲಿ ಎಲ್ಲರ ಜೊತೆ ಆಟ ಆಡುತ್ತ ಯಾಚ್‌ನಲ್ಲಿ ಸವಾರಿ ಮಾಡಿದ್ದಾರೆ.

Kannada serial actress Mokshitha Pai enjoying manali trip with Family

ಸೋಷಿಯಲ್ ಮೀಡಿಯಾದಲ್ಲಿ ಮೋಕ್ಷಿತಾ ಸಖತ್ ಆಕ್ಟಿವ್ ಆಗಿರುತ್ತಾರೆ. ಆಗಾಗ ರೀಲ್ಸ್ ಹಾಕುತ್ತಾ ಇರುತ್ತಾರೆ. ಫೋಟೋಶೂಟ್ ಕೂಡ ಮಾಡಿಸಿ ಅಪ್ಲೋಡ್ ಮಾಡುತ್ತಾ ಇರುತ್ತಾರೆ. ಮನಾಲಿಯಲ್ಲಿ ಕೂಡ ಮೋಕ್ಷಿತಾ ಸಖತ್ ಎಂಜಾಯ್ ಮಾಡಿದ್ದು. ಫೋಟೋಗಳಲ್ಲಿ ಮಾತ್ರ ಬಹಳ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಪೀಚ್ ಬಣ್ಣದ ಉಲ್ಲನ್ ಡ್ರೆಸ್ ಮೇಲೆ, ಬ್ಲ್ಯಾಕ್ ಓವರ್ ಕೋಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಕೈಯಲ್ಲಿ ಗ್ಲೌಸ್, ಜೊತೆಗೆ ಕಣ್ಣಲ್ಲಿ ಗಾಗಲ್ಸ್ ಧರಿಸಿ ಬಹಳ ಸುಂದರವಾಗಿ ಕಾಣಿಸುತ್ತ ಇದ್ದಾರೆ.

ಕುಟುಂಬದ ಜೊತೆ ಪಾರು ಸಖತ್ ಎಂಜಾಯ್

ಪಾರು ಧಾರಾವಾಹಿಯಲ್ಲಿ ಸೀರೆಯಲ್ಲಿ ಹೆಚ್ಚಾಗಿ ಮೋಕ್ಷಿತಾ ಅವರನ್ನು ಕಾಣುತ್ತಿದ್ದ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತ ಇದ್ದ ಫೋಟೋ ನೋಡಿ ಸಖತ್ ಖುಷಿ ಆಗಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ಅದರ ಕೆಳಗೆ "ಸುಂದರವಾದ ವಿಷಯಗಳಾದ ನೆನಪುಗಳು ಮತ್ತು ಪ್ರತಿ ಕ್ಷಣಗಳು ಇವುಗಳನ್ನು ಹಣ ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ನೀವದನ್ನ ಎಂಜಾಯ್ ಮಾಡದೇ ಇದ್ದರೆ, ಅದು ಕಳೆದು ಹೋಗುತ್ತೆ" ಎಂದು ಬರೆದುಕೊಂಡಿದ್ದಾರೆ. ಮೋಕ್ಷಿತಾ ಹೆಚ್ಚಾಗಿ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುತ್ತಾ , ಅಲ್ಲಿನ ಸೊಗಡನ್ನು ನೋಡಿ ಎಂಜಾಯ್ ಮಾಡುತ್ತಾರೆ.

ಪ್ರಕೃತಿ ಎಂದರೆ ಮೋಕ್ಷಿತಾ ಪೈಗೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ನಟಿ ಮೋಕ್ಷಿತಾ ಪೈ ಎಲ್ಲೆ ಹೋದರು ಆಕೆಯ ತಾಯಿಯನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಇದೀಗ ತನ್ನ ಕುಟುಂಬದ ಜೊತೆ ಮನಾಲಿ ಟ್ರಿಪ್ ಎಂಜಾಯ್ ಮಾಡುತ್ತಾ ಇದ್ದಾರೆ.

More from Filmibeat

English summary
Serial actress Mokshitha Pai enjoying manali trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X