ತನ್ನ ಮಗುವಿಗೆ ದೇವಿಯ ಹೆಸರಿಟ್ಟ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಗೊಂಬೆ ನಟಿ ನೇಹಾ ಗೌಡ!

By ಅನಿತಾ ಬನಾರಿ

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ನಟಿ ನೇಹಾ ಗೌಡ ಮನೆಮಗಳಿದ್ದಂತೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನಾಯಕಿ ಗೊಂಬೆ ಉರುಫ್ ಶ್ರುತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನೇಹಾ ಗೌಡ ಸಹಜ ನಟನೆಯ ಮೂಲಕ ಜನಮನ ಗೆದ್ದ ಬೆಡಗಿ‌. ಇಂದು ಈಕೆ ಕಿರುತೆರೆಯಿಂದ ದೂರವಿದ್ದರೂ ಪ್ರೇಕ್ಷಕರಿಗೆ ಮಾತ್ರ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು.

ಎರಡು ವರ್ಷದ ಹಿಂದೆ ತನ್ನ ಬಾಲ್ಯ ಗೆಳೆಯನಾದ ಚಂದನ್ ಗೌಡ ಅವರನ್ನು ವರಿಸಿದ ನಟಿ ನೇಹಾ ಗೌಡ ಬಿಗ್ ಬಾಸ್, ರಾಜ ರಾಣಿ ಸೇರಿದಂತೆ ಒಂದೆರಡು ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡರು. ಇದೀಗ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ಇತ್ತೀಚೆಗಷ್ಟೇ ಮಗುವಿಗೆ ನಾಮಕರಣ ಮಾಡಿದ್ದಾರೆ.

Kannada serial actress Neha Gowda has named her daughetr as Sharada

ನೇಹಾ ಗೌಡ - ಚಂದನ್ ದಂಪತಿಗೆ ಅವರ ಇಚ್ಛೆಯಂತೆ ಹೆಣ್ಣು ಮಗು ಆಗಿರುವುದು ಬಹಳ ಸಂತಸ ತಂದಿದೆ. 2024 ನವೆಂಬರ್ ನಲ್ಲಿ ಹುಟ್ಟಿದ ಇವರ ಮಗುವಿಗೆ ಇದೀಗ ನಾಮಕರಣ ಮಾಡಿದ್ದು ಬಹಳ ಸಾಂಪ್ರದಾಯಿಕ ಹೆಸರನ್ನು ಇಟ್ಟಿದ್ದಾರೆ ನಟಿ ನೇಹಾ ಗೌಡ. ಹೌದು, ತನ್ನ ಮಗುವಿನ ನಾಮಕರಣದ ವಿಚಾರವಾಗಿ ಒಂದಷ್ಟು ಮಾಹಿತಿ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ನೇಹಾ ಹಾಗೂ ಚಂದನ್ ಗೌಡ ದಂಪತಿ.

ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಯುತ್ತಿದ್ದಂತೆ ಫ್ಯಾನ್ಸ್ ಬಹಳ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಂತೂ ಎಲ್ಲರೂ ತಮ್ಮ ಮಕ್ಕಳಿಗೆ ಬಹಳ ನವ ನವೀನ ಹಾಗೂ ವಿಭಿನ್ನ ಹೆಸರನ್ನು ಇಡುವ ಟ್ರೆಂಡ್‌ನಲ್ಲಿದ್ದಾರೆ. ಬಹಳ ಚಿಕ್ಕದಾಗಿ ಯಾರೂ ಕೇಳಿರದ ಹೆಸರುಗಳೇ ಇಂದು ಟ್ರೆಂಡ್‌ನಲ್ಲಿದೆ. ಹೀಗಿರುವಾಗ ನಟಿ ನೇಹಾ ಗೌಡ ಅವರು ತಮ್ಮ ಮಗುವಿಗೆ ಶಾರದಾ ಎಂಬ ಬಹಳ ಸಾಂಪ್ರದಾಯಿಕ ಹೆಸರನ್ನು ಇಟ್ಟು ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.

Kannada serial actress Neha Gowda has named her daughetr as Sharada

ಈ ಮಾಹಿತಿಯನ್ನು ತಿಳಿಯುತ್ತಿದ್ದಂತೆ ಹಲವಾರು ಅಭಿಮಾನಿಗಳು ಬಹಳ ಸಂತಸ ವ್ಯಕ್ತಪಡಿಸಿದ್ದು, ಒಂದಷ್ಟು ಜನ ಸಾಂಪ್ರದಾಯಿಕ ಹೆಸರು, ಹಳೆ ಹೆಸರು ಎಂಬಿತ್ಯಾದಿ ಕಾಮೆಂಟ್‌ ಮಾಡಿದ್ದಾರೆ. ನೇಹಾ ಹಾಗೂ ಚಂದನ್ ಅವರ ಹೆಸರಿನ ಆಯ್ಕೆ ಬಗ್ಗೆ ಹಲವಾರು ಜನ ಶುಭ ಕೋರಿದ್ದು ಈ ರೀತಿಯ ವಿಭಿನ್ನ ಹೆಜ್ಜೆಗೆ, ಸಂತಸ ವ್ಯಕ್ತಪಡಿಸಿದ್ದಾರೆ.

ನೇಹಾ ಗೌಡ ಅವರು ತಮ್ಮ ಮಗುವಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮಗು ಬಹಳ ಮುದ್ದಾಗಿದೆ. ಇನ್ನೊಂದಿಷ್ಟು ಫೋಟೋಸ್ ಶೇರ್ ಮಾಡಿ ಎಂಬ ಬೇಡಿಕೆಯನ್ನು ಅಭಿಮಾನಿಗಳಿಂದ ಪಡೆದಿದ್ದಾರೆ.

ಇನ್ನು 'ನಮ್ಮ ಲಚ್ಚಿ' ಧಾರಾವಾಹಿ ನಂತರ ನೇಹಾ ಗೌಡ ಅವರು ವೈವಾಹಿಕ ಜೀವನ ಹಾಗೂ ತಾಯ್ತನದ ಕಡೆಗೆ ಹೆಚ್ಚಿನ ಗಮನಹರಿಸಿದ್ದರಿಂದ ಅಭಿನಯದಿಂದ ದೂರವೇ ಉಳಿದಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಸ್ನೇಹ ಗೌಡ ಅವರಿಗೆ ಮತ್ತೆ ಆಕ್ಟಿಂಗ್ ನತ್ತ ಮುಖ ಮಾಡಲು ಕಾಮೆಂಟ್‌ಗಳ ಮೂಲಕ ಕೇಳಿಕೊಂಡಿದ್ದಾರೆ. ಇನ್ನು ನಟಿ ನೇಹಾ ಗೌಡ ಅವರ ಪತಿ ನಟ ಚಂದನ್ ಗೌಡ ಅವರು ಕೂಡ 'ಅಂತರಪಟ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಚೆನ್ನಾಗಿ ಪರಿಚಯವಿದ್ದಾರೆ.

More from Filmibeat

English summary
Kannada serial actress Neha Gowda has named her baby as Sharada;
Read more about: actress serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X