ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನೇಹಾ ಗೌಡ: ಶಾಕುಂತಲೆ ಅವತಾರದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನೇಹಾ ಗೌಡ ಹಾಗೂ ಚಂದನ್ ದಂಪತಿ ಇದ್ದಾರೆ. ಈಗಾಗಲೇ ನೇಹಾ ಗೌಡ ಅವರ ಸೀಮಂತ ಬಹಳ ಅದ್ದೂರಿಯಾಗಿ ನಡೆದಿದೆ. ಇದೇ ವೇಳೆ ಸುಂದರವಾದ ಫೋಟೋಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ. ಕನ್ನಡ ನೇಹಾ ಗೌಡ ಪ್ರೆಗ್ನೆನ್ಸಿ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಮೂಲಕ ಧಾರಾವಾಹಿ ಲೋಕಕ್ಕೆ ಕಾಲಿಟ್ಟಿದ್ದ ನಟಿ ಈ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಕಿರುತೆರೆ ಲೋಕದಲ್ಲಿ ನಟಿ ನೇಹಾ ಗೌಡ ಅವರನ್ನು ಗೊಂಬೆ ಅಂತಲೇ ಕರೆಯುತ್ತಾರೆ. ಈಗಾಗಲೇ ನಟಿ ಕವಿತಾ, ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರದಲ್ಲಿ ಕವಿತಾ ಗೌಡ ಅವರು ಕಾಣಿಸಿಕೊಂಡಿದ್ದರು.

ಇದೇ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಕೂಡ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಒಂದೇ ಧಾರಾವಾಹಿಯ ಇಬ್ಬರು ನಟಿಯರು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಪೋಷಕರಾಗುತ್ತಿದ್ದು, ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.
ತುಂಬು ಗರ್ಭಿಣಿಯಾಗಿರುವ ನೇಹಾ ಗೌಡ ಪ್ರೆಗ್ನೆನ್ಸಿ ಫೋಟೊಶೂಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಬಹಳ ಸುಂದರವಾಗಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ತಿಳಿ ಬಿಳಿ ಸೀರೆ ಉಟ್ಟುಕೊಂಡು ಪಕ್ಕಾ ಶಾಕುಂತಲೆ ರೀತಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳ್ನು ನೋಡಿ ಹಲವಾರು ಅಭಿಮಾನಿಗಳು ನಿಮ್ಮ ಫೋಟೋ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಶಾಕುಂತಲೆ ನ್ಯೂ ವರ್ಷನ್, ಆರಾಮವಾಗಿ ಹೆರಿಗೆಯಾಗಲಿ ಎಂದು ಅನೇಕರು ಕಾಮೆಂಟ್ ಮಾಡಿದ್ಧರೆ, ಇನ್ನು ಕೆಲವರು ನೇಹಾ ಅವರೇ ನಿಮಗೆ ಹೆಣ್ಣು ಮಗು ಆಗುತ್ತದೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ನೇಹಾ ಫೋಟೋಶೂಟ್‌ಗೆ ಫ್ಯಾನ್ಸ್ ಮೆಚ್ಚುಗೆ
ನೇಹಾ ಗೌಡ ನೋಡಿದ ಅಭಿಮಾನಿಗಳಿಗೆ ಬಹಳ ಖುಷಿ ಕೂಡ ಆಗಿದೆ. ಶಾಕುಂತಲೆ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿರುವ ನೇಹ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ನೇಹಾ ಗೌಡ ಅವರು ಒಂದು ಕೈಯಲ್ಲಿ ತಾವರೆ ಕೈಯಲ್ಲಿ ಹಿಡಿದೂ, ಇನ್ನೊಂದು ಕೈಯನ್ನು ತನ್ನ ಹೊಟ್ಟೆಯ ಮೇಲೆ ಇಟ್ಟುಕೊಂಡು ಇಟ್ಟುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ತಲೆಗೆ ಮಲ್ಲಿಗೆ ಹೂವು ಮುಡಿದುಕೊಂಡು , ಕಿವಿಗೆ ಜುಮುಕಿ ಧರಿಸಿ, ಕುತ್ತಿಗೆಗೆ ನೆಕ್ಲೆಸ್ ಧರಸಿ ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೆಚ್ಚುಗೆ
ಇನ್ನು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ನೇಹಾ ಗೌಡ ಸದಾ ಒಂದಲ್ಲ ಒಂದು ಹೊಸ ಫೋಟೊ ಹಾಕುತ್ತಿದ್ದಾರೆ. ಇನ್ನು ನೇಹಾ ಗೌಡ ಹಾಗೂ ಚಂದನ್ ಪ್ರೀತಿಸಿ ಮದುವೆಯಾದ ಜೋಡಿ. ಈ ವಿಚಾರವನ್ನು ನೇಹಾ ಅದೆಷ್ಟೋ ಬಾರಿ ಹೇಳಿದ್ದಾರೆ ಕೂಡ. ಇದೀಗ ಚಂದನ್ 'ಅಂತರಪಟ' ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದು ಈಗಾಗಲೇ ಈ ಧಾರಾವಾಹಿ ಕೊನೆಯ ಹಂತ ಬಂದು ತಲುಪಿದೆ.


Click it and Unblock the Notifications











