»   » ಕಿರುತೆರೆ ನಟಿ ರಜಿನಿ ಯಶಸ್ಸಿನ ಹಿಂದೆ ಮರೆಯಲಾಗದ ನೋವಿದೆ

ಕಿರುತೆರೆ ನಟಿ ರಜಿನಿ ಯಶಸ್ಸಿನ ಹಿಂದೆ ಮರೆಯಲಾಗದ ನೋವಿದೆ

Posted By:
Subscribe to Filmibeat Kannada

ಕಿರುತೆರೆಯಲ್ಲಿ ಜನಪ್ರಿಯತೆಗಳಿಸಿರುವ ನಟಿಯರ ಪೈಕಿ ರಜಿನಿ ಕೂಡ ಒಬ್ಬರು. 'ಅಮೃತ ವರ್ಷಿಣಿ' ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರಜಿನಿ ಎಲ್ಲರ ಮನೆ ಮಗಳಾಗಿದ್ದಾರೆ. ಈ ಹಂತ ತಲುಪುವುದಕ್ಕೆ ರಜಿನಿ ತುಂಬ ಕಷ್ಟಪಟ್ಟಿದ್ದಾರೆ.

ಭುವನ್ ಬಳಿಕ ಕೀರ್ತಿ ಜೊತೆ ಕಿರಿಕ್ ಮಾಡಿಕೊಂಡ ಪ್ರಥಮ್!

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಅತಿಥಿಯಾಗಿ ನಟಿ ರಜಿನಿ ಆಗಮಿಸಿದ್ದರು. ಈ ವೇಳೆ ರಜಿನಿ ತಮ್ಮ ಕಷ್ಟದ ದಿನದ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದ ನಡುವೆ ಅಕುಲ್ ನಿಮ್ಮ ಬಗ್ಗೆ ಯಾರಿಗೂ ತಿಳಿಯದ ಒಂದು ವಿಷಯ ಹೇಳಿ ಅಂತ ಹೇಳಿದ್ದರು.

Kannada serial actress Rajini In 'Super Talk Time'

ಆಗ ರಜಿನಿ 'ನಾನು ಮೊದಲು ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡುತ್ತಿದೆ. ಆಗ ತುಂಬ ಕಷ್ಟ ಇತ್ತು. ಕಾರ್ಯಕ್ರಮ ಮುಗಿಸಿ ಮನೆಗೆ ಬರುವುದಕ್ಕೆ ಯಾವುದೇ ವಾಹನ ವ್ಯವಸ್ಥೆಯನ್ನು ಮಾಡಿಕೊಡುತ್ತಿರಲಿಲ್ಲ. ಆಗ ನಾನು ಕೆ.ಆರ್.ಮಾರ್ಕೆಟ್ ನಿಂದ ಬಸವೇಶ್ವರ ನಗರಕ್ಕೆ ನಡೆದುಕೊಂಡು ಹೋಗುತ್ತಿದ್ದೆ' ಎಂದು ತಮ್ಮ ಕಷ್ಟದ ದಿನವನ್ನು ನೆನೆದು ಭಾವುಕರಾದರು.

Kannada serial actress Rajini In 'Super Talk Time'

ಅಂದ್ಹಾಗೆ, 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದ ಈ ಸಂಚಿಕೆಯಲ್ಲಿ ರಜಿನಿ ಅವರೊಂದಿಗೆ ನಟ ಪ್ರವೀಣ್ ಮತ್ತು ನಿರೂಪಕಿ ಅನುಪಮ ಭಾಗಿಯಾಗಿದ್ದರು.

Read more about: tv
English summary
Kannada serial actress Rajini reveals his struggling days In Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada