ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಖ್ಯಾತ ಕಿರುತೆರೆ ನಟಿ ನಯನಾ

ಕಿರುತೆರೆಯ ಖ್ಯಾತ ನಟಿ ನಯನಾ ಕೆ ಎಂ ಈಗ ತಾಯಿಯಾಗುತ್ತಿರುವ ಸಂತಸದಲ್ಲಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಯನಾ ಈಗ ಬಣ್ಣದ ಲೋಕದಿಂದ ಕೊಂಚ ಬ್ರೇಕ್ ತೆಗೆದುಕೊಂಡು, ತಾಯಿಯಾಗುತ್ತಿರುವ ಖುಷಿಯನ್ನು ಅನುಭವಿಸುತ್ತಿದ್ದಾರೆ.

ಇದೇ ಸಂತಸದಲ್ಲಿ ನಯನಾ ಅದ್ದೂರಿ ಫೋಟೋ ಶೂಟ್ ಮಾಡಿಸಿದ್ದಾರೆ. ತಹರೇವಾರಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವ ನಯನಾ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಈ ಮೂಲಕ ತಾಯಿಯಾಗುತ್ತಿರುವ ಸಂತಸದ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮೊನ್ನೆ ಮೊನ್ನೆವರಗು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದ ನಯನಾ ಈಗ ತಾಯಿಯಾಗುತ್ತಿರುವ ಪ್ರತಿಕ್ಷಣವನ್ನು ಅನುಭವಿಸುತ್ತಿದ್ದಾರೆ.

ತಾಪ್ಸಿ ಪಾತ್ರದ ಮೂಲಕ ಖ್ಯಾತಿ

ತಾಪ್ಸಿ ಪಾತ್ರದ ಮೂಲಕ ಖ್ಯಾತಿ

ನಯನಾ ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯಲ್ಲಿ ಮಿಂಚುತ್ತಿದ್ದರು. ಈ ಧಾರಾವಾಹಿಯಲ್ಲಿ ತಾಪ್ಸಿ ಪಾತ್ರದ ಮೂಲಕ ಕಿರುತೆರೆ ಅಭಿಮಾನಿಗಳ ಮನಗೆದ್ದಿದ್ದರು. ನಯನಾ ಎನ್ನುವುದಕ್ಕಿಂತ ತಾಪ್ಸಿ ಎಂದ್ರೇನೆ ಯಾರು ಅಂತ ಬೇಗ ಗೊತ್ತಾಗುತ್ತೆ.

ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ

ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯ

'ಚಿಕ್ಕಮ್ಮ' ಧಾರಾವಾಹಿಯ ಮೂಲಕ ಧಾರಾವಾಹಿ ಲೋಕಕ್ಕೆ ಕಾಲಿಟ್ಟ ನಯನಾ ನಂತರ 'ಮನೆದೇವ್ರು' ಸೀರಿಯಲ್ ನಲ್ಲಿ ಮಿಂಚಿದ್ರು. ಖಳ ನಟಿಯಾಗಿ ಕಿರುತೆರೆ ಪ್ರಿಯರ ಮನೆಗೆ ಎಂಟ್ರಿ ಕೊಡುತ್ತಿದ್ದರು. ನಯನಾ ನಟಿಯಾಗಬೇಕೆಂದು ಯಾವತ್ತು ಅಂದುಕೊಂಡರಲಿಲ್ಲವಂತೆ. ಅಕಸ್ಮಾತ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಯನಾ ನಂತರ ಧಾರಾವಾಹಿ ಲೋಕದಲ್ಲೆ ಪ್ರಸಿದ್ಧಿ ಪಡೆದರು.

ವಿಲನ್ ಪಾತ್ರದ ಮೂಲಕ ಖ್ಯಾತಿ

ವಿಲನ್ ಪಾತ್ರದ ಮೂಲಕ ಖ್ಯಾತಿ

'ಚಿಕ್ಕಮ್ಮ', 'ಮನೆದೇವ್ರು', 'ಗಾಳಿಪಟ', 'ಪುಟ್ಟಗೌರಿ', 'ವಸುದೈವ ಕುಟುಂಬ', 'ಕನಕ', 'ಕರ್ಪೂರದ ಬೊಂಬೆ', 'ವಾರಾಸ್ದಾರ' ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ ನಯನಾ. ಕೊನೆಯದಾಗಿ ಸತ್ಯ ಶಿವಂ ಸುದಂರಂ ಧಾರಾವಾಹಿಯಲ್ಲಿ ಮಿಂಚುತ್ತಿದ್ದರು. ವಿಶೇಷ ಅಂದ್ರೆ ವಿಲನ್ ಪಾತ್ರದ ಮೂಲಕವೇ ಹೆಚ್ಚು ಖ್ಯಾತಿಗಳಿಸಿದ್ದಾರೆ.

ಎಂಟು ತಿಂಗಳ ಗರ್ಭಿಣಿ

ಎಂಟು ತಿಂಗಳ ಗರ್ಭಿಣಿ

ಸದ್ಯ ಬಣ್ಣದ ಲೋಕಕ್ಕೆ ತಾತ್ಕಾಲಿಕ ಗುಡ್ ಬೈ ಹೇಳಿರುವ ನಯನಾ ತಾಯಿಯಾಗುತ್ತಿರುವ ಖುಷಿಯನ್ನು ಪ್ರತೀ ಕ್ಷಣ ಎಂಜಾಯ್ ಮಾಡುತ್ತಿದ್ದಾರೆ. ಎಂಟು ತಿಂಗಳ ತುಂಬು ಗರ್ಭಿಣಿ ಆಗಿರುವ ನಯನಾ ಮೊದಲ ಮಗುವಿಗಾಗಿ ಕಾಯುತ್ತಿದ್ದಾರೆ.

More from Filmibeat

English summary
Kannada serial actress Nayana K M shared a pregnancy news in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X