For Quick Alerts
  ALLOW NOTIFICATIONS  
  For Daily Alerts

  'ಗಟ್ಟಿಮೇಳ' ನಟಿ ನಿಶಾ ಹೊಸ ಧಾರಾವಾಹಿಯಲ್ಲಿ ಕೃತಿ ಶೆಟ್ಟಿ: ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  |

  ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ 'ಗಟ್ಟೇಮೇಳ' ಕೂಡ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಈಗಾಗಲೇ ಕನ್ನಡ ಪ್ರೇಕ್ಷಕರ ಮನಗೆದಿದ್ದೆ. ಈ ಧಾರಾವಾಹಿಯ ನಟಿ ನಿಶಾ ಈಗ ಕನ್ನಡಿಗರ ಮನೆಮಾತಾಗಿದ್ದಾರೆ. ನಿಶಾ ಎನ್ನುವುದಕ್ಕಿಂತ ಅಮೂಲ್ಯ ಎಂದರೆ ಥಟ್ ಅಂತ ಎಲ್ಲರಿಗೂ ಗೊತ್ತಾಗುತ್ತದೆ. ಅಮೂಲ್ಯ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆ ಕಡೆ ಮುಖ ಮಾಡಿದ್ದಾರೆ.

  ಅಂದಹಾಗೆ ಇತ್ತೀಚಿಗೆ ಅನೇಕ ಕನ್ನಡದ ಕಲಾವಿದರು ತೆಲುಗು ಕಿರುತೆರೆ ಕಡೆ ಮುಖಮಾಡಿದ್ದಾರೆ. ಪ್ರಸಿದ್ಧ ಧಾರಾವಾಹಿಗಳಲ್ಲಿ ಕನ್ನಡಿಗರು ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಖ್ಯಾತಿಗಳಿಸುತ್ತಿದ್ದಂತೆ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕನ್ನಡದ ಅನೇಕ ನಟ-ನಟಿಯರು ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಅದೇ ಸಾಲಿಗೆ ನಟಿ ನಿಶಾ ಕೂಡ ಸೇರಿದ್ದಾರೆ.

  ಇತ್ತೀಚಿಗೆ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ಮಾಡುತ್ತಿದ್ದ ನಟಿ ಅಶ್ವಿನಿ ತೆಲುಗು ಧಾರಾವಾಹಿ ಲೋಕಕ್ಕೆ ಕಾಲಿಟ್ಟಿದ್ದರು. ನಾಗಭೈರವಿ ಧಾರಾವಾಹಿ ಮೂಲಕ ಅಶ್ವಿನಿ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಶ್ವಿನಿ ಎಂಟ್ರಿ ಕೊಟ್ಟ ಬೆನ್ನಲ್ಲೇ ಈಗ ನಿಶಾ ಕೂಡ ತೆಲುಗು ಕಡೆ ಮುಖ ಮಾಡಿದ್ದಾರೆ. ಮುಂದೆ ಓದಿ...

  ತೆಲುಗು ಕಿರುತೆರೆಯಲ್ಲಿ ಕನ್ನಡ ನಿಶಾ

  ತೆಲುಗು ಕಿರುತೆರೆಯಲ್ಲಿ ಕನ್ನಡ ನಿಶಾ

  ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಿಶಾ ಇದೀಗ ದಿಢೀರ್ ಅಂತ ತೆಲುಗು ಕಡೆ ಮುಖಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ತೆಲುಗು ಧಾರಾವಾಹಿ ಒಂದರಲ್ಲಿ ನಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಈಗಾಗಲೇ ಧಾರಾವಾಹಿಯ ಪೋಮೋ ಕೂಡ ಬಿಡುಗಡೆಯಾಗಿದೆ.

  'ಮತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಿಶಾ

  'ಮತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಿಶಾ

  ರೌಡಿ ಬೇಬಿಯಾಗಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ನಿಶಾ ಈಗ 'ಮತ್ಯಮಂತ ಮುದ್ದು' ಎನ್ನುವ ಧಾರಾವಾಹಿ ಮೂಲಕ ತೆಲುಗಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಧಾರಾವಾಹಿಯ ಪ್ರೋಮೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಂದಹಾಗೆ ಈ ಧಾರಾವಾಹಿ ಪ್ರೋಮೋದಲ್ಲಿ 'ಉಪ್ಪೇನಾ' ಸಿನಿಮಾದ ನಟಿ, ಕನ್ನಡತಿ ಕೃತಿ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.

