ಗಗನ ಸಖಿ ಕನಸು ಕಂಡ ಅಭಿನಯಕ್ಕೆ ಬಂದ ನಟಿ ಪಲ್ಲವಿ ಗೌಡ!

By ಪ್ರಿಯಾ ದೊರೆ

ಸವಿರುಚಿ ಕಾರ್ಯಕ್ರಮದ ಮೂಲಕ ಕಿರುತೆರೆಯಲ್ಲಿ ಚಿರಪರಿಚಿತರಾದ ಪಲ್ಲವಿ ಗೌಡ ಈಗ ಬಹುಬೇಡಿಕೆಯ ನಟಿ. ಕನ್ನಡದ ಕಿರುತೆರೆಯಲ್ಲಿ ಹಲವು ವರ್ಷಗಳ ಕಾಲ ಅಭಿನಯಿಸಿದ್ದಾರೆ. ಬಹುತೇಕ ಧಾರಾವಾಹಿಗಳಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದು, ಖಳನಾಯಕಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಕೇವಲ ಕಿರುತೆರೆಗಷ್ಟೇ ಮೀಸಲಾಗಿರದ ಪಲ್ಲವಿ ಗೌಡ, ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಹಲವು ಸಿನಿಮಾಗಳಲ್ಲಿ ಮಿಂಚಿದ್ದು, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗು, ಮಲಯಾಳಂ ಭಾಷೆಗಳಲ್ಲೂ ಪಲ್ಲವಿ ಗೌಡ ನಟಿಸಿದ್ದಾರೆ.

ಸದಾ ಆಕ್ಟಿವ್ ಆಗಿರುವ ಪಲ್ಲವಿ ಗೌಡ ಅವರು ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಏಕಕಾಲಕ್ಕೆ ಎರಡರಿಂದ ಮೂರು ಸೀರಿಯಲ್‌ಗಳಲ್ಲಿ ಒಟ್ಟಿಗೆ ನಟಿಸುತ್ತಾರೆ. ಕಿರುತೆರೆಯಲ್ಲಿ ಈ ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ ಪಲ್ಲವಿ ಗೌಡ.

ಪಲ್ಲವಿಗೆ ಗಗನ ಸಖಿ ಕನಸು!

ಗಗನಸಖಿ ಆಗಿ ಆಗಸದಲ್ಲಿ ಹಾರಾಡಬೇಕು ಎಂದು ಕನಸು ಕಂಡಿದ್ದ ಕಿರುತೆರೆ ನಟಿ ಪಲ್ಲವಿ ಗೌಡ, ಆಕ್ಟರ್‌ ಆಗಿದ್ದಾರೆ. ಅಚಾನಕ್ ಆಗಿ ನಟನಾ ಲೋಕಕ್ಕೆ ಕಾಲಿಟ್ಟ ಪಲ್ಲವಿ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅತಿ ಹೆಚ್ಚು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಲ್ಲವಿ ನಟನೆಯ ಜೊತೆಗೆ ನೃತ್ಯವನ್ನು ಕೂಡ ಮಾಡುತ್ತಾರೆ. ಇನ್ನು ಪಲ್ಲವಿ ಗೌಡಗೆ ಕಿರುತೆರೆಯಲ್ಲಿ ಅತ್ಯಂತ ಬೇಡಿಕೆ ಇದ್ದು, ಒಟ್ಟೊಟ್ಟಿಗೆ ಎರಡೆರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಮುಖ್ಯ ಪಾತ್ರಗಳಲ್ಲಿ ಅಭಿನಯ!

ಪಲ್ಲವಿ ಗೌಡ ಅವರು ನೋಡುವುದಕ್ಕೆ ಸೌಂದರ್ಯದ ಗಣಿಯಂತೆಯೇ ಕಾಣುತ್ತಾರೆ. ಪುಟ್ಟ ಮುಖದ ಮುದ್ದು ಚೆಲುವೆ ಪಲ್ಲವಿ ಗೌಡ. ಕನ್ನಡ ಕಿರುತೆರೆಯಲ್ಲಿ 'ಚಂದ್ರ ಚಕೋರಿ', 'ಮನೆಯೊಂದು ಮೂರು ಬಾಗಿಲು', 'ಗಾಳಿಪಟ', 'ಸೇವಂತಿಗೆ', 'ಜೋಡಿಹಕ್ಕಿ', 'ಪರಿಣಯ', ಸೇರಿದಂತೆ ಹಲವು ಮೆಗಾ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ನಟಿಸಿರುವ ಪಲ್ಲವಿ 'ಪಸುಕು ಕುಂಕುಮ', 'ಅಲ್ಲಿ ಆಂಬೆಲ್', 'ಚದುರಂಗಂ' ಮುಂತಾದ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

ನಾಯಕಿ, ಖಳನಾಯಕಿ ಪಾತ್ರದಲ್ಲಿ ಮಿಂಚು!

ತೆಲುಗಿನ ಕಿರುತೆರೆಯಿಂದ ಪಲ್ಲವಿ ಗೌಡಗೆ ಆಫರ್ ಬಂದಾಗ ಭಾಷೆ ಬರುತ್ತಿರಲಿಲ್ಲವಂತೆ. ಆದರೆ, ನಟನೆ ಆರಂಭಿಸಿದ ಹದಿನೆಂಟೇ ದಿನಕ್ಕೆ ತೆಲುಗು ಕಲಿತಿದ್ದು ಹೆಮ್ಮೆಯ ವಿಷಯವೇ ಸರಿ. 'ಜೋಡಿಹಕ್ಕಿ'ಯಲ್ಲಿ ನೆಗೆಟಿವ್‌ ಪಾತ್ರದಲ್ಲಿ ನಟಿಸಿರುವ ಪಲ್ಲವಿಗೆ ನಾಯಕಿ ಹಾಗೂ ಖಳನಾಯಕಿ ಪಾತ್ರಗಳೆರಡೂ ಒಲಿದು ಬರುತ್ತಿವೆ. ಇನ್ನು ಪಲ್ಲವಿಗೆ ಖಳನಾಯಕಿ ಪಾತ್ರಗಳೆಂದರೆ ಇಷ್ಟವಂತೆ.

ಸಿನಿಮಾಗಳಲ್ಲಿ ಪಲ್ಲವಿ ಅಭಿನಯ!

ಇಂದಿಗೂ ಪಲ್ಲವಿ ಗೌಡ ' ಸೇವಂತಿ', 'ನಂದಿನಿ' ಹೆಸರಿನ ಮೂಲಕವೇ ಚಿರಪರಿಚಿತ. ಸಿನಿಮಾಗಳಲ್ಲೂ ನಟಿಸಿದ್ದು, 'ಪ್ರೇಮ ಗೀಮ ಜಾನೆ ದೋ' ಚಿತ್ರದ ಮೂಲಕ ಪಲ್ಲವಿ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟರು. ಬಳಿಕ 'ಕಿಡಿ', 'ಕೊಡೆ ಮುರುಗ', 'ಜೋಡಿಹಕ್ಕಿ' ಹಾಗೂ 'ನಮ್ ಗಣಿ ಬಿಕಾಂ ಪಾಸು' ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ಕೂಡ ಪಲ್ಲವಿ ಗೌಡ ಹೊಂದಿದ್ದಾರೆ. ಅವಕಾಶ ಸಿಕ್ಕರೆ, ಸಿನಿಮಾರಂಗದಲ್ಲೇ ಉಳಿಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
kannada Serial Actress Pallavi Gowda Biography And Life Story Is Here, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X