  ಕೃತಿ ಶೆಟ್ಟಿ ಜೊತೆ ನಿಶಾ ಮಿಂಚಿಂಗ್

  ಕೃತಿ ಶೆಟ್ಟಿ ಜೊತೆ ನಿಶಾ ಮಿಂಚಿಂಗ್

  ಕೆಂಪು ಮತ್ತು ಹರಿಸು ಬಣ್ಣದ ದಾವಣಿಯಲ್ಲಿ ಮಿಂಚಿರುವ ಕೃತಿ ನಿಶಾ ಜೊತೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಧಾರಾವಾಹಿಯ ಮದುವೆ ದೃಶ್ಯದ ಪ್ರೋಮೋ ಇದಾಗಿದ್ದು, ಕೃತಿ ಮತ್ತು ನಿಶಾ ಇಬ್ಬರು ಮಿಂಚಿದ್ದಾರೆ. ಅಂದಹಾಗೆ ಕೃತಿ ಕೂಡ ಕಿರುತೆರೆಗೆ ಬಂದ್ರಾ ಅಂತ ಅಚ್ಚರಿ ಪಡಬೇಡಿ.ಈ ಧಾರಾವಾಹಿಯ ಪ್ರಮೋಷನ್ ಗಾಗಿ ಕೃತಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

  ಗಮನ ಸೆಳೆಯುತ್ತಿದೆ ಪ್ರೋಮೋ

  ಗಮನ ಸೆಳೆಯುತ್ತಿದೆ ಪ್ರೋಮೋ

  ಈ ಮೂಲಕ ನಿಶಾ ಮತ್ತು ಕೃತಿ ಇಬ್ಬರು ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಬರ್ತಿರುವ ಧಾರಾವಾಹಿ ಈಗ ತೆಲುಗು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ತೆಲುಗಿನಲ್ಲಿ ಈ ಧಾರಾವಾಹಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅಲ್ಲೂ ಕೂಡ ರೌಡಿ ಬೇಬಿ ಅಮೂಲ್ಯ ಪಟಪಟ ಅಂತ ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಆಶೀರ್ವಾದ ಇರಲಿ ಎಂದ ನಿಶಾ

  ಆಶೀರ್ವಾದ ಇರಲಿ ಎಂದ ನಿಶಾ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿಶಾ, ಪ್ರೋಮೋ ಶೇರ್ ಮಾಡಿ, ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ ಎಂದು ಕೇಳಿಕೊಂಡಿದ್ದಾರೆ. ನಿಶಾಗೆ ಸ್ನೇಹಿತರು ಮತ್ತು ಅಭಿಮಾನಿಗಳು ಶುಭಹಾರೈಸಿದ್ದಾರೆ.

  ಧಾರಾವಾಹಿ ಪ್ರಮೋಷನ್ ನಲ್ಲಿ ಬೇಡಿಕೆಯ ನಟಿ ಕೃತಿ

  ಧಾರಾವಾಹಿ ಪ್ರಮೋಷನ್ ನಲ್ಲಿ ಬೇಡಿಕೆಯ ನಟಿ ಕೃತಿ

  ಇನ್ನು ನಟಿ ಕೃತಿ ಶೆಟ್ಟಿ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಬ್ರೇಕ್ ಪಡೆದವರು. ಉಪ್ಪೇನಾ ಸೂಪರ್ ಸಕ್ಸಸ್ ಆಗುತ್ತಿದ್ದಂತೆ ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಕೃತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಟ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾವನ್ನು ಮುಗಿಸಿದ್ದಾರೆ. ಈ ನಡುವೆ ಧಾರಾವಾಹಿ ಪ್ರಮೋಷನ್ ಗೆ ಬಂದಿರುವ ಕೃತಿ ಭರ್ಜರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

  ಪ್ರೋಮೋದಲ್ಲಿ ನಟಿಸಲು ಕೃತಿ ಪಡೆದ ಸಂಭಾವನೆ ಎಷ್ಟು?

  ಪ್ರೋಮೋದಲ್ಲಿ ನಟಿಸಲು ಕೃತಿ ಪಡೆದ ಸಂಭಾವನೆ ಎಷ್ಟು?

  ಪ್ರೋಮೋದಲ್ಲಿ ನಟಿಸಲು ಕೃತಿ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ತೆಲುಗಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹೊಂದಿರುವ ಕೃತಿ ತನ್ನ ಸಿನಿಮಾಗಿಂತ ಹೆಚ್ಚಿನ ಸಂಭಾವನೆ ಜೀಬಿಗಿಳಿಸಿರುವುದು ಅಚ್ಚರಿ ಮೂಡಿಸಿದೆ.

  English summary
  Kannada Famous serial Actress Nisha Ravi Krishna enters to Telugu serial.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X